ಕೆಎಲ್ ರಾಹುಲ್ 5ನೇ ಶತಕ, ದಾಖಲೆ ಬಗ್ಗೆ ಐದಾರು ಟ್ವೀಟ್ಸ್ಓವಲ್, ಸೆಪ್ಟೆಂಬರ್ 11: ಓವಲ್ ಮೈದಾನ ಕನ್ನಡಿಗರಿಗೆ ಪ್ರಿಯ ಎನಿಸುತ್ತದೆ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ನಂತರ ಕನ್ನಡಿಗ ಕೆಎಲ್ ರಾಹುಲ್ ಅವರು ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಶತಕ ಬಾರಿಸಿದ್ದಾರೆ. ಸುಮಾರು 20 ತಿಂಗಳ ಬಳಿಕ ಟೆಸ್ಟ್ ಶತಕ ಬಾರಿಸಿದ ರಾಹುಲ್ ಅವರು ಗಳಿಸಿದ ರನ್ ಹಲವು ದಾಖಲೆಗಳನ್ನು ಅಳಿಸಿ ಹಾಕಿವೆ. ರಾಹುಲ್ ಹಾಗೂ ರಿಷಬ್ ಪಂತ್ ಶತಕ, ಜೊತೆಯಾಟಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ.

ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು 224ಎಸೆತಗಳಲ್ಲಿ 149ರನ್(20 ಬೌಂಡರಿ, 1ಸಿಕ್ಸರ್) ಗಳಿಸಿ ಔಟಾದರು. ಅವರ ಸ್ಟ್ರೈಕ್ ರೇಟ್ 66.52 ಇತ್ತು.

ಇಂಗ್ಲೆಂಡ್ ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಪಂತ್

446ರನ್ ಗಳ ಗುರಿ ಬೆನ್ನು ಹತ್ತಿದ್ದ ಭಾರತದ ಆರಂಭ ಅತ್ಯಂತ ಕಳಪೆಯಾಗಿತ್ತು. 2ರನ್ ಆಗುವಷ್ಟರಲ್ಲಿ ಶಿಖರ್ ಧವನ್, ಪೂಜಾರಾ, ಕೊಹ್ಲಿ ಪೆವಿಲಿಯನ್ ಸೇರಿದ್ದರು. ಅಜಿಂಕ್ಯ ರಹಾನೆ(37) ಹಾಗೂ ರಾಹುಲ್ ತಂಡದ ಮೊತ್ತವನ್ನು ಹೆಚ್ಚಿಸಿದರು. ತಂಡದ ಮೊತ್ತ 120ರನ್ ಆಗಿದ್ದಾಗ ರ್ಹಾನೆ ಕೂಡಾ ಔಟಾದರು.

ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದ ಹನುಮ ವಿಹಾರಿ, ಶೂನ್ಯಕ್ಕೆ ಔಟಾದರು. ನಂತರ ಬಂದ ವಿಕೆಟ್ ಕೀಪರ್ ರಿಷಪ್ ಪಂತ್ ಅವರು ರಾಹುಲ್ ಗೆ ಸಾಥ್ ನೀಡಿದ್ದಲ್ಲದೆ 114ರನ್(146 ಎಸೆತ, 15 ಬೌಂಡರಿ, 4 ಸಿಕ್ಸರ್) ಗಳಿಸಿ ದಾಖಲೆ ಪ್ರದರ್ಶನ ನೀಡಿದರು. ಭಾರತ 345ಸ್ಕೋರಿಗೆ ಆಲೌಟ್ ಆಯಿತು.

ಕೆಎಲ್ ರಾಹುಲ್ 5ನೇ ಶತಕ, ದಾಖಲೆ
20 ತಿಂಗಳ ಬಳಿಕ ಶತಕ ದಾಖಲೆ

ಕೆಎಲ್ ರಾಹುಲ್ ಅವರು 20 ತಿಂಗಳುಗಳ ಬಳಿಕ, 28 ಇನ್ನಿಂಗ್ಸ್ ಬಳಿಕ ಶತಕ ಗಳಿಸಿದ್ದಾರೆ. ಇದು ಅವರ 5ನೇ ಶತಕವಾಗಿದೆ.

ಇಂಗ್ಲೆಂಡ್ ಪ್ರವಾಸದ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿ ಉತ್ತಮ ಆರಂಭ ಪಡೆದಿದ್ದ ರಾಹುಲ್ ಅವರು ನಂತರ 36ರನ್ ಗಡಿ ದಾಟಿರಲಿಲ್ಲ. ಆದರೆ, ಪ್ರವಾಸದ ಕೊನೆ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿ ಗಮನ ಸೆಳೆದಿದ್ದಾರೆ.

ಕೆಎಲ್ ರಾಹುಲ್ 5ನೇ ಶತಕ, ದಾಖಲೆ

ಕರ್ನಾಟಕದ ಆಟಗಾರರ ಸಾಧನೆ

ಕರ್ನಾಟಕದ ಆಟಗಾರರಾದ ರಾಹುಲ್ ದ್ರಾವಿಡ್ , ಅನಿಲ್ ಕುಂಬ್ಳೆ ನಂತರ ಕೆಎಲ್ ರಾಹುಲ್ ಅವರು ಓವಲ್ ಮೈದಾನದಲ್ಲಿ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.
* 2002-ರಾಹುಲ್ ದ್ರಾವಿಡ್ 217
* 2007 : ಅನಿಲ್ ಕುಂಬ್ಳೆ -110*
* 2011 -ರಾಹುಲ್ ದ್ರಾವಿಡ್ -146*
* 2018- ಕೆಎಲ್ ರಾಹುಲ್ -149

ಕೆಎಲ್ ರಾಹುಲ್ 5ನೇ ಶತಕ, ದಾಖಲೆ

ವಿದೇಶಿ ನೆಲದಲ್ಲಿ 4ನೇ ಇನ್ನಿಂಗ್ಸ್ ನಲ್ಲಿ ಶತಕ

ವಿದೇಶಿ ನೆಲದಲ್ಲಿ 4ನೇ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಭಾರತದ ಆರಂಭಿಕ ಆಟಗಾರರ ಪಟ್ಟಿ ಸೇರಿದ ಕೆಎಲ್ ರಾಹುಲ್.
* 1971-ಗವಾಸ್ಕರ್ (ವೆಸ್ಟ್ ಇಂಡೀಸ್ ವಿರುದ್ಧ), ಬ್ರಿಜ್ ಟೌನ್
* 1976- ಗವಾಸ್ಕರ್ (ವೆಸ್ಟ್ ಇಂಡೀಸ್ ವಿರುದ್ಧ), ಪೋರ್ಟ್ ಆಫ್ ಸ್ಪೇನ್
* 1977-ಗವಾಸ್ಕರ್ (ಆಸ್ಟ್ರೇಲಿಯಾ ವಿರುದ್ಧ), ಬ್ರಿಸ್ಬೇನ್
* 1979-ಗವಾಸ್ಕರ್ (ಇಂಗ್ಲೆಂಡ್ ವಿರುದ್ಧ) ಓವಲ್
* 2014-ಶಿಖರ್ ಧವನ್ (ನ್ಯೂಜಿಲೆಂಡ್ ವಿರುದ್ಧ) ಆಕ್ಲೆಂಡ್
* 2018-ಕೆಎಲ್ ರಾಹುಲ್ (ಇಂಗ್ಲೆಂಡ್ ವಿರುದ್ಧ) ಓವಲ್

ಕೆಎಲ್ ರಾಹುಲ್ 5ನೇ ಶತಕ, ದಾಖಲೆ

2015ರ ನಂತರ ಭಾರತದ ಆರಂಭಿಕರು

2015ರ ನಂತರ ಭಾರತದ ಆರಂಭಿಕರು ಏಷ್ಯಾ ಬಿಟ್ಟು ಬೇರೆಡೆ ಶತಕ ಗಳಿಕೆ
* ಕೆಎಲ್ ರಾಹುಲ್ -3 (ಎಸ್ ಸಿಜಿ, ಕಿಂಗ್ಸ್ ಟನ್, ಓವಲ್) 3ಶತಕ, 16 ಇನ್ನಿಂಗ್ಸ್
* ಇತರರು 0, 28 ಇನ್ನಿಂಗ್ಸ್ (2 ಅರ್ಧಶತಕ ಬಂದಿವೆ)

ಕೆಎಲ್ ರಾಹುಲ್ 5ನೇ ಶತಕ, ದಾಖಲೆ

5 ಬೇರೆ ದೇಶಗಳ ವಿರುದ್ಧ ಮೊದಲ 5 ಶತಕ

ಟೆಸ್ಟ್ ವೃತ್ತಿ ಬದುಕಿನಲ್ಲಿತಮ್ಮ ಮೊದಲ 5 ಶತಕಗಳನ್ನು 5 ಬೇರೆ ಬೇರೆ ದೇಶಗಳ ವಿರುದ್ಧ ಗಳಿಸಿದ ಸಾಧಕರ ಪಟ್ಟಿ ಸೇರಿದ ರಾಹುಲ್.
* ಇನ್ಜಮಾಮ್ ಉಲ್ ಹಕ್ (ಪಾಕಿಸ್ತಾನ) ಮೊದಲ 8 ಶತಕ
* ಎಚ್ ತಿಲಕರತ್ನೆ (ಶ್ರೀಲಂಕಾ)
* ಸಯೀದ್ ಅನ್ವರ್ (ಪಾಕಿಸ್ತಾನ)
* ಜಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ)
* ಮರ್ಲಾನ್ ಸ್ಯಾಮುಯಲ್ಸ್ (ವೆಸ್ಟ್ ಇಂಡೀಸ್)
* ಜೆ ರುಡಾಲ್ಫ್
* ಅಜಿಂಕ್ಯ ರಹಾನೆ
* ಕೆಎಲ್ ರಾಹುಲ್

ಕೆಎಲ್ ರಾಹುಲ್ 5ನೇ ಶತಕ, ದಾಖಲೆ

ಬ್ಯಾನರ್ ಮನ್ ಸಾಧನೆ ಹಾದಿಯಲ್ಲಿದ್ದ ರಾಹುಲ್

ಆಸ್ಟ್ರೇಲಿಯಾದ ಬ್ಯಾನರ್ ಮನ್ ಸಾಧನೆ ಹಾದಿಯಲ್ಲಿದ್ದ ರಾಹುಲ್ ಅವರು ಈ ಪಂದ್ಯವನ್ನು ಗೆಲ್ಲಿಸಿದ್ದರೆ, ಹೊಸ ದಾಖಲೆ ನಿರ್ಮಾಣವಾಗುತ್ತಿತ್ತು.

ಆಸ್ಟ್ರೇಲಿಯಾ ತಂಡ ಒಟ್ಟು ಮೊತ್ತದ ಶೇ 67.35ರಷ್ಟು ಸ್ಕೋರನ್ನು ಸಿ ಬ್ಯಾನರ್ ಮ್ಯಾನ್ ಒಬ್ಬರೇ ಗಳಿಸಿದ್ದರು. 1877ರ ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ 245ರನ್ ಗಳಿಸಿತ್ತು. ಇದರಲ್ಲಿ 165ರನ್ ಬ್ಯಾನರ್ ಮ್ಯಾನ್ ಅವರದ್ದೆ ಸ್ಕೋರ್.
ಕೆಎಲ್ ರಾಹುಲ್ ಅವರು ಐದನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದ ಸಂದರ್ಭದಲ್ಲಿ ಶೇ 64.66 ರಂತೆ ಸ್ಕೋರ್ ಮಾಡಿದ್ದರು.

Have a great day!
Read more...

English Summary

India vs England: KL Rahul Hits Fifth Test Century Twitterati hailed him for his incredible knock. Rahul also broke many records.