ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಬಿಎಲ್ ಹರಾಜು 2018: ಸಿಂಧು, ಸೈನಾ, ಶ್ರೀಕಾಂತ್ ಅಧಿಕ ಬೆಲೆಗೆ ಮಾರಾಟ

PBL auction 2018: Sindhu, Saina, Marin, Srikanth headline intense day

ನವದೆಹಲಿ, ಅಕ್ಟೋಬರ್ 9: ನವದೆಹಲಿಯಲ್ಲಿ ಸೋಮವಾರ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಹರಾಜಿನಲ್ಲಿ ಸ್ಟಾರ್ ಆಟಗಾರರಾದ ಪಿವಿ ಸಿಂಧು, ಸೈನಾ ನೆಹ್ವಾಲ್, ಕ್ಯರೋಲಿನಾ ಮರಿನ್ ಮತ್ತು ಕಿದಂಬಿ ಶ್ರೀಕಾಂತ್ ಅತ್ಯಧಿಕ ಬೆಲೆಗೆ ಮಾರಾಟವಾಗಿದ್ದಾರೆ.

ಕಶ್ಯಪ್ ಜತೆ ಮದುವೆ ಸುದ್ದಿ ಖಚಿತಪಡಿಸಿದ ಸೈನಾ ನೆಹ್ವಾಲ್ಕಶ್ಯಪ್ ಜತೆ ಮದುವೆ ಸುದ್ದಿ ಖಚಿತಪಡಿಸಿದ ಸೈನಾ ನೆಹ್ವಾಲ್

ಅಕ್ಟೋಬರ್ 22ರಂದು ಆರಂಭಗೊಂಡು 13 ಜನವರಿ 2019ರಂದು ಕೊನೆಗೊಳ್ಳಲಿರುವ ಈ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪ್ರತಿಭಾನ್ವಿತ ಆಟಗಾರರು ಅಧಿಕ ಮೊತ್ತಕ್ಕೆ ಹರಾಜಾಗುವ ಮೂಲಕ ಗಮನ ಸೆಳೆದರು.

ಸೈನಾ ನೆಹ್ವಾಲ್ ಬಯೋಪಿಕ್: ಸ್ಟಾರ್ ಶೆಟ್ಲರ್ ಆಗಿ ಮಿಂಚಿದ ಶ್ರದ್ಧಾ ಕಪೂರ್ಸೈನಾ ನೆಹ್ವಾಲ್ ಬಯೋಪಿಕ್: ಸ್ಟಾರ್ ಶೆಟ್ಲರ್ ಆಗಿ ಮಿಂಚಿದ ಶ್ರದ್ಧಾ ಕಪೂರ್

ಭಾರತದ ಸ್ಟಾರ್ ಗಳ ಜೊತೆ ಕೆಲ ಅಂತಾರಾಷ್ಟ್ರೀಯ ಆಟಗಾರರ ಸೇರ್ಪಡೆಯಾಗಿರುವುದರಿಂದ ಟೂರ್ನಿ ಕುತೂಹಲ ಮೂಡಿಸಿದೆ. ಪ್ರೊ ಕಬಡ್ಡಿ, ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿಯ ಜೊತೆಯಲ್ಲಿ ಬ್ಯಾಡ್ಮಿಂಟನ್ ಕೂಡ ಕ್ರೀಡಾಭಿಮಾನಿಗಳನ್ನು ರಂಜಿಸಲಿದೆ.

9 ತಂಡಗಳ ನಡುವೆ ಕಾದಾಟ

9 ತಂಡಗಳ ನಡುವೆ ಕಾದಾಟ

ಈ ಬಾರಿಯ ಪಿಬಿಎಲ್ ನಲ್ಲಿ ಅಹ್ಮದಬಾದ್ ಸ್ಮ್ಯಾಷ್ ಮಾಸ್ಟರ್ಸ್, ಅವಧೆ ವಾರಿಯರ್ಸ್, ಬೆಂಗಳೂರು ರ್ಯಾಪ್ಟರ್ಸ್, ಚೆನ್ನೈ ಸ್ಮ್ಯಾಷರ್ಸ್, ಡೆಲ್ಲಿ ಡ್ಯಾಶರ್ಸ್, ಹೈದರಾಬಾದ್ ಹಂಟರ್ಸ್, ಮುಂಬೈ ರಾಕೆಟ್ಸ್, ನಾರ್ತ್ ಈಸ್ಟರ್ನ್ ವಾರಿಯರ್ಸ್ ಮತ್ತು ಪೂಣೆ 7 ಏಸರ್ಸ್ ತಂಡಗಳು ಕಾದಾಡಲಿವೆ.

ಸಿಂಧು ಅಧಿಕ ಬೆಲೆಗೆ ಹರಾಜು

ಸಿಂಧು ಅಧಿಕ ಬೆಲೆಗೆ ಹರಾಜು

ಭಾರತದ ಬ್ಯಾಡ್ಮಿಂಟನ್ ಮಿಂಚು ಪಿವಿ ಸಿಂಧು ಮೊದಲ ಸುತ್ತಿನ ಹರಾಜಿನಲ್ಲೇ ಅತ್ಯಧಿಕ ಬೆಲೆಗೆ ಮಾರಾಟವಾದರು. ಹಾಲಿ ಚಾಂಪಿಯನ್ ಹೈದರಾಬಾದ್ ಹಂಟರ್ಸ್ ಫ್ರಾಂಚೈಸಿ ಸಿಂಧು ಅವರನ್ನು ಭರ್ಜರಿ 80 ಲಕ್ಷಕ್ಕೆ ಖರೀದಿಸಿತು.

ಕಡಿಮೆ ಬೆಲೆಗೆ ಹರಾಜಾಗಿದ್ದ ಸೈನಾ

ಕಡಿಮೆ ಬೆಲೆಗೆ ಹರಾಜಾಗಿದ್ದ ಸೈನಾ

ಡಿಸೆಂಬರ್ 16ಕ್ಕೆ ಮದುವೆ ನಿಗದಿಯಾದ್ದರಿಂದ ಭಾರತ ಮತ್ತೊಬ್ಬ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಮೊದಲು ಚೆನ್ನೈ ಸ್ಮ್ಯಾಷರ್ಸ್ ನಿಂದ ಬರೀ 5 ಲಕ್ಷಕ್ಕೆ ಖರೀದಿಸಲ್ಪಟ್ಟಿದ್ದರು. ಆದರೆ ಟೂರ್ನಿಯಲ್ಲಿ ಸೈನಾ ಆಡುವುದು ಖಾತರಿಯಾಗುತ್ತಲೆ ಒಲಿಂಪಿಕ್ ಕಂಚು ವಿಜೇತೆ ಸೈನಾ ಅವರನ್ನು ನಾರ್ತ್ ಈಸ್ಟರ್ನ್ ವಾರಿಯರ್ಸ್ ಭರ್ಜರಿ 80 ಲಕ್ಷ ರೂ. ಗೆ ಖರೀಸಿತು.

ಮಿಂಚಿದ ಕ್ಯರೋಲಿನಾ

ಮಿಂಚಿದ ಕ್ಯರೋಲಿನಾ

ಒಲಿಂಪಿಕ್ ಚಾಂಪಿಯನ್, ಸ್ಪೇನ್ ಸ್ಟಾರ್ ಆಟಗಾರ್ತಿ ಕ್ಯರೋಲಿನಾ ಮರಿನ್ ಅವರು 70 ಲಕ್ಷ ರೂ.ಗೆ 7 ಏಸಸ್ ಪೂಣೆ ಪಾಲಾಗುವ ಮೂಲಕ ಗಮನ ಸೆಳೆದರು. ಡ್ಯಾನಿಷ್ ಶಟ್ಲರ್ ವಿಶ್ವ ನಂ.3 ವಿಕ್ಟರ್ ಅಕ್ಸೆಲ್ಸನ್ 80 ಲಕ್ಷ ರೂ.ಗೆ ಅಹ್ಮದ್ ಸ್ಮ್ಯಾಷ್ ಮಾಸ್ಟರ್ಸ್ ಪಾಲಾದರೆ, ಸೌತ್ ಕೊರಿಯಾದ ಸುಂಗ್ ಜಿ ಹ್ಯುನ್ ಮತ್ತು ಲೀ ಯಾಂಗ್ ಡೇ 80 ಲಕ್ಷ ರೂ.ಗೆ ಚೆನ್ನೈ ಸ್ಮ್ಯಾಷರ್ಸ್ ಸೇರಿಕೊಂಡರು.

ಶ್ರೀಕಾಂತ್ ಗೂ 80 ಲಕ್ಷ ರೂ.

ಶ್ರೀಕಾಂತ್ ಗೂ 80 ಲಕ್ಷ ರೂ.

80 ಲಕ್ಷ ರೂ. ಅಧಿಕ ಬೆಲೆಗೆ ಮಾರಾಟವಾದವರಲ್ಲಿ ಭಾರತದ ಸ್ಟಾರ್ ಪುರುಷ ಶೆಟ್ಲರ್ ಕಿದಂಬಿ ಶ್ರೀಕಾಂತ್ ಕೂಡ ಇದ್ದಾರೆ. ಶ್ರೀಕಾಂತ್ ಬೆಂಗಳೂರು ರ್ಯಾಪ್ಟರ್ಸ್ ಪಾಲಾದರೆ, ಮತ್ತೊಬ್ಬ ಸ್ಟಾರ್ ಎಚ್ಎಸ್ ಪ್ರಣಯ್ ಕೂಡ 80 ಲಕ್ಷ ರೂ.ಗೆ ಡೆಲ್ಲಿ ಡ್ಯಾಷರ್ಸ್ ನಿಂದ ಖರೀದಿಲ್ಪಟ್ಟರು.

Story first published: Tuesday, October 9, 2018, 1:58 [IST]
Other articles published on Oct 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X