ಡೆನ್ಮಾರ್ಕ್ ಓಪನ್: ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ಕಿದಂಬಿ ಶ್ರೀಕಾಂತ್‌

ನವದೆಹಲಿ: ಒಡೆನ್ಸ್‌ನಲ್ಲಿ ಶುಕ್ರವಾರ (ಅಕ್ಟೋಬರ್ 16) ನಡೆದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಶಟ್ಲರ್ ಕಿದಂಬಿ ಶ್ರೀಕಾಂತ್ ಸೋಲನುಭವಿಸಿದ್ದಾರೆ. ತೈವಾನ್ ಆಟಗಾರ ಚೌ ಟಿಯೆನ್-ಚೆನ್ ಎದುರು ಶ್ರೀಕಾಂತ್ ಹಿನ್ನಡೆ ಅನುಭವಿಸಿದ್ದಾರೆ. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿದೆ.

ಐಪಿಎಲ್ 2020: ಫ್ಲಾಪ್ ಶೋ ಕೊಟ್ಟಿರುವ 5 ದುಬಾರಿ ಕ್ರಿಕೆಟರ್ಸ್ಐಪಿಎಲ್ 2020: ಫ್ಲಾಪ್ ಶೋ ಕೊಟ್ಟಿರುವ 5 ದುಬಾರಿ ಕ್ರಿಕೆಟರ್ಸ್

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಶ್ವ ನಂ.14ರ ಕಿದಂಬಿ ಶ್ರೀಕಾಂತ್ ಅವರು ವಿಶ್ವ ನಂ.2ರ ಆಟಗಾರ ಚೌ ಟಿಯೆನ್-ಚೆನ್ ವಿರುದ್ಧ 22-20, 13-21, 16-21ರ ಸೋಲು ಕಂಡಿದ್ದಾರೆ. ಇಬ್ಬರ ಮಧ್ಯೆ ಸುಮಾರು 61 ನಿಮಿಷಗಳ ಕದನ ನಡೆಯಿತು.

ಆರ್‌ಸಿಬಿ ಸೋತ ಬಳಿಕ 6 ವರ್ಷಗಳ ಹಿಂದಿನ ಸಲ್ಮಾನ್ ಖಾನ್ ಟ್ವೀಟ್ ವೈರಲ್ಆರ್‌ಸಿಬಿ ಸೋತ ಬಳಿಕ 6 ವರ್ಷಗಳ ಹಿಂದಿನ ಸಲ್ಮಾನ್ ಖಾನ್ ಟ್ವೀಟ್ ವೈರಲ್

ಶ್ರೀಕಾಂತ್ ಪಂದ್ಯದಲ್ಲಿ ಸೋತು ನಿರ್ಗಮಿಸಬೇಕಾಯಿತಾದರೂ ಎದುರಾಳಿಗೆ ಫೈಪೋಟಿಯಂತೂ ನೀಡಿದ್ದು ಕಂಡುಬಂತು. ಮುಖ್ಯವಾಗಿ ಆರಂಭಿಕ ಸೆಟ್ ಜಯಿಸಿದ್ದ ಶ್ರೀಕಾಂತ್ ಮುಂದಿನ ಸೆಟ್‌ಗಳಲ್ಲಿ ಬಲಿಷ್ಠ ಆಟಗಾರ ಟಿಯೆನ್-ಚೆನ್ ಎದುರು ತಲೆ ಬಾಗಲೇಬೇಕಾಯ್ತು.

ಟೀಮ್ ಇಂಡಿಯಾ ಮಹಿಳಾ ಕ್ರಿಕೆಟಿಗರ ಕ್ವಾರಂಟೈನ್ ಲೈಫ್: ಜೆಮಿಮಾ ರೊಡ್ರಿಗಸ್ ವೀಡಿಯೋಟೀಮ್ ಇಂಡಿಯಾ ಮಹಿಳಾ ಕ್ರಿಕೆಟಿಗರ ಕ್ವಾರಂಟೈನ್ ಲೈಫ್: ಜೆಮಿಮಾ ರೊಡ್ರಿಗಸ್ ವೀಡಿಯೋ

ಮಾಜಿ ವಿಶ್ವ ನಂ.1 ಆಟಗಾರಾಗಿರುವ ಕಿದಂಬಿ ಶ್ರೀಕಾಂತ್ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಏಷ್ಯಾ ಟೂರ್ ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಟೂರ್ನಿ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, October 16, 2020, 23:58 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X