ಪಿ.ವಿ ಸಿಂಧು ಬಯೋಪಿಕ್ ನಲ್ಲಿ ಅಕ್ಷಯ್ ಕುಮಾರ್ ಕೋಚ್?

By ಮಂದಹಾಸಿನಿ
ತಯಾರಾಗುತ್ತಿದೆ ಸಿಂಧು ಬಯೋಪಿಕ್ | Akshay Kumar | FILMIBEAT KANANDA

ವಿಶ್ವ ದಾಖಲೆ ಬರೆದ ಭಾರತೀಯ ಹೆಮ್ಮೆಯ ಆಟಗಾರ್ತಿ ಪಿ.ವಿ ಸಿಂಧು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಐತಿಹಾಸಿಕ ಗೆಲವು ದಾಖಲಿಸಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುತ್ತಿನ ನಗರಿಯ ಬಂಗಾರದ ಹುಡುಗಿಯ ಸಾಧನೆಯನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಚಿನ್ನದ ಹುಡುಗಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.

ಇದರ ನಡುವೆ ಈಗ ಪಿ.ವಿ ಸಿಂಧು ಬಯೋಪಿಕ್ ಕೂಡ ಸದ್ದು ಮಾಡುತ್ತಿದೆ. ಕಳೆದ ಒಂದು ವರ್ಷದಿಂದನೆ ಪಿ.ವಿ ಸಿಂಧು ಬಯೋಪಿಕ್ ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೀಗ ಈ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ವರ್ಲ್ಡ್ ಚಾಂಪಿಯನ್‌ಷಿಪ್: ಬಂಗಾರ ಗೆದ್ದು ಇತಿಹಾಸ ಬರೆದ ಪಿವಿ ಸಿಂಧು

ವಿಶೇಷ ಅಂದ್ರೆ ಸಿಂಧು ಅವರ ಜೀವನಾಧಾರಿತ ಚಿತ್ರದಲ್ಲಿ ಕೋಚ್ ಪಾತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರವನ್ನು ಖಿಲಾಡಿ ಅಕ್ಷಯ್ ಕುಮಾರ್ ನಿಭಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗೋಪಿಚಂದ್ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ನ್ಯಾಷನಲ್ ಕೋಚ್ ಆಗಿದ್ದಾರೆ. ಗೋಪಿಚಂದ್ ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ದ್ರೋಣಾಚಾರ್ಯ, ಪದ್ಮಭೂಷಣ್ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರಂತೆ.

ಈ ಬಗ್ಗೆ ಗೋಪಿಚಂದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಅಕ್ಷಯ್ ಕುಮಾರ್ ಎಂದರೆ ಇಷ್ಟ. ನಾನು ಇಷ್ಟಪಡುವ ವ್ಯಕ್ತಿಗಳಲ್ಲಿ ಅವರು ಒಬ್ಬರು. ನನ್ನ ಪಾತ್ರ ಮಾಡಿದ್ದರೆ ಅದ್ಭುತವಾಗಿರುತ್ತೆ. ಆದ್ರೆ ಬಯೋಪಿಕ್ ಬಗ್ಗೆ ನನಗೆ ಸ್ಪಷ್ಟನೆ ಇಲ್ಲ" ಎಂದು ಹೇಳಿದ್ದಾರೆ.

ವಿಶ್ವ ಚಾಂಪಿಯನ್ ಪಿವಿ ಸಿಂಧು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

ಒಟ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಪಿ.ವಿ ಸಿಂಧು ಬಯೋಪಿಕ್ ಯಾವಾಗ ಸೆಟ್ಟೇರುತ್ತೆ? ಸಿಂಧು ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ? ಎನ್ನುವ ಸಾಕಷ್ಟು ಕುತೂಹಲಕಾರಿ ಅಂಶಗಳು ಚಿತ್ರಾಭಿಮಾನಿಗಳು ಮತ್ತು ಕ್ರೀಡಾಭಿಮಾನಿಗಳನ್ನು ಕಾಡುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, August 28, 2019, 13:19 [IST]
Other articles published on Aug 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X