ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಸೋತರೂ Rankingನಲ್ಲಿ ಭಾರತವೇ ನಂ.1


ಲಂಡನ್, ಸೆಪ್ಟೆಂಬರ್ 12: ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಸೋತ ಬಳಿಕವೂ ಭಾರತ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂ. 1 ಸ್ಥಾನದಲ್ಲೇ ಮುಂದುವರೆದಿದೆ. ಸರಣಿಯನ್ನು 4-1ರಿಂದ ಗೆದ್ದುಕೊಂಡ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.

ಸಾಫ್ ಕಪ್ ಫುಟ್ಬಾಲ್: ಇಂದು ಭಾರತ-ಪಾಕಿಸ್ತಾನ ಮುಖಾಮುಖಿ

ತಂಡವೊಂದು ಪ್ರಮುಖ ಪಂದ್ಯವೊಂದರಲ್ಲಿ ಕಂಡ ಸೋಲು-ಗೆಲುವಿಗನುಗುಣವಾಗಿ ರ್ಯಾಂಕಿಂಗ್ ನಲ್ಲಿ ಬದಲಾವಣೆಯಾಗೋದಿದೆ. ಆದರೆ ಮಂಗಳವಾರ ಲಂಡನ್ ನ ಓವಲ್ ನಲ್ಲಿ ಮುಕ್ತಾಯಗೊಂಡ ಟೆಸ್ಟ್ ಸರಣಿ ಸೋಲಿನ ಫಲಿತಾಂಶ ಭಾರತದ ಶ್ರೇಯಾಂಕದ ಮೇಲೆ ಪರಿಣಾಮ ಬೀರಿಲ್ಲ.

ಹೊಸ ರ್ಯಾಂಕ್ ಪಟ್ಟಿಯಲ್ಲಿ 4016 ಅಂಕ ಸಂಪಾದಿಸಿರುವ ಭಾರತ ಅಗ್ರ ಸ್ಥಾನದಲ್ಲಿದ್ದರೆ, 3712 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿ, 3499 ಅಂಕದೊಂದಿಗೆ ಆಸ್ಟ್ರೇಲಿಯಾ ತೃತೀಯ ಸ್ಥಾನದಲ್ಲಿದೆ. ಇಂಗ್ಲೆಂಡ್ 4722 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.

ಅಂಕಗಳಲ್ಲಿ ಇಂಗ್ಲೆಂಡ್ ಹೆಚ್ಚಿನ ಮೊತ್ತ ಸಂಪಾದಿಸಿದೆಯಾದರೂ ರ್ಯಾಂಕಿಂಗ್, ರೇಟಿಂಗ್ ಪಾಯಿಂಟ್ ಅನ್ನು ಅವಲಂಭಿಸಿರುವುದರಿಂದ ಭಾರತ ಅಗ್ರ ಸ್ಥಾನದಲ್ಲಿದೆ. ಭಾರತ 115, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಲಾ 106, ಇಂಗ್ಲೆಂಡ್ 105, ನ್ಯೂಜಿಲ್ಯಾಂಡ್ 102 ರೇಟಿಂಗ್ ಪಾಯಿಂಟ್ ಹೊಂದಿದೆ.

Read More About: ಟೆಸ್ಟ್

Have a great day!
Read more...

English Summary

India continued to be at the numero uno position but England grabbed the fourth spot in the ICC Test Team Rankings after completing a 4-1 series victory at The Oval on Tuesday.