ರಣಜಿ ಟ್ರೋಫಿ: ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ತ್ರಿಶತದಾಟ


I felt like I could change course of the game: Sarfaraz Khan | RCB | SARFARAZ KHAN

ಮುಂಬೈ, ಜನವರಿ 22: ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್, ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ಸಾಧಕರ ಸಾಲಿಗೆ ಸೇರಿದ್ದಾರೆ. ರಣಜಿ ಟ್ರೂಫಿ ಎಲೈಟ್ ಗ್ರೂಪ್ 'ಎ' ಮತ್ತು 'ಬಿ' 6ನೇ ಸುತ್ತಿನ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಸರ್ಫರಾಜ್‌ ಈ ಸಾಧನೆ ಮೆರೆದಿದ್ದಾರೆ. ಸರ್ಫರಾಜ್‌ ತ್ರಿಶತದಿಂದ ಇತ್ತಂಡಗಳ ಈ ಪಂದ್ಯ ಡ್ರಾದೊಂದಿಗೆ ಮುಕ್ತಾಯ ಕಂಡಿದೆ.

Advertisement

ಕಿವೀಸ್ ಪ್ರವಾಸಕ್ಕೆ ಮಯಾಂಕ್ ಬದಲು ಪೃಥ್ವಿ ಆಯ್ಕೆಯಾಗಲು ಇದು ಕಾರಣ!

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಅಜೇಯ 301 ರನ್‌ ಕೊಡುಗೆಯಿತ್ತರು. ಇದೇ ಪಂದ್ಯದಲ್ಲಿ ಎದುರಾಳಿ ಉತ್ತರ ಪ್ರದೇಶದ ಆಕಾಶ್‌ದೀಪ್ ನಾಥ್ 115 ರನ್‌, ಉಪೇಂದ್ರ ಯಾದವ್ 203 ರನ್‌ ಬಾರಿಸಿ ಗಮನ ಸೆಳೆದರು.

Explore Now: Cricket World Cup Action LIVE!
Advertisement

ಮಿಂಚಿದ ಶಾ, ಸ್ಯಾಮ್ಸನ್; ಕೀವಿಸ್ 'ಎ'ತಂಡದ ವಿರುದ್ಧ ಭಾರತ ಎ ತಂಡಕ್ಕೆ ಭರ್ಜರಿ ಜಯ!

ಈ ಸಾಧನೆಯೊಂದಿಗೆ ಸರ್ಫರಾಜ್‌ ಖಾನ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಮುಂಬೈಯ ಏಳನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ವಾಸಿಮ್ ಜಾಫರ್ (301 ಮತ್ತು ಅಜೇಯ 314 ರನ್), ರೋಹಿತ್ ಶರ್ಮಾ (ಅಜೇಯ 309), ಅಜಿತ್ ವಾಡೆಕರ್ (323), ಸುನಿಲ್ ಗಾವಸ್ಕರ್ (340), ವಿಜಯ್ ಮರ್ಚೆಂಟ್‌ (ಅಜೇಯ 359), ಸಂಜಯ್ ಮಂಜ್ರೇಕರ್ (377) ತ್ರಿಶಕ ಬಾರಿಸಿದ್ದರು.

11ನೇ ಇಂಡೋರ್ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಉತ್ತರ ಪ್ರದೇಶ, ಆಕಾಶ್‌ದೀಪ್‌ ನಾಥ್ 115, ಉಪೇಂದ್ರ ಯಾದವ್ 203 ರನ್‌ನೊಂದಿಗೆ 159.3ನೇ ಓವರ್‌ಗೆ 8 ವಿಕೆಟ್‌ ನಷ್ಟದಲ್ಲಿ 625 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಮುಂಬೈ ತಂಡ ಖಾನ್ ತ್ರಿಶತದೊಂದಿಗೆ 166.3 ಓವರ್‌ಗೆ 7 ವಿಕೆಟ್ ಕಳೆದು 688 ರನ್ ಮಾಡಿತ್ತು.

English Summary

Staying true to his words, young Sarfaraz Khan stuck his maiden triple 100 to single-handedly give Mumbai the crucial first-innings lead and grab three points on the last day of their Elite Group B Ranji Trophy match against Uttar Pradesh here on Wednesday.
Advertisement