ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಬಿಎಲ್‌: ಕೆರೊಲಿನಾ-ಲಕ್ಷಯ್ ಬಲ, ಪುಣೆ ಸೆಮೀಸ್ ಕನಸು ಜೀವಂತ

Carolina, Lakshya help Pune 7 Aces stay in contention for semi-finals

ಅಹ್ಮದಾಬಾದ್, ಜನವರಿ 7: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಭಾನುವಾರದ (ಜನವರಿ 7) ಪಂದ್ಯದಲ್ಲಿ ಡೆಲ್ಲಿ ಡ್ಯಾಶರ್ಸ್ ವಿರುದ್ಧ 5-0 ಜಯ ಸಾಧಿಸುವ ಮೂಲಕ ಪುಣೆ 7 ಏಸಸ್ ತಂಡ ಟೂರ್ನಿಯಲ್ಲಿ ಸೆಮಿಫೈನಲ್‌ ಕನಸನ್ನು ಉಳಿಸಿಕೊಂಡಿದೆ. ಕೆರೊಲಿನಾ ಮರಿನ್ ಮತ್ತು ಅಕ್ಷಯ್ ಬಲ ತುಂಬಿದ್ದರಿಂದ ಪುಣೆ ಮುನ್ನಡೆ ಸಾಧ್ಯವಾಗಿದೆ.

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ 2018-19 ವಿಶೇಷ ಮುಖಪುಟ

ಮಹಿಳಾ ಸಿಂಗಲ್ಸ್‌ನಲ್ಲಿ ಪುಣೆ ತಂಡದ ಸ್ಟಾರ್ ಆಟಗಾರ್ತಿ, ನಾಯಕಿಯಾಗಿರುವ ಒಲಿಂಪಿಕ್ ಚಿನ್ನದ ಪದಕ ವಿಜೇತೆ, ಸ್ಪೇನ್ ಬಲಾಡ್ಯೆ ಮರಿನ್ ಗೆ ಪೈಪೋಟಿ ನೀಡಲು ವಿಶ್ವ 32ನೇ ಶ್ರೇಯಾಂಕಿತೆ ರಷ್ಯಾದ ಎವೆಜಿನಿಯ ಕೊಸೆಟ್ಸ್ಕಾಯ ವಿಫಲರಾದರು. ಕೆರೊಲಿನಾ 15-5, 15-6 ರ ಗೆಲುವು ದಾಖಲಿಸಿದರು.

ಪುರುಷರ ವಿಭಾಗದ ಪಂದ್ಯದಲ್ಲಿ ಏಷ್ಯನ್ ಜೂನಿಯರ್ ಚಾಂಪಿಯನ್ ಲಕ್ಷಯ್ ಸೆನ್ ಅವರು ತನ್ನ ಕಿರಿಯ ಸಹೋದರ ಚಿರಾಗ್ ಅವರೆದುರು 15-12, 15-11ರ ಗೆಲುವು ದಾಖಲಿಸಿದರು. ಪಾಯಿಂಟ್‌ ಟೇಬಲ್‌ನಲ್ಲಿ ಪುಣೆ ಈಗ 3ನೇ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ ಪುಣೆ 5 ಗೆಲುವು ಕಂಡಿದೆ. ಮೊದಲ ಸ್ಥಾನದಲ್ಲಿ ಸಿಂಧು ಮುಂದಾಳತ್ವದ ಹೈದರಾಬಾದ್ ಹಂಟರ್ಸ್ ಇದೆ.

Story first published: Monday, January 7, 2019, 21:03 [IST]
Other articles published on Jan 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X