ಭಾರತದ ವಿರುದ್ಧದ ಸೆಣೆಸಾಟಕ್ಕೆ ವಿಂಡೀಸ್ ತಂಡ ಪ್ರಕಟ


ಭಾರತ ಹಾಗೂ ವೆಸ್ಟ್ಇಂಡೀಸ್ ಟಿ20 ಹಾಗೂ ಏಕದಿನ ಸರಣಿಗೆ ವಿಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಇನ್ನು ಒಂದೇ ವಾರದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟಿ-ಟ್ವೆಂಟಿ ಸರಣಿ ಆರಂಭವಾಗಲಿದ್ದು ಕಿರಾನ್ ಪೊಲ್ಲಾರ್ಡ್ ಈ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅಫ್ಘಾನಿಸ್ತಾನದ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡ ತಂಡವನ್ನೇ ಭಾರತದ ವಿರುದ್ಧವೂ ಉಳಿಸಿಕೊಳ್ಳಲಾಗಿದೆ. ಅಫ್ಘಾನಿಸ್ತಾನದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಂಡಿಸ್ ಕ್ಲೀನ್ ಸ್ವೀಪ್ ಮಾಡಿದ್ದರೆ ಟಿ-ಟ್ವೆಂಟಡಿ ಸರಣಿಯನ್ನು 2-1ಅಂತರದಿಂದ ವಶಕ್ಕೆ ಪಡೆದಿತ್ತು.

Explore Now: Cricket World Cup Action LIVE!
Advertisement

ಭಾರತ vs ವಿಂಡೀಸ್: ಭಾರತ ತಂಡದಲ್ಲಿ ಶಿಖರ್ ಧವನ್ ಬದಲು ಸಂಜುಗೆ ಸ್ಥಾನ!

ಡಿಸೆಂಬರ್ 6,8 ಮತ್ತು 11 ರಂದು ಮೂರು ಪಂದ್ಯಗಳ ಟಿಟ್ವೆಂಟಿ ಸರಣಿ ಮೊದಲಿಗೆ ಆರಂಭವಾಗಲಿದೆ. ಬಳಿಕ ಮೂರು ಏಕದಿನ ಪಂದ್ಯಗಳ ಸರಿಯಲ್ಲೂ ವೆಸ್ಟ್‌ಇಂಡೀಸ್ ಭಾಗಿಯಾಗಲಿದೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ದೃಷ್ಟಿಯಿಂದ ಎರಡೂ ದೇಶಗಳ ಪಾಲಿಗೆ ಈ ಸರಣಿ ಸಾಕಷ್ಟು ಮಹತ್ವದ್ದಾಗಿದೆ.

ಟಿ-20 ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಮೂರು ಪಂದ್ಯಗಳ ಏಕದಿನ ಸರಣಿಯೂ ಆರಂಭವಾಗಲಿದೆ. ಡಿಸೆಂಬರ್ 15, 18 ಮತ್ತು 22 ರಂದು ಕ್ರಮವಾಗಿ ಚೆನ್ನೈ, ವಿಶಾಖಪಟ್ಟಣಂ, ಮತ್ತು ಕಟಕ್‌ನಲ್ಲಿ ನಡೆಯಲಿದೆ.

Advertisement

ಭಾರತದ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಇತ್ತೀಚೆಗಷ್ಟೇ ವೆಸ್ಟ್‌ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಪ್ರಕಟಿಸಿದ್ದರು. ಅವರ ಜೊತೆಗೆ ಮತ್ತೋರ್ವ ಬಿಗ್‌ಹಿಟ್ಟರ್ ಆಂದ್ರೆ ರಸೆಲ್ ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಭಾರತ-ವಿಂಡೀಸ್ ಸರಣಿಯಿಂದ ಟಿವಿ ಅಂಪೈರ್‌ ಮೇಲೆ ಐಸಿಸಿ ಹದ್ದಿನ ಕಣ್ಣು!

ವೆಸ್ಟ್‌ ಇಂಡೀಸ್ ಟಿ 20 ತಂಡ: ಫ್ಯಾಬಿಯನ್ ಅಲೆನ್, ಬ್ರಾಂಡನ್ ಕಿಂಗ್, ದಿನೇಶ್ ರಾಮ್ಡಿನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೂಯಿಸ್, ಶೆರ್ಫೇನ್ ರುದರ್ಫೋರ್ಡ್, ಶಿಮ್ರಾನ್ ಹೆಟ್ಮೇರ್, ಖಾರಿ ಪಿಯರೆ, ಲೆಂಡ್ಲ್ ಸಿಮ್ಮನ್ಸ್, ಜೇಸನ್ ಹೋಲ್ಡರ್, ಕೀರನ್ ಪೊಲಾರ್ಡ್ (ನಾಯಕ), ಹೇಡನ್ ವಾಲ್ಶ್ ಜೂನಿಯರ್, ಕೀಮೋ ಪಾಲ್, ನಿಕೋಲಸ್ ಪೂರನ್ , ಕೆಸ್ರಿಕ್ ವಿಲಿಯಮ್ಸ್.

Advertisement

ವೆಸ್ಟ್‌ಇಂಡೀಸ್ ಏಕದಿನ ತಂಡ: ಸುನಿಲ್ ಆಂಬ್ರಿಸ್, ಶಯ್ ಹೋಪ್, ಖಾರಿ ಪಿಯರೆ, ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಕೀರನ್ ಪೊಲಾರ್ಡ್ (ನಾಯಕ), ಶೆಲ್ಡನ್ ಕಾಟ್ರೆಲ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಸಿಮ್ರಾನ್ ಹೆಟ್ಮೆರ್, ಎವಿನ್ ಲೂಯಿಸ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಕೀಮೋ ಪಾಲ್, ಹೇಡನ್ ವಾಲ್ಶ್ ಜೂನಿಯರ್

English Summary

Kieron Pollard will continue to lead both the ODI and T20 squads with Nicholas Pooran as his deputy in the shorter format and Shai Hope taking over the role of the vice-captain in the ODIs.