ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PV Sindhu : ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ 2022: ಕ್ವಾರ್ಟರ್‌ಫೈನಲ್‌ಗೆ ಎಂಟ್ರಿಕೊಟ್ಟ ಪಿ.ವಿ ಸಿಂಧು

PV Sindhu

ದಕ್ಷಿಣ ಕೊರಿಯಾದ ಸುಂಚಿಯಾನ್‌ನ ಪಾಲ್ಮಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಏಸ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

2022ರ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಜಪಾನ್‌ 26ನೇ ರ್ಯಾಂಕಿನ ಆಟಗಾರ್ತಿ ಅಯ ಓಹ್ರಿ ವಿರುದ್ಧ 21-15, 21-10 ನೇರ ಗೇಮ್‌ಗಳಿಂದ ಪಿ.ವಿ ಸಿಂಧು ಗೆಲುವು ಸಾಧಿಸಿದ್ದಾರೆ. ಕೇವಲ 37 ನಿಮಿಷಗಳಲ್ಲಿ ಪಂದ್ಯ ಜಯಿಸಿದ ಪಿವಿ ಸಿಂಧು ಒಹ್ರಿ ವಿರುದ್ಧ ಒಟ್ಟಾರೆ 12ನೇ ಗೆಲುವು ಸಾಧಿಸಿದ್ದಾರೆ.

CPL 2022 retentions: ಕೆರಿಬಿಯನ್ ಪ್ರೀಮಿಯರ್ ಲೀಗ್ 2022: 6 ತಂಡಗಳು, ರೀಟೈನ್ ಆದ ಆಟಗಾರರ ಪಟ್ಟಿ ಇಲ್ಲಿದೆCPL 2022 retentions: ಕೆರಿಬಿಯನ್ ಪ್ರೀಮಿಯರ್ ಲೀಗ್ 2022: 6 ತಂಡಗಳು, ರೀಟೈನ್ ಆದ ಆಟಗಾರರ ಪಟ್ಟಿ ಇಲ್ಲಿದೆ

ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಪಿವಿ ಸಿಂಧು ಪಂದ್ಯ ಆರಂಭದ ಮೊದಲ ವಿರಾಮದಲ್ಲಿ 11-9 ಪಾಯಿಂಟ್ಸ್ ಮುನ್ನಡೆಯೊಂದಿಗೆ ಏರಿಕೆ ಸಾಧಿಸಿದ್ರೆ, ನಂತರ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲೂ ಸಹ ಎದುರಾಳಿಗೆ ಹೆಚ್ಚಿನ ಅವಕಾಶ ನೀಡದೆ ಪಂದ್ಯ ಗೆದ್ದರು.

PV Sindhu 2

ಸಿಂಧು ಈಗ ಕ್ವಾರ್ಟರ್ ಫೈನಲ್‌ನಲ್ಲಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಲಿದ್ದಾರೆ.

ಸಿಂಧು ಪಂದ್ಯ ಮುಗಿದ ಬಳಿಕ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ 21-18, 21-6ರಿಂದ ಇಸ್ರೇಲ್‌ನ ಮಿಶಾ ಜಿಲ್ಬರ್‌ಮನ್ ಅವರನ್ನು ಸೋಲಿಸಿದರು. ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್, ಮದಲ ಗೇಮ್‌ನಲ್ಲಿ ಗೆಲುವಿಗೆ ಕಠಿಣ ಪರಿಶ್ರಮ ಪಡಬೇಕಾಯಿತು. ಆದರೆ ಅಂತಿಮವಾಗಿ 21-18 ರಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು.

ಇದಾದ ಬಳಿಕ ಎರಡನೇ ಗೇಮ್‌ನಲ್ಲಿ ಮಿಶಾ ಝಿಲ್ಬರ್‌ಮನ್ ತನ್ನ ಖಾತೆಯನ್ನು ತೆರೆಯುವ ಮೊದಲು ಭಾರತೀಯ ಆಟಗಾರ ಎರಡನೇ ಗೇಮ್‌ನಲ್ಲಿ 12-0 ಮುನ್ನಡೆ ಸಾಧಿಸಿದರು. ಶ್ರೀಕಾಂತ್ ಸವಾಲನ್ನು ಎದುರಿಸುವಲ್ಲಿ ವಿಫಲಗೊಂಡ ಎದುರಾಳಿ ಸುಲಭವಾಗಿ ಸೋಲೊಪ್ಪಿಕೊಂಡನು. ಪರಿಣಾಮ ಕಿಡಂಬಿ ಶ್ರೀಕಾಂತ್ 21-18, 21-6 ನೇರ ಗೇಮ್‌ಗಳಿಂದ ಪಂದ್ಯ ಗೆದ್ದಿದ್ದಾನೆ.

Story first published: Thursday, April 7, 2022, 17:17 [IST]
Other articles published on Apr 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X