ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬ್ಯಾಡ್ಮಿಂಟನ್ ಕ್ರೀಡೆ ನಗರಕ್ಕೆ ಮಾತ್ರ ಸೀಮಿತವಾಗಬಾರದು: ಅರವಿಂದ್ ಭಟ್

Badminton Sports should not be limited to the city: Arvind

ಬೆಂಗಳೂರು, ಜುಲೈ 29: ಬ್ಯಾಡ್ಮಿಂಟನ್ ಕ್ರೀಡೆ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರತಿಭೆಗಳು ಸಹ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಬ್ಯಾಡ್ಮಿಂಟ್ ಮಾಜಿ ಚಾಂಪಿಯನ್ ಅರವಿಂದ್ ಭಟ್ ಹೇಳಿದರು. ಅವರು ವ್ಯಾನ್ಕಿಶರ್ ಸ್ಪೋರ್ಟ್ಸ್ 2018 ಚಾಂಪಿಯನ್ ಬ್ಯಾಡ್ಮಿಂಟನ್ ಎಕ್ಸ್ಟ್ರಾವ್ಯಾಗ್ನಜಾ ಮೂರನೇ ಆವೃತ್ತಿಯ ಟ್ರೋಫಿಯನ್ನು ಅನಾವರಣಗೊಳಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಮ್ರಾನ್ ಪ್ರಧಾನಿಯಾಗುತ್ತಾರೆ ಎಂದು 2012ರಲ್ಲೇ ಸನ್ನಿ ಭವಿಷ್ಯ!ಇಮ್ರಾನ್ ಪ್ರಧಾನಿಯಾಗುತ್ತಾರೆ ಎಂದು 2012ರಲ್ಲೇ ಸನ್ನಿ ಭವಿಷ್ಯ!

ಈ ರೀತಿಯ ಪಂದ್ಯಾವಳಿಗಳು ಆಟಗಾರರ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಕಾರಿಯಾಗಿದೆ. ಅಲ್ಲದೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಕನಸು ಸಾಕಾರಗೊಳಿಸಲು ಸಾಧ್ಯವಾಗದೆ ಎಲೆಮರೆ ಕಾಯಿಯಂತೆ ಉಳಿದಿರುವ ಉದಯೋನ್ಮುಖ ಪ್ರತಿಭೆಗಳನ್ನು ಇಂಥ ಟೂರ್ನಿಗಳು ಹೆಕ್ಕಿ ತೆಗೆಯಬಲ್ಲವು. ಎಲ್ಲದಕ್ಕಿಂತ ಮುಖ್ಯವಾಗಿ ಅವಕಾಶಗಳ ಕೊರತೆಯಿಂದ ಬಳಲುವ ಅನೇಕ ಪ್ರತಿಭಾನ್ವಿತರಿಗೆ ಇಂಥ ಪಂದ್ಯಾಟಗಳು ಸಹಕಾರಿ ಎಂದವರು ಅಭಿಪ್ರಾಯಪಟ್ಟರು.

ವ್ಯಾನ್ಕಿಶರ್ ಸ್ಪೋರ್ಟ್ಸ್ ಆಯೋಜಿಸಿರುವ 'ಚಾಂಪಿಯನ್ಸ್ ಬ್ಯಾಡ್ಮಿಂಟನ್ ಎಕ್ಸ್ಟ್ರಾವ್ಯಾಗ್ನಜಾ 2018' ರ ಮೂರನೇ ಆವೃತ್ತಿಯ ಹರಾಜು ದಿನವಾದ ಜುಲೈ 29ರದು ಪಂದ್ಯದ ಟ್ರೋಫಿಯನ್ನು ಅನಾವರಣ ಮಾಡಿ, ಪದ್ಯಾವಳಿಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ಪಂದ್ಯಾಟಕ್ಕಾಗಿ ತಂಡಗಳು ಮತ್ತು ಆಟಗಾರರನ್ನು ಘೋಷಿಸಲಾಗಿದ್ದು, ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯು ಆಗಸ್ಟ್ 31 ರಂದು ಪ್ರಾರಂಭವಾಗಲಿದೆ. ಫೈನಲ್ ಪಂದ್ಯವಳಿ ಸೆಪ್ಟೆಂಬರ್ 2ರಂದು ನಡೆಯಲಿದೆ.

ರಾಜ್ಯದಾದ್ಯಂತ ಸುಮಾರು 600 ಆಟಗಾರರು ಪಂದ್ಯಾವಳಿಗೆ ನೋಂದಾಯಿಸಿಕೊಂಡಿದ್ದಾರೆ. ಇಂದು (ಜು.29) ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂಕಗಳ-ಆಧಾರದಲ್ಲಿ 200 ಆಟಗಾರರನ್ನು 10 ತಂಡಗಳು ಪರಸ್ಪರ ಆಯ್ಕೆಮಾಡಿಕೊಂಡವು.

Badminton Sports should not be limited to the city: Arvind

ಚಾಂಪಿಯನ್ ಬ್ಯಾಡ್ಮಿಂಟನ್ ಎಕ್ಸ್ಟ್ರಾವ್ಯಾಗ್ನಜಾ 2018 ಟ್ರೋಫಿಯನ್ನು ಬ್ಯಾಡ್ಮಿಂಟನ್ ಚಾಂಪಿಯನ್ ಅರವಿಂದ್ ಭಟ್ ಅವರು ಅನಾವರಣಗೊಳಿಸಿದರು. ಈ ವೇಳೆ ತಂಡದ ಫ್ರಾಂಚೈಸಿ ಅನುಶೃತ್ ಮಾಂಚಿ, ವ್ಯಾನ್ಕಿಶರ್ ಕ್ರೀಡಾ ಸಂಸ್ಥಾಪಕ ಅಮೃತೇಶ್ ಜಿಎಸ್, ರಾಜ್ಯ ಶ್ರೇಯಾಂಕದ ಆಟಗಾರ ಸಂಜೀತ್, ಬೆಂಗಳೂರು ಶಿಕ್ಷಣ ಮತ್ತು ಕ್ರೀಡಾ ಟಸ್ಟ್ನ ಶರತ್ ಕಾಮತ್ ಮತ್ತು ರಾಜ್ಯ ಶ್ರೇಯಾಂಕದ ಆಟಗಾರ ಆದರ್ಶ್ ಇದ್ದರು.

Badminton Sports should not be limited to the city: Arvind

ವಿವಿಧ ತಂಡಗಳ ಜರ್ಸಿಗಳನ್ನು ಅರವಿಂದ್ ಭಟ್ ಅವರು ಅನಾವರಣ ಮಾಡಿದರು. ತಂಡದ ಫ್ರಾಂಚೈಸಿ ಮತ್ತು ಆಟಗಾರರು ಜೊತೆಯಲ್ಲಿದ್ದರು.

Story first published: Sunday, July 29, 2018, 21:35 [IST]
Other articles published on Jul 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X