ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಭಾರತಕ್ಕೆ ಐತಿಹಾಸಿಕ ಪದಕ ಖಚಿತ ಪಡಿಸಿದ ಸಾತ್ವಿಕ್ ಮತ್ತು ಚಿರಾಗ್ ಜೋಡಿ

ಭಾರತದ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಇದೀಗ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಪದಕ ಖಚಿತವಾಗಿದೆ. ವಿಶ್ವ ಬ್ಯಾಡ್ಮಿಂಟನ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತ ಹಿಂದೆಂದೂ ಪದಕ ಗೆದ್ದಿರಲಿಲ್ಲ. ಆದ್ರೆ ಈ ಜೋಡಿ ಈ ಐತಿಹಾಸಿಕ ಸಾಧನೆ ಮಾಡಿದೆ.

ಜಪಾನ್‌ನ ಯುಗೊ ಕೊಬಯಾಶಿ-ಟಕುರೊ ಹಾಕಿ ಜೋಡಿಯನ್ನು 24-22, 15-21, 21-14 ಅಂತರದಿಂದ ಸೋಲಿಸಿದ ಭಾರತದ ಜೋಡಿ ಕೊನೆಯ ನಾಲ್ಕಕ್ಕೆ ತಲುಪಿದೆ.

ಜಪಾನ್ ಜೋಡಿ ವಿರುದ್ಧ ಸಾತ್ವಿಕ್-ಚಿರಾಗ್ ಮಿಂಚು

ಜಪಾನ್ ಜೋಡಿ ವಿರುದ್ಧ ಸಾತ್ವಿಕ್-ಚಿರಾಗ್ ಮಿಂಚು

ಭಾರತದ ಜೋಡಿಯು ಜಪಾನ್‌ನ ಯುಗೊ ಕೊಬಯಾಶಿ-ಟಕುರೊ ಹಾಕಿ ಜೋಡಿ ವಿರುದ್ಧ ಕ್ವಾರ್ಟರ್ ಫೈನಲ್ ಆಡಿದರು. ಮೊದಲ ಗೇಮ್ ಗೆದ್ದ ಚಿರಾಗ್-ಸಾತ್ವಿಕ್ ಎರಡನೇ ಗೇಮ್ ನಲ್ಲಿ ಸೋಲನುಭವಿಸಿದರು. ಆದರೆ, ಒತ್ತಡವನ್ನು ಮೆಟ್ಟಿನಿಂತು ಕೊನೆಯ ಗೇಮ್ ಗೆದ್ದು ಇತಿಹಾಸ ನಿರ್ಮಿಸಿದರು. 24-22, 15-21, 21-14 ಗೇಮ್‌ಗಳಿಂದ ಭಾರತದ ಜೋಡಿ ಇತಿಹಾಸ ನಿರ್ಮಿಸಿದೆ.

ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಏಳನೇ ಶ್ರೇಯಾಂಕಿತ ಜೋಡಿಯಾದ ಚಿರಾಗ್ ಮತ್ತು ಸಾತ್ವಿಕ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಿಸಿದ ಜಪಾನ್ ಜೋಡಿಯು ವಿಶ್ವದ ಎರಡನೇ ಶ್ರೇಯಾಂಕಿತವಾಗಿದೆ. ಇಷ್ಟಲ್ಲದೆ ಆ ಜೋಡಿಯು ಕಳೆದ ಬಾರಿಯ ಚಾಂಪಿಯನ್ ಆಗಿತ್ತು. ಆದ್ರೆ ಭಾರತ ಬಲಿಷ್ಠ ಜೋಡಿಯನ್ನು ಸೋಲಿಸಿ ಸೆಮಿಫೈನಲ್ ತಲುಪಿ, ಪದಕ ಖಚಿತವಾಗಿದ್ದು, ಅಮೋಘ ಸಾಧನೆಯಾಗಿದೆ.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ಪದಕದ ಆಸೆ ಕೈ ಬಿಟ್ಟ HS ಪ್ರಣಯ್

ಸಮಬಲದ ಹೋರಾಟದಲ್ಲಿ ಗೆದ್ದ ಚಿರಾಗ್ ಮತ್ತು ಸಾತ್ವಿಕ್

ಸಮಬಲದ ಹೋರಾಟದಲ್ಲಿ ಗೆದ್ದ ಚಿರಾಗ್ ಮತ್ತು ಸಾತ್ವಿಕ್

ಮೊದಲ ಪಂದ್ಯದಿಂದಲೇ ಸಮಬಲದ ಹೋರಾಟವಾಗಿತ್ತು. ಚಿರಾಗ್ ಮಾಡಿದ ತಪ್ಪಿನಿಂದ ಮೊದಲ ಗೇಮ್ 22-22ರಲ್ಲಿ ಆಯಿತು. ಆದರೆ, ಭಾರತದ ಜೋಡಿ ಗೆಲುವನ್ನು ಖಚಿತಪಡಿಸಿಕೊಂಡಿತು. ಎರಡನೇ ಗೇಮ್ ನಲ್ಲಿ ಜಪಾನ್ ಜೋಡಿ ಭಾರತದ ಸವಾಲನ್ನು ಮೆಟ್ಟಿ ನಿಂತು ಸಮಬಲ ಸಾಧಿಸಿತು. ಆದರೆ, ಚಿರಾಗ್-ಸಾತ್ವಿಕ್ ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಪ್ರಾಬಲ್ಯ ಕಾಯ್ದುಕೊಂಡು ಕೊನೆಯ ನಗೆ ಬೀರಿದರು.

ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದರು. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿರಾಶಾದಾಯಕ ನಿರ್ಗಮನದ ನಂತರ, ಚಿರಾಗ್ ಮತ್ತು ಸಾತ್ವಿಕ್ ಅಲ್ಲಿನ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಖಚಿತಪಡಿಸಿಕೊಂಡರು. ಈ ವರ್ಷ ಈ ಜೋಡಿ ಉತ್ತಮ ಫಾರ್ಮ್‌ನಲ್ಲಿದೆ. ಇಂಡಿಯಾ ಓಪನ್ ಪ್ರಶಸ್ತಿಯನ್ನು ಗೆದ್ದ ನಂತರ, ಆಲ್ ಇಂಗ್ಲೆಂಡ್ ಓಪನ್‌ನ ಕ್ವಾರ್ಟರ್ ಫೈನಲ್‌ಗೆ ತಲುಪಿದೆ. ಥಾಮಸ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಮಿಂಚಿದೆ. ಚಿರಾಗ್ ಮತ್ತು ಸಾತ್ವಿಕ್ ಈ ಬಾರಿ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಚಿನ್ನಕ್ಕೆ ಗುರಿ ಇಡಲಿದ್ದಾರೆ. ಶನಿವಾರ ಸೆಮಿಫೈನಲ್ ಪಂದ್ಯ ನಡೆಯಲಿದೆ.

ವಿರಾಟ್ ಫಾರ್ಮ್ ಕಳೆದುಕೊಂಡಿಲ್ಲ: ಫ್ಯಾನ್ಸ್‌, ಕೊಹ್ಲಿಯಿಂದ ಕೇವಲ ಸೆಂಚುರಿಯನ್ನಷ್ಟೇ ಬಯಸುತ್ತಿದ್ದಾರೆ!

ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜುನ್ ಮತ್ತು ಧ್ರುವಗೆ ಸೋಲು

ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜುನ್ ಮತ್ತು ಧ್ರುವಗೆ ಸೋಲು

ಇತರೆ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ ಕಪಿಲಾ ಸೋತಿದ್ದಾರೆ. ಭಾರತದ ಜೋಡಿಯು ಮೂರನೇ ಶ್ರೇಯಾಂಕದ ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತರು. ಇಂಡೋನೇಷ್ಯಾ ಜೋಡಿ 21-8, 21-14 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ ತಲುಪಿತು.

ಕಳೆದ ಪಂದ್ಯದಲ್ಲಿ ಧ್ರುವ್-ಅರ್ಜುನ್ ಅವರು ಸಿಂಗಾಪುರದ ಟೆರ್ರಿ ಹೀ ಮತ್ತು ಲೋಹ್ ಕಿಯಾನ್ ಹಿಯಾನ್ ಅವರನ್ನು 18-21, 21-15, 21-16 ರಿಂದ ಸೋಲಿಸಿ ಅಂತಿಮ ಎಂಟರ ಘಟ್ಟ ತಲುಪಿದ್ದರು. ಆದರೆ ಇಂಡೋನೇಷ್ಯಾ ವಿರುದ್ಧದ ಗೆಲುವಿನ ಓಟವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಗೆದ್ದಿದ್ದರೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗುತ್ತಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 26, 2022, 15:28 [IST]
Other articles published on Aug 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X