ಅಂತಾರಾಷ್ಟ್ರೀಯ ಹಾಕಿಯಿಂದ ಮಾಜಿ ನಾಯಕ ಸರ್ದಾರ್ ಸಿಂಗ್ ನಿವೃತ್ತಿ


ನವದೆಹಲಿ, ಸೆಪ್ಟೆಂಬರ್ 12: ಭಾರತದ ಅನುಭವಿ ಹಾಕಿ ಆಟಗಾರ ಸರ್ದಾರ್ ಸಿಂಗ್ ಅವರು ತಮ್ಮ ಹಾಕಿ ಶೂವನ್ನು ಕಳಚಿಡಲು ನಿರ್ಧರಿಸಿದ್ದಾರೆ. ಹತ್ತಿರ 350 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಿಂಗ್‌ ಇಂದು (ಸೆಪ್ಟೆಂಬರ್ 12) ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ.

ಸಚಿನ್ ಗೆ ಕಾಮೆಂಟ್ ಮಾಡಿ ಮೈಮೇಲೆ ಇರುವೆ ಬಿಟ್ಟುಕೊಂಡ ಶ್ರೀರೆಡ್ಡಿ

ಸುಮಾರು 12 ವರ್ಷಗಳ ಕಾಲ ಸರ್ದಾರ್ ಸಿಂಗ್ ಭಾರತ ಹಾಕಿ ತಂಡದಲ್ಲಿದ್ದು ತಂಡದ ಯಶಸ್ಸಿಗೆ ಶ್ರಮಿಸಿದ್ದರು. ಸಿಂಗ್ ಅವರನ್ನೊಳಗೊಂಡ ಭಾರತದ ಪುರುಷರ ಹಾಕಿ ತಂಡ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿತ್ತು.

ನಿವೃತ್ತಿ ಬಗ್ಗೆ ಮಾತನಾಡುತ್ತ 32ರ ಹರೆಯದ ಸಿಂಗ್, '12 ವರ್ಷಗಳಷ್ಟು ಕಾಲ ನಾನು ದೇಶಕ್ಕಾಗಿ ಹಾಕಿ ಮೈದಾನದಲ್ಲಿ ಓಡಾಡಿಕೊಂಡಿದ್ದೆ. ಇದು ನನ್ನ ಮಟ್ಟಿಗೆ ದೀರ್ಘ ಕಾಲವೆ. ಇನ್ನೇನಿದ್ದರೂ ಹಿಂದೆ ಸರಿದು ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡಬೇಕಿದೆ. ಅದಕ್ಕಿದು ಸಕಾಲ' ಎಂದರು.

ಸರ್ದಾರ್ ಸಿಂಗ್ ಅವರನ್ನು ಕೊಂಚ ದಿನ ಭಾರತ ತಂಡದಿಂದ ಹೊರಗಿಡಲಾಗಿತ್ತು. ಅವಿರತ ಶ್ರಮವಹಿಸಿದ್ದರಿಂದ ಹಾಕಿ ಚಾಂಪಿಯನ್ಸ್ ಟ್ರೋಫಿಗಾಗಿ ಸಿಂಗ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಬೆಳ್ಳಿ ಜಯಿಸಿತ್ತು.

ತನ್ನನ್ನು ತಂಡದಿಂದ ಹೊರಗಿಟ್ಟಾಗ ನೊಂದುಕೊಂಡಿದ್ದ ಸಿಂಗ್ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು. ಇದರ ಫಲವಾಗಿಯೇ ಸಿಂಗ್ ಇತ್ತೀಚೆಗೆ ನಡೆಸಲಾದ ಯೋ ಯೋ ಫಿಟ್ನೆಸ್ ಟೆಸ್ಟ್ ನಲ್ಲಿ ದಾಖಲೆಯ 21.4 ಅಂಕ ಗಳಿಸಿದ್ದರು. ಈ ಅಂಕ ಟೀಮ್ ಇಂಡಿಯಾ ನಾಯಕ ಕೊಹ್ಲಿಯ ಯೋಯೋಟೆಸ್ಟ್ ಅಂಕವನ್ನು ಹಿಂದಿಕ್ಕಿತ್ತು.

Have a great day!
Read more...

English Summary

Sardar Singh, a veteran of Indian hockey has finally decided to hang his boots. With over 350 international appearances for the country,