ಸಾಫ್ ಕಪ್ ಫುಟ್ಬಾಲ್: ಇಂದು ಭಾರತ-ಪಾಕಿಸ್ತಾನ ಮುಖಾಮುಖಿ


ಢಾಕಾ, ಸೆಪ್ಟೆಂಬರ್ 12: ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಸಾಫ್ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ಸ್‌ನಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.

Advertisement

ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಮೂರು ವರ್ಷದ ಅಂತರದ ಬಳಿಕ ಪಾಕಿಸ್ತಾನ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಮರಳಿದ್ದು, ಈ ಪಂದ್ಯ ರೋಚಕವಾಗುವ ನಿರೀಕ್ಷೆ ಮೂಡಿಸಿದೆ.

Explore Now: Cricket World Cup Action LIVE!
Advertisement

ಭಾರತದಲ್ಲಿ ಹೆಚ್ಚಿನ ಆಟಗಾರರು 23 ವರ್ಷದೊಳಗಿನವರಾಗಿದ್ದಾರೆ.

ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿರುವ ಭಾರತ ಎರಡು ಪಂದ್ಯಗಳಲ್ಲಿ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ ತಂಡಗಳನ್ನು 2-0 ಅಂತರದ ಗೋಲುಗಳಿಂದ ಸೋಲಿಸಿತ್ತು. ಭಾರತ ಮತ್ತು ಪಾಕಿಸ್ತಾನಗಳು ಒಂದು ದಶಕದ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದು ಕುತೂಹಲವನ್ನು ಹೆಚ್ಚಿಸಿದೆ.

ಇನ್ನೊಂದೆಡೆ ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ತಂಡಗಳನ್ನು ಸೋಲಿಸಿತ್ತು. ಬಾಂಗ್ಲಾದೇಶದ ಎದುರು ಸೋಲು ಅನುಭವಿಸಿತ್ತು.

ಪಾಕಿಸ್ತಾನದ ಮಾಜಿ ನಾಯಕ ಕಲೀಮುಲ್ಲಾ ಗಾಯಗೊಂಡಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಿದೆ.

ಈ ಟೂರ್ನಿಯಲ್ಲಿ ಪಾಕಿಸ್ತಾನ 2005ರ ಬಳಿಕ ಮೊದಲ ಬಾರಿಗೆ ಸೆಮಿಫೈನಲ್ಸ್ ಹಂತ ಪ್ರವೇಶಿಸಿದೆ.

English Summary

India Takes on Pakistan in Dhaka in the SAFF Cup Simi Finals at Dhaka on Wednesday.
Advertisement