ಯುವರಾಜ್ ಜೊತೆ ಪಂಜಾಬಿ ಮಾತನಾಡಿದ ವಾಲ್ಟನ್: ತಮಾಷೆಯ ವಿಡಿಯೋ


ಅಬು ಧಾಬಿ, ನವೆಂಬರ್ 19: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ ಬಳಿಕ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್, ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಂಡು ಕ್ರಿಕೆಟ್‌ ಆಟವನ್ನು ಸವಿಯುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಸದ್ಯ ಯುವಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯುತ್ತಿರುವ ಟಿ10 ಲೀಗ್‌ನಲ್ಲಿ ಆಡುತ್ತಿದ್ದಾರೆ.

Advertisement

ಅಜಿಂಕ್ಯಾ ಕನಸಿನಲ್ಲಿ ಕಾಡುತ್ತಿರೋದು ಯಾರು?

ಅಬು ಧಾಬಿ ಟಿ10 ಲೀಗ್‌ನಲ್ಲಿ ಮರಾಠಾ ಅರೇಬಿಯನ್ಸ್‌ ಪರ ಬ್ಯಾಟ್‌ ಬೀಸುತ್ತಿರುವ ಸಿಕ್ಸರ್ ಕಿಂಗ್, ಆರಂಭಿಕ ಪಂದ್ಯದಲ್ಲಿ 6 ಎಸೆತಗಳಿಗೆ 6 ರನ್ ಬಾರಿಸಿದ್ದರೆ, ದ್ವಿತೀಯ ಪಂದ್ಯದಲ್ಲಿ 6 ಎಸೆತಗಳಿಗೆ 14 ರನ್ ಸಿಡಿಸಿದ್ದರು. ಇದರಲ್ಲಿ 2 ಸಿಕ್ಸರ್‌ಗಳೂ ಸೇರಿದ್ದವು.

Explore Now: Cricket World Cup Action LIVE!
Advertisement

ಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋ

ಟಿ10 ಲೀಗ್‌ ಮೂಲಕ ಮತ್ತೆ ಮೈದಾನಕ್ಕಿಳಿದಿರುವುದರಿಂದ ಹೊಸ ಹುರುಪಿನಲ್ಲಿರುವ ಯುವಿ, ಟ್ವಿಟರ್‌ನಲ್ಲಿ ತಮಾಷೆಯ ವಿಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಚಾಡ್ವಿಕ್ ವಾಲ್ಟನ್ ಪಂಜಾಬಿ ಮಾತನಾಡಲು ಯತ್ನಿಸಿದ್ದಾರೆ.

ವಿದೇಶಿ ಆಟಗಾರ ವಾಲ್ಟನ್ ಪಂಜಾಬಿ ಭಾಷೆಗೆ ನಗು ಹತ್ತಿಕ್ಕಲಾರದೆ ಯುವಿ ನಕ್ಕಿರುವ ಈ ವಿಡಿಯೋ ನೋಡಲು ತಮಾಷೆಯಾಗಿದೆ. ಚಾಡ್ವಿಕ್ ವಾಲ್ಟನ್ ಇಬ್ಬರೂ ಟಿ10 ಲೀಗ್‌ನಲ್ಲಿ ಮರಾಠಾ ಅರೇಬಿಯನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಟೂರ್ನಿಯಲ್ಲಿ 2 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿದ್ದ ಚಾಡ್ವಿಕ್ ಕ್ರಮವಾಗಿ 24, 7 ರನ್ ಬಾರಿಸಿದ್ದರು.

English Summary

After calling it quits from Indian cricket, Yuvraj Singh is hopping all across the globe taking part in different tournaments and wowing the audience the world over.
Advertisement