ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಬಿಎಲ್ 2018 : ಗುಣಮಟ್ಟದ ಬ್ಯಾಡ್ಮಿಂಟನ್ ಟೂರ್ನಿಗೆ ಸಿದ್ಧರಾಗಿರಿ

IBL 2018: Its time for quality badminton action

ಬೆಂಗಳೂರು, ನವೆಂಬರ್ 09 : ಸಹೋದರ ಸಹೋದರಿಯರೆ, ಗುಣಮಟ್ಟದ ಬ್ಯಾಡ್ಮಿಂಟನ್ ಆಟವನ್ನು ನೋಡಿ ಆಸ್ವಾದಿಸುವ ಸಮಯವಿದು. ಇಂದಿರಾನಗರ ಕ್ಲಬ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್ 2018)ನ ಎರಡನೇ ಆವೃತ್ತಿ, ಆಟಗಾರರ ಹರಾಜಿನೊಂದಿಗೆ ನವೆಂಬರ್ 11ರಂದು ಆರಂಭವಾಗಲಿದೆ.

ಟೂರ್ನಮೆಂಟ್ ನವೆಂಬರ್ 30ರಿಂದ ಶುರುವಾಗಲಿದ್ದು ಡಿಸೆಂಬರ್ 8ರಂದು ಅಂತ್ಯವಾಗಲಿದೆ. ಈ ವರ್ಷ ಕಳೆದ ಬಾರಿಗಿಂತ ದೊಡ್ಡ ಪ್ರಮಾಣದಲ್ಲಿ ನಡೆಯಲಿದ್ದು, ಐದು ತಂಡಗಳಲ್ಲಿ 150 ಆಟಗಾರರು ಸೆಣಸಾಡಲಿದ್ದಾರೆ. ಕಳೆದ ವರ್ಷ 4 ತಂಡಗಳಲ್ಲಿ 116 ಆಟಗಾರರು ಆಟವಾಡಿದ್ದರು.

ಪ್ರತಿ ತಂಡದಲ್ಲಿ 30 ಆಟಗಾರರು ಇರಲಿದ್ದು, ಪುರುಷರು, ಸ್ತ್ರೀಯರು ಮತ್ತು ಮಕ್ಕಳ ವಿಭಾಗದಲ್ಲಿ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯಲಿದೆ. ನೋಡುವ ಪ್ರೇಕ್ಷಕರಿಗಂತೂ ನವೆಂಬರ್ 30ರಿಂದ ಭರ್ತಿ ರಸದೌತಣ ಗ್ಯಾರಂಟಿ.

"ಸಾಂಪ್ರದಾಯಿಕವಾಗಿ ಬೆಂಗಳೂರು ಬ್ಯಾಡ್ಮಿಂಟನ್ ಆಟಗಾರರಿಗೆ ಕೇಂದ್ರವಾಗಿರುವುದರಿಂದ ಹೆಚ್ಚು ಜನರು ಬರುವ ನಿರೀಕ್ಷೆಯಿದೆ. ಕಳೆದ ವರ್ಷ ಕೂಡ ನಾವು ಆಟಗಾರರಿಗೆ ನಿರಾಶೆ ಉಂಟು ಮಾಡಿರಲಿಲ್ಲ. ಈ ಬಾರಿ ಕ್ಲಬ್ ನಲ್ಲಿ ಹೆಚ್ಚು ಆಟಗಾರರಿಗೆ ಅವಕಾಶ ನೀಡಲು ಸಾಧ್ಯವಿಲ್ಲದಿರುವುದರಿಂದ 150ಕ್ಕೆ ನಿಗದಿಪಡಿಸಿದ್ದೇವೆ" ಎಂದು ಬ್ಯಾಡ್ಮಿಂಟನ್ ಲೀಗ್ ನ ಕಮಿಷನರ್ ನೀರಜ್ ಮಿಶ್ರಾ ಅವರು ಮೈಖೇಲ್ ಗೆ ತಿಳಿಸಿದ್ದಾರೆ.

IBL 2018: Its time for quality badminton action

ಆಟಗಾರರ ನಡುವೆ ತುರುಸಿನ ಸ್ಪರ್ಧೆಗೆ ಕಿಚ್ಚು ಹಚ್ಚುವುದು ಮಾತ್ರವಲ್ಲ, ಅವರ ನಡುವೆ ಸ್ನೇಹಬಂಧವನ್ನು ಹೆಚ್ಚಿಸುವ ಉದ್ದೇಶದಿಂದ ಕೂಡ ಈ ಟೂರ್ನಿಯನ್ನು ನಡೆಸಲಾಗುತ್ತಿದೆ ಎಂದು ಐಬಿಎಲ್ 2018ರ ಚೇರ್ಮನ್ ಆಗಿರುವ ಕಲ್ಯಾಣ್ ಮೋಹನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಟಗಾರ ಒಂದು ಬಾರಿ ಸ್ಪರ್ಧೆಯ ಅಂಗಳಕ್ಕೆ ಜಿಗಿದ ಮೇಲೆ ಸ್ಪರ್ಧೆಗೆ ಯಾವುದೇ ಕೊರತೆ ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ಆಡಿ ಗೆಲ್ಲುವ ಉತ್ಸಾಹ ಇದ್ದೇ ಇರುತ್ತದೆ. ಆದರೆ, ಸ್ಪರ್ಧಾಳುಗಳ ನಡುವೆ ಪರಸ್ಪರ ಗೆಳೆತನ, ಸ್ಪರ್ಧಾತ್ಮಕ ಸಂಬಂಧ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಉತ್ತಮ ಸಂಬಂಧದ ಬೀಜ ಬಿತ್ತಲು ಸ್ಪರ್ಧೆಗಿಂತ ಉತ್ತಮವಾದುದು ಯಾವುದಿದೆ ಎಂದು ಅವರು ಹೇಳುತ್ತಾರೆ.

ಈ ಪ್ರತಿಷ್ಠಿತ ಟೂರ್ನಾಮೆಂಟ್ ಗೆ ಹಲವಾರು ಪ್ರಾಯೋಜಕರು ಕೂಡ ಬರುತ್ತಿರುವುದರಿಂದ, ವ್ಯಾಪಾರದ ದೃಷ್ಟಿಯಿಂದಲೂ ಇಂದಿರಾನಗರ ಕ್ಲಬ್ ಬ್ಯಾಡ್ಮಿಂಟನ್ ಲೀಗ್ ಗೆ ಭಾರೀ ಮಹತ್ವ ಬರುತ್ತಿದೆ.

ಐಬಿಎಲ್ 2018ರ ಪ್ರಮುಖ ಜಾಹೀರಾತುದಾರರು - ಜಿನಾ ಗ್ರೂಪ್, ಪ್ರಿಮಾ ಡಯಾಗ್ನೋಸ್ಟಿಕ್ಸ್, ಇಂದಿರಾನಗರ ಕ್ಲಬ್, ಟೈಟನ್, ತಾಜ್ ಗ್ರೂಪ್ ಆಫ್ ಹೋಟೆಲ್ಸ್, ಇಂಗ್ಲಿಷ್ ಬ್ರಿವಿಂಗ್ ಕಂಪನಿ, ಯೋನೆಕ್ಸ್. ಈ ಕಂಪನಿಗಳು ನಗದು ಮತ್ತಿತರ ವಸ್ತುಗಳನ್ನು ಪ್ರಾಯೋಜಿಸುತ್ತಿವೆ. ಇವುಗಳ ಕಾರಣದಿಂದಾಗಿ ಹಲವಾರು ಅತ್ಯಾಕರ್ಷಕ ಪ್ರಶಸ್ತಿಗಳನ್ನು ತಂಡಕ್ಕೆ ಮತ್ತು ವೈಯಕ್ತಿಕವಾಗಿ ನೀಡಲಾಗುತ್ತಿದೆ.

"ಸುಮ್ಮನೆ ಆಟವಾಡಿ. ಆಟವನ್ನು ಆನಂದಿಸಿ. ಮಜಾ ಮಾಡಿ" ಎಂದು ಬಾಸ್ಕೆಟ್ ಬಾಲ್ ದಿಗ್ಗಜ ಮೈಕಲ್ ಜೋರ್ಡಾನ್ ಅವರು, ಕ್ರೀಡೆಯ ಬಗ್ಗೆ ನಮಗಿರಬೇಕಾದ ಮನೋಭಾವದ ಬಗ್ಗೆ ವರ್ಣಿಸಿದ್ದರು. ಐಬಿಎಲ್ 2018 ಕೂಡ ಇದನ್ನೇ ಪಾಲಿಸುತ್ತಿದೆ. ಇನ್ನೇಕೆ ತಡ? ಕೈಯಲ್ಲಿ ಬ್ಯಾಡ್ಮಿಂಟನ್ ರಾಕೆಟ್ ತೆಗೆದುಕೊಳ್ಳಿ.

Story first published: Friday, November 9, 2018, 14:41 [IST]
Other articles published on Nov 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X