WWE ತಾರೆ ಡ್ವೇಯ್ನ್ ದಿ ರಾಕ್ ಜಾನ್ಸನ್ ಕುಟುಂಬದಲ್ಲಿ ಕೊರೊನಾ ವೈರಸ್


'ದಿ ರಾಕ್' ಎಂದೇ ಖ್ಯಾತರಾಗಿರುವ ಡಬ್ಲ್ಯುಡಬ್ಲ್ಯುಇ ನ ಸ್ಟಾರ್ ರೆಸ್ಲರ್ ಹಾಗೂ ಹಾಲಿವುಡ್ ನಟ ಡ್ವೇಯ್ನ್ ಜಾನ್ಸನ್ ಕುಟುಂಬ ಕೊರೊನಾ ವೈರಸ್‌ಗೆ ತುತ್ತಾಗಿರುವುದನ್ನು ಅವರು ಬಹಿರಂಗ ಪಡಿಸಿದ್ದಾರೆ, ಆದರೆ ಈಗ ಎಲ್ಲರೂ ಚೇತರಿಸಿಕೊಂಡಿದ್ದು ಕೊರೊನಾ ವೈರಸ್ ಮುಕ್ತರಾಗಿರುವುದಾಗಿ ಅವರು ಘೋಷಿಸಿದ್ದಾರೆ.

Advertisement

ಬುಧವಾರ ಡ್ವೇಯ್ನ್ ಜಾನ್ಸನ್ ಈ ಬಗ್ಗೆ ಅಭಿಮಾನಿಗಳ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೆಲ ವಾರಗಳ ಹಿಂದೆ ಜಾನ್ಸನ್ ಸೇರಿದಂತೆ ಜಾನ್ಸನ್ ಪತ್ನಿ ಹಾಗೂ ಇಬ್ಬರು ಪಕ್ಕಳು ಕೊರೊನಾ ವೈರಸ್‌ಗೆ ತುತ್ತಾಗಿದ್ದು ಈಗ ಎಲ್ಲರೂ ಸಂಪೂರ್ಣ ವಾಗಿ ಚೇತರಿಸಿಕೊಂಡಿರುವುದಾಗಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿಯನ್ನು ನೀಡಿದ್ದಾರೆ.

Explore Now: Cricket World Cup Action LIVE!
Advertisement

ಪ್ಯಾರಿಸ್ ಸೇಂಟ್ ಜರ್ಮೈನ್ ಸ್ಟಾರ್ ಆಟಗಾರ ನೇಮರ್‌ಗೆ ಕೊರೊನಾ ಸೋಂಕು

48 ವರ್ಷದ ಜಾನ್ಸನ್ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಾನು ಹಾಗೂ 35 ವರ್ಷದ ಮಡದಿ ಲಾರೆನ್, ಮಕ್ಕಳಾದ 4 ವರ್ಷದ ಜಾಸ್ಮಿನ್ ಹಾಗೂ 2 ವರ್ಷದ ಟಿಯಾನಾ ಕಳೆದ ಎರಡು ವಾರಗಳ ಹಿಂದೆ ಕೊರೊನಾ ವೈರಸ್‌ಗೆ ತುತ್ತಾಗಿದ್ದರು ಎಂದು ತಿಳಿಸಿದ್ದಾರೆ. ಕುಟುಂಬ ಆತ್ಮೀಯ ಸ್ನೇಹಿತರಿಂದ ಈ ಸೋಂಕು ಹರಿಡಿರುವುದನ್ನು ಅವರು ಹಂಚಿಕೊಂಡಿದ್ದಾರೆ.

ಇದು ನನ್ನ ಬದುಕಿನಲ್ಲಿ ಕುಟುಂದ ವಿಚಾರವಾಗಿ ನಾನು ಎದುರಿಸಿದ ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ರಾಕ್ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ತನ್ನ ಕುಟುಂಬಕ್ಕೆ ವೈರಸ್ ಹರಡಲು ಕಾರಣರಾದ ಸ್ನೇಹಿತನ ಕುಟುಂಬ ವೈರಸ್ ವಿರುದ್ಧ ಕಠಿಣ ಸುರಕ್ಷತೆಯನ್ನು ವಹಿಸಿಕೊಂಡಿತ್ತು ಹಾಗಿದ್ದರೂ ಅದು ಹರಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

Advertisement

ಪಬ್‌ಜಿ ಸೇರಿದಂತೆ 118 ಮೊಬೈಲ್ ಆ್ಯಪ್‌ಗಳ ಬ್ಯಾನ್ ಮಾಡಿದ ಕೆಂದ್ರ ಸರ್ಕಾರ!

'ನಾವೀಗ ಸಂಪೂರ್ಭವಾಗಿ ಗುಣಮುಖರಾಗಿದ್ದೇವೆ ಎಂದು ಸಂತಸದಿಂದ ಹೇಳುತ್ತಿದ್ದೇನೆ. ನಮ್ಮ ಕುಟುಂಬ ಈಗ ಸಂಪೂರ್ಣವಾಗಿ ಆರೋಗ್ಯದಿಂದ ಇದೆ ಎಂದು ದಿ ರಾಕ್ ಖ್ಯಾತೊಯ ಡ್ವೇನ್ ಜಾನ್ಸನ್ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

English Summary

Johnson, 48, said in the Instagram post that he and his spouse, Lauren, 35, and their daughters, Jasmine, 4, and Tiana, 2, caught the virus about 2-1/2 weeks ago.
Advertisement