ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವರ್ಲ್ಡ್ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮಾನಸಿ ಜೋಷಿ

‘I earned it’: Manasi Joshi on winning gold at World Para-Badminton

ನವದೆಹಲಿ, ಆಗಸ್ಟ್ 28: ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವರ್ಲ್ಡ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮೂವರು ಆಟಗಾರರಲ್ಲಿ ಮಾನಸಿ ಜೋಷಿಯೂ ಒಬ್ಬರು. ಒಂದು ಕಾಲಿಲ್ಲದ ಮಾನಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರಬೇಕಾದರೆ ಅದರ ಹಿಂದಿರುವ ಅವರ ಶ್ರಮ ಅರ್ಥವಾಗಬಹುದು.

ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!

ಆಗಸ್ಟ್ 25ರಂದು ಮಹಿಳಾ ಸಿಂಗಲ್ಸ್ ಎಸ್‌ಎಲ್‌3 ವಿಭಾಗದ ಫೈನಲ್‌ನಲ್ಲಿ ಸ್ಪರ್ಧಿಸಿದ್ದ 30ರ ಹರೆಯದ ಮಾನಸಿ, ತನ್ನದೇ ತಂಡದ ವಿಶ್ವ ನಂ.1 ಆಟಗಾರ್ತಿ ಪಾರುಲ್ ಪಾರ್‌ಮರ್ ಅವರನ್ನು 21-12, 21-7ರ ನೇರ ಸೆಟ್‌ನಿಂದ ಹಿಮ್ಮೆಟ್ಟಿಸಿ ಚಿನ್ನದ ಪದಕ ಗೆದ್ದಿದ್ದರು. ಇದೇ ದಿನ ಪಿವಿ ಸಿಂಧು ಕೂಡ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದು ಇತಿಹಾಸ ಬರೆದಿದ್ದರು.

ಮಂಗಳವಾರ (ಆಗಸ್ಟ್ 27) ಟ್ವೀಟ್‌ ಮಾಡಿದ್ದ ಮಾನಸಿ, 'ಇದನ್ನು ನಾನು ಗಳಿಸಿದ್ದೇನೆ. ಇದಕ್ಕೆ ನಾನು ಅಷ್ಟೇ ಶ್ರಮವಹಿಸಿದ್ದೇನೆ,' ಎಂದು ಬರೆದುಕೊಂಡಿದ್ದರು. ದೇಶಕ್ಕೆ ಚಿನ್ನದ ಗೌರವ ತಂದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಟ್ವಿಟರ್‌ನಲ್ಲಿ ಶುಭಾಷಯಗಳ ಮಹಾಪೂರ ಹರಿದುಬಂದಿದೆ. 'ವೋಗ್ ಇಂಡಿಯಾ' ಮಹಿಳಾ ಮ್ಯಾಗಝಿನ್, ಮಾನಸಿಯ ಅತ್ಯಾಕರ್ಷಕ ಚಿತ್ರದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿನಂದಿಸಿದೆ.

85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!

'ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸಿಂಧುವನ್ನು ಮೇಲಕ್ಕಿಡುವ ಭರದಲ್ಲಿ ವರ್ಲ್ಡ್ ಪ್ಯಾರಾ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದ ಮಾನಸಿ ಜೋಷಿಯನ್ನು ನಾವು ಮರೆತಿದ್ದೇವೆ. ಅವರನ್ನೂ ಅಭಿನಂದಿಸಬೇಕಿದೆ,' ಎಂದು ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ. ಮಾನಸಿ 2011ರಲ್ಲಿ ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದರು.

Story first published: Wednesday, August 28, 2019, 19:01 [IST]
Other articles published on Aug 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X