ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!


ಕೆನ್ಸಿಂಗ್ಟನ್ ಓವಲ್ , ಸೆಪ್ಟೆಂಬರ್ 12: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡರೂ, ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಅವರ ಹೋರಾಟದ ಆಟಕ್ಕೆ ಪ್ರಶಂಸೆ ಸಿಕ್ಕಿದೆ.

20 ತಿಂಗಳ ಬಳಿಕ ಟೆಸ್ಟ್ ಶತಕ ಬಾರಿಸಿದ ರಾಹುಲ್ ಹಾಗೂ ರಿಷಬ್ ಪಂತ್ ಗಳಿಸಿದ ಚೊಚ್ಚಲ ಶತಕ ಹಲವು ದಾಖಲೆಗಳನ್ನು ಮುರಿಯಿತು.

Advertisement

ಇಂಗ್ಲೆಂಡ್ ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಪಂತ್

446ರನ್ ಗಳ ಗುರಿ ಬೆನ್ನು ಹತ್ತಿದ್ದ ಭಾರತದ ಆರಂಭ ಅತ್ಯಂತ ಕಳಪೆಯಾಗಿತ್ತು. 2ರನ್ ಆಗುವಷ್ಟರಲ್ಲಿ ಶಿಖರ್ ಧವನ್, ಪೂಜಾರಾ, ಕೊಹ್ಲಿ ಪೆವಿಲಿಯನ್ ಸೇರಿದ್ದರು. ಅಜಿಂಕ್ಯ ರಹಾನೆ(37) ಹಾಗೂ ರಾಹುಲ್ ತಂಡದ ಮೊತ್ತವನ್ನು ಹೆಚ್ಚಿಸಿದರು. ತಂಡದ ಮೊತ್ತ 120ರನ್ ಆಗಿದ್ದಾಗ ಅಜಿಂಕ್ಯ ರಹಾನೆ ಕೂಡಾ ಔಟಾದರು.

Explore Now: Cricket World Cup Action LIVE!
Advertisement

ಕೆಎಲ್ ರಾಹುಲ್ 5ನೇ ಶತಕ, ದಾಖಲೆ ಬಗ್ಗೆ ಐದಾರು ಟ್ವೀಟ್ಸ್

ಆದರೆ, ರಾಹುಲ್ ಹಾಗೂ ರಿಷಬ್ ಇಬ್ಬರು ಶತಕ ಗಳಿಸಿದ್ದಲ್ಲದೆ, ಉತ್ತಮ ಜೊತೆಯಾಟ ಸಾಧಿಸಿದರು. ಅದರೆ, ಇಂಗ್ಲೆಂಡ್ ಪಂದ್ಯವನ್ನು 118ರನ್ ಹಾಗೂ ಸರಣಿಯನ್ನು 4-1ರಲ್ಲಿ ಗೆದ್ದುಕೊಂಡಿತು. ರಾಹುಲ್ ಹಾಗೂ ಪಂತ್ ಜೋಡಿ ತೋರಿದ ಪ್ರದರ್ಶನದಿಂದ ಧೂಳಿಪಟವಾದ ದಾಖಲೆಗಳ ಬಗ್ಗೆ ಮುಂದೆ ಓದಿ...

* ಕೆಎಲ್ ರಾಹುಲ್ ಅವರ 149ರನ್ ಮೊತ್ತವು ನಾಲ್ಕನೆ ಇನ್ನಿಂಗ್ಸ್ ನಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳಿಸಿದ ಎರಡನೇ ದೊಡ್ಡ ಮೊತ್ತವಾಗಿದೆ.
* ಇಂಗ್ಲೆಂಡಿನ ಟೆಸ್ಟ್ ಸರಣಿಯೊಂದರಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಭಾರತೀಯರು ಶತಕ ಗಳಿಸಿದ್ದಾರೆ.
* ನಾಲ್ಕನೇ ಇನ್ನಿಂಗ್ಸ್ ನಂತರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಏಳನೆ ಆಟಗಾರ ರಿಷಬ್ ಪಂತ್

* ಓವಲ್ ನಲ್ಲಿ 2007ರಲ್ಲಿ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ ಗಳಿಸಿದ್ದ 92ರನ್ ಅತ್ಯಧಿಕ ರನ್ ಆಗಿತ್ತು. ಇದನ್ನು ಮುರಿದ ರಿಷಬ್ ಪಂತ್, ಇಂಗ್ಲೆಂಡಿನಲ್ಲಿ ಶತಕ(114) ಗಳಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎನಿಸಿಕೊಂಡರು.
* ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ನಡುವಿನ 204ರನ್ ಗಳ ಜೊತೆಯಾಟ 6ನೇ ವಿಕೆಟ್ ಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಗಳಿಸಿದ ಅತಿ ಹೆಚ್ಚು ರನ್ ಗಳ ಜೊತೆಯಾಟವಾಗಿದೆ.

Advertisement

* ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಹಾಗೂ ಶೂನ್ಯಕ್ಕೆ ಔಟಾದವರ ಪೈಕಿ ಹನುಮ ವಿಹಾರಿ ಮೂರನೆಯವರು. ಗುಂಡಪ್ಪ ವಿಶ್ವನಾಥ್ ಹಾಗೂ ದೇವಾಂಗ್ ಗಾಂಧಿ ಇನ್ನಿಬ್ಬರು ಈ ಸಾಧನೆ ಮಾಡಿದ್ದರು.
* ಏಷ್ಯಾದ ಹೊರಗೆ ಶತಕ ಗಳಿಸಿದ ನಾಲ್ಕನೇ ಆಟಗಾರರಾದ ರಿಷಬ್ ಪಂತ್, ವಿಜಯ್ ಮಂಜ್ರೇಕರ್ ಅಜಯ್ ರಾತ್ರಾ, ವೃದ್ಧಿಮಾನ್ ಸಹಾ ನಂತರ ಪಂತ್ ದಾಖಲೆ ಬರೆದಿದ್ದಾರೆ.

Advertisement

ವಿದೇಶಿ ನೆಲದಲ್ಲಿ 4ನೇ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಭಾರತದ ಆರಂಭಿಕ ಆಟಗಾರರ ಪಟ್ಟಿ ಸೇರಿದ ಕೆಎಲ್ ರಾಹುಲ್.

* 1971, 1976, 1977, 1979ರಲ್ಲಿ ಗವಾಸ್ಕರ್, 2014ರಲ್ಲಿ ಶಿಖರ್ ಧವನ್ ಗಳಿಸಿದ್ದರು.

* ಇದಲ್ಲದೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಇಬ್ಬರು ಬ್ಯಾಟ್ಸ್ ಮನ್ ಗಳು ಶತಕ ಗಳಿಸಿದ್ದು ಇದು ನಾಲ್ಕನೆ ಬಾರಿ.

English Summary

England vs India : KL Rahul scores his fifth century and Rishabh Pant hits his maiden Test Century put on 204 run stand shattered many records.