ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವಶ್ರೇಷ್ಠ ಶಟ್ಲರ್ ಲೀ ಚೊಂಗ್ ಆಟವನ್ನೇ ಕೊನೆಗೊಳಿಸಿದ ಮಾರಕ ಖಾಯಿಲೆ!

Badminton star Lee Chong Wei retires after cancer battle

ಕೌಲಾಲಂಪುರ್, ಜೂನ್ 13: ಆಡುತ್ತಾ ವಯಸ್ಸಾಗುತ್ತಾ ಹೋದಂತೆ ಕೈ ಸೋಲಲು ಶುರುವಾಗಿ ಆಟ ನಿಲ್ಲಿಸಬೇಕು ಅನ್ನಿಸಿದಾಗ ವಿಶ್ವಶ್ರೇಷ್ಠ ಆಟಗಾರನೊಬ್ಬ ನಿವೃತ್ತಿ ಘೋಷಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ ಆಡೋ ಹಂಬಲದಲ್ಲಿರುವಾಗಲೇ ಮಾರಕ ಖಾಯಿಲೆಯೊಂದು ಆಡದಂತೆ ತಡೆದರೆ? ಬ್ಯಾಡ್ಮಿಂಟನ್ ಆಟಗಾರ ಲೀ ಚೊಂಗ್ ವೈ ಇಂಥದ್ದೇ ದುರ್ವಿಧಿಗೆ ಗುರಿಯಾಗಿದ್ದಾರೆ.

ಲೀ ಚಾಂಗ್ ವೀಗೆ ಐತಿಹಾಸಿಕ 12ನೇ ಮಲೇಷ್ಯಾ ಓಪನ್ ಪ್ರಶಸ್ತಿಲೀ ಚಾಂಗ್ ವೀಗೆ ಐತಿಹಾಸಿಕ 12ನೇ ಮಲೇಷ್ಯಾ ಓಪನ್ ಪ್ರಶಸ್ತಿ

ಮಲೇಷ್ಯಾದ ಸ್ಟಾರ್ ಆಟಗಾರ ಲೀ ಚೊಂಗ್ ವೈ ಅವರು ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಾರಕ ಕ್ಯಾನ್ಸರ್ ಖಾಯಿಲೆಯಿಂದಾಗಿ ಲೀ ಚೊಂಗ್ ಬ್ಯಾಡ್ಮಿಂಟನ್ ರ್ಯಾಕೆಟ್ ಕೆಳಗಿಡುವಂತಾಗಿದೆ. ಗುರುವಾರ (ಜೂನ್ 13) ಲೀ ಚೊಂಗ್ ನಿವೃತ್ತಿ ಹೇಳಿದ್ದಾರೆ.

ಲೀ ಚಾಂಗ್‌ರಿಂದ ವಿಶ್ವ ಚಾಂಪಿಯನ್‌ಷಿಪ್ ಕಿತ್ತುಕೊಂಡ ಕ್ಯಾನ್ಸರ್ ಖಾಯಿಲೆ!ಲೀ ಚಾಂಗ್‌ರಿಂದ ವಿಶ್ವ ಚಾಂಪಿಯನ್‌ಷಿಪ್ ಕಿತ್ತುಕೊಂಡ ಕ್ಯಾನ್ಸರ್ ಖಾಯಿಲೆ!

ನಿವೃತ್ತಿ ತಿಳಿಸಿ ಮಾತನಾಡಿದ ಲೀ ಚೊಂಗ್ ವೈ, 'ನಿವೃತ್ತಿ ಘೋಷಿಸಲು ಮನಸ್ಸು ಭಾರತವಾಗುತ್ತಿದೆ. ನಾನು ನಿಜಕ್ಕೂ ಈ ಆಟವನ್ನು ಪ್ರೀತಿಸುತ್ತಿದ್ದೆ. 19 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಒಂದಿಲ್ಲೊಂದು ಕಾರಣಕ್ಕೆ ನನ್ನ ನೆರವಿಗೆ ನಿಂತ ಮಲೇಷಿಯನ್ನರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ' ಎಂದರು.

Badminton star Lee Chong Wei retires after cancer battle

ಮೂಗಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಲೀ ಚೊಂಗ್‌ಗೆ 36ರ ಹರೆಯ. ಅವರಿಗೆ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಖಾಯಿಲೆ ಆರಂಭಿಕ ಹಂತದಲ್ಲಿದ್ದಾಗ ತೈವಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೀ ಚೊಂಗ್ ತಾನು ಬ್ಯಾಡ್ಮಿಂಟನ್ ಅಂಗಳಕ್ಕೆ ವಾಪಸ್ಸಾಗುವ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಉಲ್ಬಣಿಸುತ್ತಿರುವ ಕ್ಯಾನ್ಸರ್ ಮಾರಿ ಮತ್ತೆ ಆಡಲು ಚೊಂಗ್ ವೈಗೆ ಅವಕಾಶವನ್ನೇ ನೀಡಲಿಲ್ಲ.

ವಿಶ್ವ ನಂ.2 ಬ್ಯಾಡ್ಮಿಂಟನ್ ಆಟಗಾರ ಲೀ ಚೊಂಗ್ ವೈಗೆ ಮೂಗಿನ ಕ್ಯಾನ್ಸರ್!ವಿಶ್ವ ನಂ.2 ಬ್ಯಾಡ್ಮಿಂಟನ್ ಆಟಗಾರ ಲೀ ಚೊಂಗ್ ವೈಗೆ ಮೂಗಿನ ಕ್ಯಾನ್ಸರ್!

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಬರೋಬ್ಬರಿ 12 ಸಾರಿ ಚಾಂಪಿಯನ್ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಲೀ ಚೊಂಗ್ ವೈ ಪಾತ್ರರಾಗಿದ್ದರು. ಮೂರು ಸಾರಿ ಒಲಿಂಪಿಕ್ಸ್ ಬೆಳ್ಳಿ ಪದಕವನ್ನೂ ಜಯಿಸಿದ್ದರು. ಒಲಿಂಪಿಕ್ಸ್ ಬಂಗಾರ ಗೆಲ್ಲುವ ಆಸೆಯನ್ನಿಸಿರಿಕೊಂಡಿದ್ದ ಲೀ ಚೊಂಗ್ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಯೋಚಿಸಿದ್ದರು. ಆದರೆ...

Story first published: Thursday, June 13, 2019, 13:46 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X