ತಾಯಿ ಕಳೆದುಕೊಂಡ ಮರುದಿನವೇ ಕ್ರಿಕೆಟ್‌ ಅಂಗಳಕ್ಕಿಳಿದ ಪಾಕ್ ಯುವ ವೇಗಿ ಅಂತರಾಷ್ಟ್ರೀಯ ಪದಾರ್ಪಣೆಗೆ ಸಜ್ಜು


ನಝೀಮ್ ಶಾ 16 ವರ್ಷದ ಪಾಕಿಸ್ತಾನದ ವೇಗದ ಬೌಲರ್. ಪಾಕಿಸ್ಥಾನ ತಂಡವನ್ನು ಪ್ರತಿನಿಧಿಸುವ ಅವಕಾಶ ಆತನಿಗೆ ಒಲಿದು ಬಂದಿತ್ತು. ಖುಷಿ ಖುಷಿಯಾಗಿ ಆಸ್ಟ್ರೇಲಿಯಾಕ್ಕೆ ಆತ ಬಂದಿಳಿದಿದ್ದ. ಆದರೆ ಆತನ ಈ ಸಂಭ್ರಮ ಕರಾಳ ದಿನವಾಗಿ ಮಾರ್ಪಟ್ಟಿತ್ತು. ಅದಕ್ಕೆ ಕಾರಣ ಪಂದ್ಯ ಆರಂಭಕ್ಕೂ ಹಿಂದಿನ ದಿನ ಆತ ತನ್ನ ತಾಯಿಯನ್ನು ಕಳೆದುಕೊಂಡಿದ್ದ.

ನಿಜಕ್ಕೂ ಇದು ಎಂತವರಿಗೂ ಆಘಾವನ್ನುಂಟು ಮಾಡುವ ವಿಚಾರ. ಹಾಗಿದ್ದರೂ ನಸೀಮ್ ಶಾ ಒಂದು ಕಠಿಣ ನಿರ್ಧಾರಕ್ಕೆ ಬಂದಿದ್ದ. ತಾನು ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದೆ ಮರುದಿನದ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಆಡಲು ನಿರ್ಧರಿಸಿದ್ದ. ಕುಟುಂಬಸ್ಥರ ಜೊತೆ ಈ ವಿಚಾರವಾಗಿ ಮಾತನಾಡಿ ಬಳಿಕ ಪಾಕಿಸ್ಥಾನ ಕ್ರಿಕೆಟ್ ಬೋರ್ಡ್‌ ಜೊತೆಗೆ ತನ್ನ ನಿರ್ಧಾರವನ್ನು ತಿಳಿಸಿದ್ದ. ಈ ನಿರ್ಧಾರ ನಿಜಕ್ಕೂ ಆತನಿಗೆ ಭಾವನಾತ್ಮಕವಾಗಿತ್ತು. ಆಸ್ಟ್ರೇಲಿಯಾ ಎ ವಿರುದ್ಧ ಆಡಿದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದ ನಸೀಮ್ ಶಾ. ಈ ನಿರ್ಧಾರಕ್ಕೆ ಭಾರತ ಸೇರಿದಂತೆ ವಿಶ್ವಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಭಾವನಾತ್ಮಕವಾಗಿ ಬೆಂಬಲವನ್ನು ವ್ಯಕ್ತಪಡಿಸಿದ್ದರು.

ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ನೋವಿನ ಮಧ್ಯೆಯೂ ನಝೀಮ್ ಶಾ ಉತ್ತಮ ಪ್ರರ್ಶನವನ್ನು ನೀಡಿದ್ದ. ಆತನ ಪ್ರದರ್ಶನ ಈಗ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳುವಂತೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳಲ್ಲಿ ಟೆಸ್ಟ್‌ ಪಮದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ವಿಚಾರವಾಗಿ ಪಾಕಿಸ್ಥಾನದ ನಾಯಕ ಅಜರ್ ಅಲಿ ಹೇಳಿಕೆಯನ್ನು ನೀಡಿದ್ದಾರೆ.

ನಝೀಮ್ ಶಾನ ತಾಂತ್ರಿಕ ನೈಪುಣ್ಯತೆ ಮತ್ತು ಮಾನಸಿಕ ಸ್ಥೈರ್ಯದ ಬಗ್ಗೆ ಪಾಕ್ ನಾಯಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮಟ್ಟದ ಗುಣಮಟ್ಟವನ್ನು ಇಷ್ಟು ಸಣ್ಣವಯಸ್ಸಿನಲ್ಲಿ ಗಳಿಸುವುದು ಸುಲಭವಲ್ಲ. ಆದರೆ ಅದನ್ನು ನಝೀಮ್ ಶಾ ಗಳಿಸಿಕೊಂಡಿದ್ದಾನೆ. ಉತ್ತಮ ನಿಯಂತ್ರಣ ಮತ್ತು ವೇಗವನ್ನು ಹೊಂದಿದ್ದು ಆತನ ಆಟವನ್ನು ನೋಡಲು ಎದುರು ನೋಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

Have a great day!
Read more...

English Summary

Pakistan captain Azhar Ali has high hopes for Naseem Shah as the 16-year-old prepares to make his Test debut against Australia. Azhar praised the seamer's technical abilities and mental strength after the teenager suffered a personal tragedy following the recent death of his mother.