ಚೀನಾ ಓಪನ್ : ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಸೈನಾ ನೆಹ್ವಾಲ್

ಚಾಂಗ್ ಝೌ, ಸೆ.18: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ, ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.

ಬುಧವಾರದಂದು ನಡೆದ ಪಂದ್ಯದಲ್ಲಿ 44 ನಿಮಿಷಗಳ ಕಾಲದ ಆಟದಲ್ಲಿ ಥಾಯ್ಲೆಂಡಿನ 19ನೇ ಶ್ರೇಯಾಂಕಿತೆ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ವಿರುದ್ಧ 10-21 17-21 ಅಂತರದ ಸೆಟ್ ಗಳಲ್ಲಿ ಸೋಲು ಅನುಭವಿಸಿದ್ದಾರೆ.

70ರ ಹರೆಯದ ಹಣ್ಣು ಮುದುಕನಿಗೆ ಸಿಂಧು ವರಿಸುವಾಸೆಯಂತೆ!

ಮಾಜಿ ವಿಶ್ವ ನಂ.1 ಆಟಗಾರ್ತಿ 29 ವರ್ಷದ ಸೈನಾ ಗಾಯದಿಂದ ಚೇತರಿಸಿಕೊಂಡ ಬಳಿಕ ಮರಳಿ ಲಯಕ್ಕೆ ಮರಳಲು ಯತ್ನಿಸುತ್ತಿದ್ದಾರೆ. ವರ್ಷದ ಆರಂಭದಲ್ಲಿ ಇಂಡೋನೇಷ್ಯಾ ಓಪನ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರು. ಆದರೆ ಬಿಡಬ್ಲ್ಯುಎಫ್ ಸರ್ಕ್ಯೂಟ್‌ನಲ್ಲಿ ಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ.

ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ತಮ್ಮ ಮೊದಲ ಸುತ್ತಿನಲ್ಲಿ ಮಾಜಿ ಒಲಿಂಪಿಕ್ ಚಾಂಪಿಯನ್ ಲಿ ಕ್ಸುಯೆರುಯಿ ಅವರನ್ನು 21-18, 21-12 ರಲ್ಲಿ ಸೋಲಿಸಿ ಎರಡನೇ ಸುತ್ತು ತಲುಪಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 18, 2019, 14:50 [IST]
Other articles published on Sep 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X