ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಇತಿಹಾಸದಲ್ಲಿ ಪದಕ ಗೆದ್ದಿರುವ ಭಾರತೀಯರ ಪಟ್ಟಿ

BWF World badminton championships: List of Indian Medal winners

1977ರಲ್ಲಿ ಆರಂಭವಾದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕಳೆದ ವರ್ಷ ನಡೆದ ಆವೃತ್ತಿಯವರೆಗೂ ಒಟ್ಟು 26 ಬಾರಿ ಯಶಸ್ವಿಯಾಗಿ ಜರುಗಿದೆ.

ಇನ್ನು ಈ ವರ್ಷದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಜಪಾನ್ ದೇಶದ ಟೋಕಿಯೋ ನಗರದಲ್ಲಿರುವ ಟೋಕಿಯೋ ಜಿಮ್ನೇಸಿಯನ್‌ನಲ್ಲಿ ನಡೆಯಲಿದೆ. ಆಗಸ್ಟ್ 22ರಂದು ಆರಂಭವಾಗಲಿರುವ ಈ 27ನೇ ಆವೃತ್ತಿಯ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿ ಆಗಸ್ಟ್ 28ರಂದು ನಡೆಯಲಿರುವ ಫೈನಲ್ ಹಣಾಹಣಿಗಳ ಮೂಲಕ ಮುಕ್ತಾಯಗೊಳ್ಳಲಿದೆ.

ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!

ಆಗಸ್ಟ್ 22 ಹಾಗೂ 23ರಂದು ಮೊದಲ ಸುತ್ತಿನ ಪಂದ್ಯಗಳು ಜರುಗಿದರೆ ನಂತರದ ದಿನಗಳಲ್ಲಿ ದ್ವಿತೀಯ ಹಾಗೂ ತೃತೀಯ ಸುತ್ತುಗಳ ಪಂದ್ಯ, ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯಗಳು ಹಾಗೂ ಸೆಮಿ ಫೈನಲ್ ಸುತ್ತಿನ ಪಂದ್ಯಗಳು ಜರುಗಲಿವೆ.

ಇನ್ನು ಈ ಬಾರಿಯ ಟೂರ್ನಿಯಲ್ಲಿ ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಪಿವಿ ಸಿಂಧು ಗಾಯದ ಸಮಸ್ಯೆಯಿಂದಾಗಿ ಟೂರ್ನಿಗೆ ಅಲಭ್ಯರಾಗಿದ್ದು, ಟೂರ್ನಿಯಲ್ಲಿ ಭಾರತದ 6 ಸಿಂಗಲ್ಸ್ ಹಾಗೂ 10 ಡಬಲ್ಸ್ ಆಟಗಾರರು ಭಾಗವಹಿಸಲಿದ್ದಾರೆ. ಈ ಭಾರತೀಯ ಆಟಗಾರರು ಸೇರಿದಂತೆ ಟೂರ್ನಿಯಲ್ಲಿ 64 ಪುರುಷ ಹಾಗೂ 48 ಮಹಿಳಾ ಬ್ಯಾಡ್ಮಿಂಟನ್ ಪ್ಲೇಯರ್ಸ್ ಸೇರಿದಂತೆ ಒಟ್ಟು 112 ಸಿಂಗಲ್ಸ್ ಬ್ಯಾಡ್ಮಿಂಟನ್ ಪ್ಲೇಯರ್ಸ್ ಮತ್ತು 144 ಡಬಲ್ಸ್ ಜೋಡಿಗಳು ವಿಶ್ವದ ಮೂಲೆ ಮೂಲೆಗಳಿಂದ ಟೂರ್ನಿಗೆ ಆಗಮಿಸಲಿದ್ದಾರೆ.

ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!

ಇನ್ನು ಇಷ್ಟು ವರ್ಷ ನಡೆದಿರುವ ಚಾಂಪಿಯನ್ ಶಿಪ್ ಪೈಕಿ ಭಾರತದ ಪರ ಪದಕ ಗೆದ್ದಿರುವ ಆಟಗಾರರ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.

1983 - ಪ್ರಕಾಶ್ ಪಡುಕೋಣೆ (ಕಂಚು)

2011 - ಅಶ್ವಿನಿ ಪೊನ್ನಪ್ಪ / ಜ್ವಾಲಾ ಗುಟ್ಟಾ (ಕಂಚು)

2013 - ಪಿವಿ ಸಿಂಧು (ಕಂಚು)

2014 - ಪಿವಿ ಸಿಂಧು (ಕಂಚು)

2015 - ಸೈನಾ ನೆಹ್ವಾಲ್ (ಬೆಳ್ಳಿ)

2017 - ಪಿವಿ ಸಿಂಧು (ಬೆಳ್ಳಿ), ಸೈನಾ ನೆಹ್ವಾಲ್ (ಕಂಚು)

2018 - ಪಿವಿ ಸಿಂಧು (ಬೆಳ್ಳಿ)

2019 - ಪಿವಿ ಸಿಂಧು (ಚಿನ್ನ), ಬಿ ಸಾಯಿ ಪ್ರಣೀತ್ (ಕಂಚು)

2021 - ಕಿಡಂಬಿ ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು )

ಹೀಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಇತಿಹಾಸದಲ್ಲಿ 1 ಚಿನ್ನದ ಪದಕ, 4 ಬೆಳ್ಳಿ ಪದಕಗಳು ಹಾಗೂ 7 ಕಂಚಿನ ಪದಕಗಳನ್ನು ಗೆದ್ದಿರುವ ಭಾರತ ಒಟ್ಟಾರೆ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

Story first published: Saturday, August 20, 2022, 9:54 [IST]
Other articles published on Aug 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X