ಕ್ರಿಕೆಟ್: ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡಕ್ಕೆ ರೋಚಕ ಗೆಲುವು


ಆಲೂರು, ಸೆಪ್ಟೆಂಬರ್ 11: ಆಸ್ಟ್ರೇಲಿಯಾ ಎ ವಿರುದ್ಧ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ರೋಚಕ ಗೆಲುವು ಸಾಧಿಸಿದೆ.

Advertisement

ನಾಲ್ಕನೆಯ ದಿನದ ಕೊನೆಯಲ್ಲಿ ಗೆಲ್ಲಲು ಎಂಟು ಓವರ್‌ಗಳಲ್ಲಿ 54 ರನ್ ಗಳಿಸಬೇಕಿದ್ದ ಭಾರತ ಎ, 6.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Explore Now: Cricket World Cup Action LIVE!
Advertisement

ಭಾರತ vs ಇಂಗ್ಲೆಂಡ್, 5ನೇ ಟೆಸ್ಟ್: ಇಂಗ್ಲೆಂಡ್ ಗೆ 118 ರನ್ ಭರ್ಜರಿ ಜಯ

ಎಂಟು ಓವರ್‌ಗಳ ಒಳಗೆ ಗುರಿ ಮುಟ್ಟಲು ಸಾಧ್ಯವಾಗದೆ ಇದ್ದರೆ ಪಂದ್ಯ ಡ್ರಾದಲ್ಲಿ ಅಂತ್ಯವಾಗುತ್ತಿತ್ತು. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ, ಗೆಲುವಿನ ಈ ಅಪೂರ್ವ ಅವಕಾಶವನ್ನು ಕೈಬಿಡಲಿಲ್ಲ.

ಸುಲಭದ ಗುರಿ ಬೆನ್ನತ್ತಿದ್ದ ಭಾರತ ಆರಂಭದಲ್ಲಿಯೇ 11 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅಂಕಿತ್ ಭಾವ್ನೆ 18 ಎಸೆತಗಳಲ್ಲಿ 28 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಕೊನೆಯ ಬಾಲ್ ಗೆ ಸಿಕ್ಸ್ ಬೀಸಿ ಭಾರತದೆದುರು ಪಾಕ್ ಗೆಲ್ಲಿಸಿದ್ದರು ಜಾವೆದ್!

ಮೂರನೇ ದಿನದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಎ ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿ ಸಿಲುಕಿತ್ತು. ನಾಲ್ಕನೆಯ ದಿನವಾದ ಮಂಗಳವಾರ ಪೀಟರ್‌ ಹ್ಯಾಂಡ್‌ಸ್ಕಂಬ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಅವರ ಹೋರಾಟದಿಂದ ತುಸು ಚೇತರಿಸಿಕೊಂಡಿತು.

ಕೊನೆಯಲ್ಲಿ ಮಿಖಾಯಲ್ ನೆಸೆರ್ ಮತ್ತು ಕ್ರಿಸ್ ಟ್ರೆಮೈನ್ ಡ್ರಾ ಮಾಡುವ ಪ್ರಯತ್ನದಲ್ಲಿ ಭಾರತದ ಬೌಲರ್‌ಗಳನ್ನು ತೀವ್ರವಾಗಿ ಕಾಡಿದರು. ನೆಸೆರ್ 17 ರನ್ ಗಳಿಸಲು 112 ಎಸೆತಗಳನ್ನು ಎದುರಿಸಿದರೆ, ಟ್ರೆಮೈನ್ 41 ಎಸೆತಗಳನ್ನು ಆಡಿ ಕೇವಲ 1 ರನ್ ಗಳಿಸಿದರು. ಕುಲದೀಪ್ ಯಾದವ್ ಮತ್ತು ಕೆ. ಗೌತಮ್ ಸ್ಪಿನ್ ಮೋಡಿ ಈ ವಿಕೆಟ್‌ಗಳನ್ನು ಉರುಳಿಸಿತು.

Advertisement

ಇಂಗ್ಲೆಂಡ್ ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಪಂತ್!

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಎ, ಮೊದಲ ಇನ್ನಿಂಗ್ಸ್: 346/10 (109) ಟ್ರಾವಿಸ್ ಹೆಡ್ 68, ಮಿಚೆಲ್ ಮಾರ್ಷ್ 113, ಕುರ್ಟಿಸ್ ಪ್ಯಾಟರ್ಸನ್ 48, ಮಿಖಾಯಲ್ ನೆಸೆರ್ 44, ಕುಲದೀಪ್ ಯಾದವ್ 91/5, ಶಹಬಾಜ್ ನದೀಮ್ 90/3

ಭಾರತ ಎ, ಮೊದಲ ಇನ್ನಿಂಗ್ಸ್: 505/10 (104) ಶ್ರೀಕರ್ ಭರತ್ 106, ಆರ್. ಸಮರ್ಥ್ 83, ಅಭಿಮನ್ಯು ಈಶ್ವರನ್ 86, ಶುಭ್‌ಮನ್ ಗಿಲ್ 50, ಕ್ರಿಸ್ ಟ್ರೆಮೈನ್ 41/3, ಆಷ್ಟೋನ್ ಅಗರ್ 87/3

ಆಸ್ಟ್ರೇಲಿಯಾ ಎ, ಎರಡನೆಯ ಇನ್ನಿಂಗ್ಸ್: 231/10 (102.5) ಟ್ರಾವಿಸ್ ಹೆಡ್ 47, ಪೀಟರ್‌ ಹ್ಯಾಂಡ್‌ಸ್ಕಂಬ್ 56, ಮಿಚೆಲ್ ಮಾರ್ಷ್ 36, ಕುಲದೀಪ್ ಯಾದವ್ 46/3, ಕೆ. ಗೌತಮ್ 39/3, ದೀಪಕ್ ಚಾಹರ್ 30/2

Advertisement

ಭಾರತ ಎ, ಎರಡನೆಯ ಇನ್ನಿಂಗ್ಸ್: 55/4 (6.2) ಅಂಕಿತ್ ಭಾವ್ನೆ 28*, ಶ್ರೀಕರ್ ಭರತ್ 12, ಮಿಖಾಯೆಲ್ ನೆಸೆರ್ 28/2, ಕ್ರಿಸ್ ಟ್ರೆಮೈನ್ 26/2

English Summary

India A defeated Australia A in the 2nd Unofficial cricket test played at Alur KSCA ground.