ಪಿಬಿಎಲ್ ಹರಾಜು: ಅತ್ಯಧಿಕ ಬೆಲೆಗೆ ಖರೀದಿಯಾದ ಪಿವಿ ಸಿಂಧು, ತೈ ತ್ಸು ಯಿಂಗ್

ನವದೆಹಲಿ, ನವೆಂಬರ್ 26: ಪ್ರೀಮಿಯರ್ ಲೀಗ್ ಬ್ಯಾಡ್ಮಿಂಟನ್ (ಪಿಬಿಎಲ್) 5ನೇ ಆವೃತ್ತಿಗಾಗಿ ಮಂಗಳವಾರ (ನವೆಂಬರ್ 26) ನಡೆದ ಹರಾಜಿನಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಅವರನ್ನು ಹೈದರಾಬಾದ್ ಹಂಟರ್ಸ್ ಫ್ರಾಂಚೈಸಿ 77 ಲಕ್ಷ ರೂ.ಗೆ ತನ್ನಲ್ಲೇ ಉಳಿಸಿಕೊಂಡಿದೆ.

ವೀಡಿಯೋಗೇಮ್: ಮನರಂಜನೆ ಮಾತ್ರವಲ್ಲ ಹಣವೂ ಗಳಿಸಬಹುದು!

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿನ ವಿಶ್ವ ನಂ.1 ಆಟಗಾರ್ತಿ, ಚೀನಾದ ತೈ ತ್ಸು ಯಿಂಗ್ ಅವರನ್ನು ಹಾಲಿ ಚಾಂಪಿಯನ್ಸ್ ಬೆಂಗಳೂರು ರ್ಯಾಪ್ಟರ್ಸ್ ತಂಡ 77 ಲಕ್ಷ ರೂ.ಗೆ ಖರೀದಿಸಿದೆ. ಪೂಣೆ 7 ಏಸಸ್ ನಡುವಿನ ಬಿಡ್‌ ಕಾಳಗದಲ್ಲಿ ಕೊನೆಗೂ ಬೆಂಗಳೂರು ತ್ಸು ಯಿಂಗ್ ಅವರನ್ನು ತನ್ನ ತೆಕ್ಕೆಗೆ ತಂದುಕೊಂಡಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ!

ಭಾರತದ ಇನ್ನೊಬ್ಬ ಪ್ರತಿಭಾನ್ವಿತ ಆಟಗಾರ ಬಿ ಸಾಯ್‌ಪ್ರಣೀತ್ ಅವರನ್ನು ಬೆಂಗಳೂರು ರ್ಯಾಪ್ಟರ್ಸ್ ತಂಡ 32 ಲಕ್ಷ ರೂ.ಗೆ ತನ್ನಲ್ಲೇ ಉಳಿಸಿಕೊಂಡಿದೆ. ಫ್ರಾಂಚೈಸಿಗಳು ತನ್ನಲ್ಲೇ ಉಳಿಸಿಕೊಂಡ ಭಾರತದ ಇತರ ಆಟಗಾರರೆಂದರೆ ಬಿ ಸುಮೀತ್ ರೆಡ್ಡಿ (ಚೆನ್ನೈ ಸೂಪರ್ ಸ್ಟಾರ್ಝ್-11 ಲಕ್ಷ ರೂ.) ಮತ್ತು ಚಿರಾಗ್ ಶೆಟ್ಟಿ (ಪೂಣೆ 7 ಏಸಸ್-15.50 ಲಕ್ಷ ರೂ.).

ಮಹಿಳಾ ಸಿಂಗಲ್ಸ್‌ನ ವಿಶ್ವ ನಂ.9ನೇ ಆಟಗಾರ್ತಿ, ಅಮೆರಿಕಾದ ಬೀವಾನ್ ಜಾಂಗ್ ಅವರನ್ನು ಅವಧೆ ವಾರಿಯರ್ಸ್ 39 ಲಕ್ಷ ರೂ.ಗೆ ತನ್ನಲ್ಲಿ ಉಳಿಸಿಕೊಂಡಿದೆ. ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಪುತ್ರಿ ಗಾಯತ್ರಿ ಗೋಪಿ ಚಂದ್ ಅವರನ್ನು ಚೆನ್ನೈ ಸೂಪರ್ ಸ್ಟಾರ್ಝ್ ಆರಿಸಿದೆ. ಯುವ ಆಟಗಾರ್ತಿ ಅಶ್ಮಿತ ಚಾಲಿಹ 3 ಲಕ್ಷಕ್ಕೆ ನಾರ್ತ್ ಈಸ್ಟರ್ನ್ ವಾರಿಯರ್ಸ್ ಪಾಲಾಗಿದ್ದಾರೆ.

ಕ್ರಿಕೆಟ್ ಅಂಗಳದಲ್ಲಿ ಮತ್ತೆ ಸದ್ದು ಮಾಡಿದ ಜನಾಂಗೀಯ ನಿಂದನೆ

ಜನವರಿ 20ರಿಂದ ಫೆಬ್ರವರಿ 9ರ ವರೆಗೆ ನಡೆಯಲಿರುವ ಪಿಬಿಎಲ್ 5ನೇ ಆವೃತ್ತಿಯಲ್ಲಿ ಭಾರತದ ಒಟ್ಟು 74 ಶಟ್ಲರ್‌ಗಳು ಸ್ಪರ್ಧಿಸಲಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಲಕ್ನೋ ತಾಣಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ.

ಟೆಸ್ಟ್ ಕ್ರಿಕೆಟ್ ಲೋಕದ ಅಧಿಪತಿ ಟೀಮ್ ಇಂಡಿಯಾ

ಅವಧೆ ವಾರಿಯರ್ಸ್ (ಲಕ್ನೋ), ಬೆಂಗಳೂರು ರ್ಯಾಪ್ಟರ್ಸ್ (ಬೆಂಗಳೂರು), ಮುಂಬೈ ರ್ಯಾಕೆಟ್ಸ್ (ಮುಂಬೈ), ಹೈದರಾಬಾದ್ ಹಂಟರ್ಸ್ (ಹೈದರಾಬಾದ್), ಚೆನ್ನೈ ಸೂಪರ್ ಸ್ಟಾರ್ಝ್ (ಚೆನ್ನೈ), ನಾರ್ತ್ ಈಸ್ಟರ್ನ್ ವಾರಿಯರ್ಸ್ (ನಾರ್ತ್ ಈಸ್ಟ್) ಮತ್ತು ಪೂಣೆ 7 ಏಸಸ್ ಹೀಗೆ ಒಟ್ಟು 7 ತಂಡಗಳು ಈ ಬಾರಿಯ ಪಿಬಿಎಲ್‌ನಲ್ಲಿ ಸೆಣಸಾಡಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, November 26, 2019, 23:25 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X