ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸಿಂಧು, ಸೈನಾ ಹೊರಕ್ಕೆ

ವೂಹಾನ್, ಏಪ್ರಿಲ್ 26: ಶುಕ್ರವಾರ (ಏಪ್ರಿಲ್ 26) ಚೀನಾದ ವೂಹಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗ್ಸ್‌ನಿಂದ ಭಾರತದ ಭರವಸೆಯ ಆಟಗಾರ್ತಿಯರಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಹೊರ ಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಟೂರ್ನಿಯಲ್ಲಿ ಇಬ್ಬರ ಸವಾಲೂ ಅಂತ್ಯಗೊಂಡಿದೆ.

ದೇಹ ಸ್ಪಂದಿಸುವಷ್ಟು ಕಾಲ ಭಾರತ ದೇಶಕ್ಕಾಗಿ ಆಡುತ್ತೇನೆ: ಸುನಿಲ್ ಛೆಟ್ರಿ

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸೈನಾ, ಜಪಾನ್‌ನ ಅಕಾನೆ ಯಮಗುಚಿ ಎದುರು 13-21, 23-21, 16-21ರ ಸೋಲನುಭವಿಸಿದರು. ಮಾಜಿ ವಿಶ್ವ ನಂ.1 ಆಟಗಾರ್ತಿ ಸೈನಾ, ಜಪಾನ್ ಬಲಾಡ್ಯೆಯೆದುರು ಭಾರೀ ಸೆಣಸಾಟ ನಡೆಸಿದರಾದರೂ ಮುನ್ನಡೆ ಗಿಟ್ಟಿಸಿಕೊಳ್ಳಲಾಗಲಿಲ್ಲ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಅವರೂ ಚೀನಾದ ಕೈ ಯನ್ಯಾನ್ ಎದುರು 19-21, 9-21ರ ನೇರ ಸೆಟ್ ಹಿನ್ನಡೆ ಕಂಡರು. ಈಗಿನ್ನೂ 19ರ ಹರೆಯದ ಯನ್ಯಾನ್ ಭರ್ಜರಿ ಆಟದ ಮೂಲಕ ಸಿಂಧು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಸವಾಲು ಅಂತ್ಯಗೊಳಿಸಿದ್ದರು.

For Quick Alerts
ALLOW NOTIFICATIONS
For Daily Alerts
Story first published: Friday, April 26, 2019, 17:53 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X