ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'#metoo' ಅಭಿಯಾನಕ್ಕೆ ದನಿ ಸೇರಿಸಿದ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು

Badminton star PV Sindhu lends her support to metoo movement

ನವದೆಹಲಿ, ಅಕ್ಟೋಬರ್ 10: ಇತ್ತೀಚೆಗೆ ಪ್ರಚಲಿತದಲ್ಲಿರುವ #metoo ಅಭಿಯಾನಕ್ಕೆ ಬ್ಯಾಡ್ಮಿಂಟನ್ ಸ್ಟಾರ್ ಜ್ವಾಲಾ ಗುಟ್ಟಾ ಅವರು ಬೆಂಬಲಿಸಿದ ಬಳಿಕ ಮತ್ತೊಬ್ಬ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಅವರೂ ಈ ಲೈಂಗಿಕ ಕಿರುಕುಳ ವಿರೋಧಿ ಅಭಿಯಾನದ ಬೆಂಬಲಕ್ಕೆ ನಿಂತಿದ್ದಾರೆ. (ಚಿತ್ರದಲ್ಲಿ ತಾಯಿಯೊಂದಿಗೆ ಸಿಂಧು)

ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಟಿಕೆಟ್ ದರ ಕಡಿಮೆ ಮಾಡಿದ ಎಸಿಎಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಟಿಕೆಟ್ ದರ ಕಡಿಮೆ ಮಾಡಿದ ಎಸಿಎ

ಬಾಲಿವುಡ್ ನಟಿ ತನುಶ್ರೀ ದತ್ತ ಅವರು ನಟ ನಾನಾ ಪಾಟೆಕರ್ ಅವರ ಮೇಲೆ ಮತ್ತು ವಿನ್ತಾ ನಂದಾ ಅವರು ಅಲೋಕ್ ನಾಥ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ನಂತರ #metoo ಅಭಿಯಾನ ತೀವ್ರಗೊಂಡಿತ್ತು.

ಐಪಿಎಲ್ ನಲ್ಲಿ ಪ್ರೀತಿ- ವಾಡಿಯಾ ಕಿತ್ತಾಟ, ಕೋರ್ಟಿನಲ್ಲಿ ಅರ್ಜಿ ವಜಾಐಪಿಎಲ್ ನಲ್ಲಿ ಪ್ರೀತಿ- ವಾಡಿಯಾ ಕಿತ್ತಾಟ, ಕೋರ್ಟಿನಲ್ಲಿ ಅರ್ಜಿ ವಜಾ

ಅನೇಕ ಪತ್ರಕರ್ತೆಯರೂ ಎನ್‌ಡಿಎ ಸರ್ಕಾರದ ಸಚಿವ ಎಂಜೆ ಅಕ್ಬರ್ ಮೇಲೆ ಅನುಚಿತ ವರ್ತನೆಯ ಆರೋಪ ಹೊರಿಸಿದ್ದರು. ಕಿರುಕುಳ ವಿರೋಧಿಸಿ ಮೊದಲ ಧ್ವನಿ ಕೇಳಿಸಿಕೊಂಡ ಬೆನ್ನಲ್ಲೇ ಅನೇಕ ಮಹಿಳಾ ಕಲಾವಿದರು, ತಾರೆಯರು ಇದಕ್ಕೆ ಧ್ವನಿ ಸೇರಿಸುತ್ತಿದ್ದಾರೆ.

ಧ್ವನಿಯೆತ್ತುವವರನ್ನು ಗೌರವಿಸುತ್ತೇನೆ

ಧ್ವನಿಯೆತ್ತುವವರನ್ನು ಗೌರವಿಸುತ್ತೇನೆ

'ಇಂಥ ಅನಿಷ್ಠದ ಬಗ್ಗೆ ಮುಂದೆ ಬಂದು ಮಾತನಾಡುವ ಧೈರ್ಯ ಮಾಡುವ ಎಲ್ಲರನ್ನೂ ನಾನು ಪ್ರಶಂಸಿಸುತ್ತೇನೆ, ಗೌರವಿಸುತ್ತೇನೆ' ಎಂದು ಮಹಿಳೆಯರಿಗೆ ಹೆಚ್ಚು ಪೂರಕವೆನಿಸುವ ವೋಡಾಫೋನ್ ಸೇವೆ 'ಸಖಿ'ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಂಧು ಹೇಳಿದರು.

ನಿಮ್ಮ ಗಮನಕ್ಕೆ ಬಂದಿದ್ಯಾ ಎಂದಾಗ..

ನಿಮ್ಮ ಗಮನಕ್ಕೆ ಬಂದಿದ್ಯಾ ಎಂದಾಗ..

ಕ್ರೀಡೆಗೆ ಸಂಬಂಧಿಸಿ ನಿಮ್ಮ ಗಮನಕ್ಕೆ ಬಂದಿರುವಂತೆ ಇಂಥ ಘಟನೆಗಳಾಗಿದ್ದಿದೆಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಧು, 'ನನ್ನ ಹಿರಿಯ ಆಟಗಾರರು ಮತ್ತು ತರಬೇತುದಾರರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಕೆಲವಾರು ಕ್ರೀಡಾದಿನಗಳನ್ನು ಕುರಿತು ಹೇಳೋದಾದ್ರೆ ಇಂಥದ್ದಾಗಿದ್ದಿಲ್ಲ' ಎಂದರು.

ಮಾನಸಿಕ ಕಿರುಕುಳ

ಮಾನಸಿಕ ಕಿರುಕುಳ

ಇದಕ್ಕೂ ಮುನ್ನ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾಗುಟ್ಟಾ ಅವರು ತರಬೇತುದಾರರೊಬ್ಬರು ನನಗೆ ಮಾನಸಿಕ ಕಿರುಕುಳ ನೀಡಿದ್ದರು ಎಂದು ದೂರಿದ್ದರು. ಸರಣಿ ಟ್ವೀಟ್ ಗಳ ಮೂಲಕ, ಕೋಚ್ ಒಬ್ಬರು ನನಗೆ ಕಿರುಕುಳ ನೀಡಿದ್ದರು ಎಂದು ದೂರಿದ್ದ ಗುಟ್ಟಾ, ಕೋಚ್ ಹೆಸರನ್ನಾಗಲಿ, ಕಿರುಕುಳ ಲೈಂಗಿಕತೆಗೆ ಸಂಬಂಧಿಸಿದ್ದೇ ಎಂಬುದನ್ನಾಗಲಿ ಎಲ್ಲೂ ತಿಳಿಸಿರಲಿಲ್ಲ.

ಆಟ ನಿಲ್ಲಿಸಲು ಇದೂ ಕಾರಣ

ಆಟ ನಿಲ್ಲಿಸಲು ಇದೂ ಕಾರಣ

'ನ್ಯಾಷನಲ್ ಚಾಂಪಿಯನ್ ಆಗಿ ನಾನು ಗುರುತಿಸಿಕೊಂಡಿದ್ದರೂ ಮುಖ್ಯ ಸ್ಥಾನದಲ್ಲಿದ್ದ ಆ ವ್ಯಕ್ತಿ ನನ್ನನ್ನು ರಾಷ್ಟ್ರೀಯ ತಂಡದಿಂದ ಹೊರಗಿಟ್ಟರು. ರಿಯೋ ಒಲಿಂಪಿಕ್ಸ್ ನಿಂದ ವಾಪಸ್ಸಾಗಿದ್ದೆನಷ್ಟೆ; ಆಗಲೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು. ನಾನು ಬ್ಯಾಡ್ಮಿಂಟನ್ ಆಟ ನಿಲ್ಲಿಸಲು ಇದೂ ಒಂದು ಕಾರಣ' ಎಂದು ಗುಟ್ಟಾ (ಅರೆ)ಗುಟ್ಟು ಬಿಚ್ಚಿಟ್ಟಿದ್ದರು.

Story first published: Wednesday, October 10, 2018, 23:28 [IST]
Other articles published on Oct 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X