ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಥಾಮಸ್ ಕಪ್‌ ಗೆಲುವಿಗೆ ಸೊಳ್ಳೆ ಬ್ಯಾಟ್ ಕಾರಣ ಎಂದ IAS ಆಫೀಸರ್, ಅಮಿತ್ ಮಿಶ್ರಾ ತರಾಟೆ

Thomas cup and mishra

ಇತ್ತೀಚಿಗೆ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿಯನ್ನ ಮತ್ತಷ್ಟು ಎತ್ತರಕ್ಕೆ ಹಾರಿಸಿದೆ. ಥಾಮಸ್ ಕಪ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಭಾರತವು 14 ಬಾರಿಯ ಚಾಂಪಿಯನ್ ಇಂಡೋನೇಷಿಯಾವನ್ನೇ ಸೋಲಿಸಿತು.

ಚೊಚ್ಚಲ ಥಾಮಸ್ ಕಪ್ ಗೆದ್ದ ಖುಷಿಯಲ್ಲಿದ್ದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಇಡೀ ಕ್ರೀಡಾಲೋಕವೇ ಶುಭ ಕೋರಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಇಡೀ ತಂಡಕ್ಕೆ ಭೇಷ್ ಎಂದಿದ್ದಾರೆ. ಅನೇಕ ಸೆಲೆಬ್ರೆಟಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದರು.

ಆದರೆ ಈ ಸಾಧನೆಗೆ ಐಎಎಸ್‌ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್‌ನಲ್ಲಿ ಗೆಲುವನ್ನ ಅಣಕಿಸುವಂತೆ ಸೊಳ್ಳೆ ಬ್ಯಾಟ್ ಚಿತ್ರವನ್ನ ಪೋಸ್ಟ್‌ ಮಾಡಿದ್ದಾರೆ. ಐಎಎಸ್‌ ಅಧಿಕಾರಿ ಸೋಮೇಶ್ ಉಪಾಧ್ಯಾಯ '' ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡವು ತಮಗಿಂತ ಹೇಗೆ ಉತ್ತಮಗೊಂಡಿದೆ ಎಂಬುದರ ಬಗ್ಗೆ ಆಶ್ಚರ್ಯಗೊಂಡಿದೆ'' ಎಂದು ಟ್ವೀಟ್ ಮಾಡುವುದರ ಮೂಲಕ ಸೊಳ್ಳೆ ಹೊಡೆಯುವ ಬ್ಯಾಟ್ ಚಿತ್ರವನ್ನು ಟ್ವೀಟ್‌ನಲ್ಲಿ ಬಳಸಿದ್ದಾರೆ.

ಈ ಟ್ವೀಟ್‌ಗೆ ಉತ್ತರಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ಅಮಿತ್ ಮಿಶ್ರಾ ''ಇದು ಕೇವಲ ಅಸಹ್ಯಕರ ಮಾತ್ರವಲ್ಲ, ನಮ್ಮ ಬ್ಯಾಡ್ಮಿಂಟನ್ ಹೀರೋಗಳ ಸಾಧನೆಗೆ ಮಾಡಿದ ಅವಮಾನ'' ಎಂದು ಮಿಶ್ರಾನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

1983ರ ವಿಶ್ವಕಪ್‌ಗಿಂತ ಥಾಮಸ್ ಕಪ್ ಬ್ಯಾಡ್ಮಿಂಟನ್ ವಿಜಯೋತ್ಸವ ಶ್ರೇಷ್ಠ: ಪುಲ್ಲೇಲ ಗೋಪಿಚಂದ್1983ರ ವಿಶ್ವಕಪ್‌ಗಿಂತ ಥಾಮಸ್ ಕಪ್ ಬ್ಯಾಡ್ಮಿಂಟನ್ ವಿಜಯೋತ್ಸವ ಶ್ರೇಷ್ಠ: ಪುಲ್ಲೇಲ ಗೋಪಿಚಂದ್

ಆದ್ರೆ ಕೆಲವು ನೆಟ್ಟಿಗರು ಮಿಶ್ರಾ ಟ್ವೀಟ್‌ಗೆ ಉತ್ತರಿಸಿದ್ದು, ಇದು ಹೇಗೆ ಅವಮಾನ ಮಾಡಿದಂತೆ ಆಗುತ್ತದೆ. ಸಣ್ಣ ಹಾಸ್ಯಗಳನ್ನೂ ಸಹ ಇಷ್ಟೊಂದು ಗಂಭೀರವಾಗಿ ಏಕೆ ತೆಗೆದುಕೊಳ್ಳುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

Story first published: Tuesday, May 17, 2022, 17:33 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X