ಸಾಫ್ ಚಾಂಪಿಯನ್ ಶಿಪ್: 3-1ರಿಂದ ಪಾಕ್ ಸೋಲಿಸಿದ ಭಾರತ ಫೈನಲ್ ಗೆ


ಢಾಕಾ, ಸೆಪ್ಟೆಂಬರ್ 12: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 12ನೇ ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್ (ಸಾಫ್) ಚಾಂಪಿಯನ್ ಶಿಪ್ ನ ಸೆಮಿಫೈನಲ್ ನಲ್ಲಿ ಭಾರತದ ಪುರುಷರ ತಂಡ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

Advertisement

ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!

ಸೆಪ್ಟೆಂಬರ್ 12ರ ಬುಧವಾರ ನಡೆದ ಭಾರತ-ಪಾಕಿಸ್ಥಾನ ಸೆಮಿಫೈನಲ್ ಮುಖಾಮುಖಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು 3-1ರಿಂದ ಮಣಿಸಿ ಮುನ್ನಡೆ ಸಾಧಿಸಿತು. ಭಾರತದ ಮನ್ವೀರ್ ಸಿಂಗ್ ಅವರು ಆರಂಭಿಕ ಎರಡು ಗೋಲ್ (49, 69ನೇ ನಿಮಿಷ) ಬಾರಿಸಿ ಭಾರತಕ್ಕೆ 2-0 ಮುನ್ನಡೆ ಕೊಟ್ಟರು.

Explore Now: Cricket World Cup Action LIVE!
Advertisement

ಆರಂಭದಿಂದಲೂ ಧಾಳಿಕಾರಕ ಆಟ ಪ್ರದರ್ಶಿಸಿದ ಭಾರತಕ್ಕೆ ಮನ್ವೀರ್ 2 ಗೋಲ್ ಬಾರಿಸಿ ಮುನ್ನಡೆ ಕೊಟ್ಟರೆ, ಸುಮೀತ್ ಪಾಸ್ಸಿ ಅವರು 83ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿ ಭಾರತಕ್ಕೆ ಭರ್ಜರಿ ಮುನ್ನಡೆ ಕೊಟ್ಟರು. ಆದರೆ ಪಾಕಿಸ್ತಾನ ಪರ 88ನೇ ನಿಮಿಷದಲ್ಲಿ ಹಸನ್ ಬಷೀರ್ ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿದರು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡ ನೇಪಾಲದೆದುರು 3-0ಯ ಭರ್ಜರಿ ಗೆಲುವು ಸಾಧಿಸಿ ಫೈನಲ್ ಗೆ ಪ್ರವೇಶಿಸಿದೆ. ಶನಿವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ತಂಡಗಳು ಮುಖಾಮುಖಿಯಾಗಲಿವೆ.

English Summary

India vs Pakistan Semi-Final Highlights: India defeated Pakistan 3-0 as they sealed a berth in the finals of the SAFF championship in Bangladesh.
Advertisement