ಸೂಪರ್ ಸೀರೀಸ್ ಗುಟ್ಟು ಬಿಚ್ಚಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ!


ನವದೆಹಲಿ, ಡಿಸೆಂಬರ್ 25: ಕ್ರಿಕೆಟ್‌ ಜಗತ್ತಿನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಇನ್ನೊಂದು ತಂಡ ಸೇರಿ ವಿಶೇಷ ಟೂರ್ನಿಯೊಂದನ್ನು ನಡೆಸಲು ಉದ್ದೇಶಿಸಲಾಗಿದೆ. ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

Advertisement

ದಶಕದ ಟೆಸ್ಟ್ & ಏಕದಿನ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ದೊರೆತಿರುವ ಮಾಹಿತಿಯಂತೆ ಉದ್ದೇಶಿತ ಈ ಟೂರ್ನಿ 2021ರ ಬಳಿಕ ನಡೆಯಲಿದೆ. ನಿಯಮಿತ ಓವರ್‌ಗಳ ಅಂದರೆ 50 ಓವರ್‌ಗಳ ಟೂರ್ನಿ ಇದಾಗಿರಲಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 4 ರಾಷ್ಟ್ರಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಅರಂಭಿಕ ಟೂರ್ನಿ ಭಾರತದಲ್ಲೇ ನಡೆಯಲಿದೆ.

Explore Now: Cricket World Cup Action LIVE!
Advertisement

ಏಕದಿನ ವಿಶಿಷ್ಠ ದಾಖಲೆಗಳೊಂದಿಗೆ ದಶಕ ಮುಗಿಸಿದ ವಿರಾಟ್ ಕೊಹ್ಲಿ!

ಟೂರ್ನಿಗೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಸರತಿಯಂತೆ ಒಂದೊಂದೇ ರಾಷ್ಟ್ರಗಳು ಪ್ರತೀವರ್ಷ ಟೂರ್ನಿಯ ಆತಿಥ್ಯವನ್ನು ವಹಿಸಿಕೊಳ್ಳಲಿವೆ. ಈ ಟೂರ್ನಿ, ಐಸಿಸಿಯ ಆಶಯಗಳಿಗೆ ವಿರುದ್ಧವಾಗಿ ನಡೆಯಬಹುದು-ಆದರೆ ಈ ವರ್ಷದ ಆರಂಭದಲ್ಲೇ ಸದಸ್ಯ ರಾಷ್ಟ್ರಗಳು ತಾತ್ವಿಕವಾಗಿ ಈ ಟೂರ್ನಿಗೆ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ.

'ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಮತ್ತು ವಿಶ್ವದ ಇನ್ನೊಂದು ಟಾಪ್ ತಂಡ 2021ರಿಂದ ಆರಂಭಗೊಳ್ಳಲಿರುವ ಸೂಪರ್ ಸೀರೀಸ್‌ನಲ್ಲಿ ಪಾಲ್ಗೊಳ್ಳಲಿವೆ. ಟೂರ್ನಿಯ ಮೊದಲ ಆವೃತ್ತಿ ಭಾರತದಲ್ಲಿ ನಡೆಯಲಿದೆ,' ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ, ಈ ಉದ್ದೇಶಿತ ಟೂರ್ನಿಗೆ ಕೆಲವರು ಟೀಕೆಯೂ ವ್ಯಕ್ತಪಡಿಸಿದ್ದಾರೆ.

Advertisement

ಐಪಿಎಲ್ ಫ್ಯಾಂಟಸಿ ತಂಡ ಪ್ರಕಟಿಸಿದ ಗಂಗೂಲಿ; ಧೋನಿಗೆ ಸ್ಥಾನವಿಲ್ಲ

ಅಕ್ಟೋಬರ್/ನವೆಂಬರ್‌ನಲ್ಲಿ ಈ ಟೂರ್ನಿ ಭಾರತದಲ್ಲಿ ನಡೆಯಲು ಉದ್ದೇಶಿಸಿದ್ದರೆ, ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ, ಅಕ್ಟೋಬರ್/ನವೆಂಬರ್ ಅಥವಾ ಫೆಬ್ರವರಿ/ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಪಂದ್ಯಾಟ ನಡೆಸಲು ಸದ್ಯಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

English Summary

India, England and Australia may overturn the delicately balanced global cricket calendar and play an annual limited-overs tournament among themselves - with one other nation - from 2021 onwards
Advertisement