ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಿಂಧು ಸೋತರೂ ಚೆನ್ನೈ ಸ್ಮ್ಯಾಶರ್ಸ್ ಎದುರು ಗೆದ್ದ ಹೈದರಾಬಾದ್ ಹಂಟರ್ಸ್

PBL: Hyderabad Hunters notches up 5-0 win against Chennai Smashers

ಹೈದರಾಬಾದ್, ಡಿಸೆಂಬರ್ 26: ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಸೋಲಿನ ಹೊರತಾಗಿಯೂ ಹಾಲಿಚಾಂಪಿಯನ್ ಹೈದರಾಬಾದ್ ಹಂಟರ್ಸ್ ತಂಡ ಹೈದರಾಬಾದ್‌ನ ಗಚಿಬೌಲಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪ್ರೀಮಿಯರ್‌ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್‌) ನಲ್ಲಿ ಚೆನ್ನೈ ಸ್ಮ್ಯಾಶರ್ಸ್ ವಿರುದ್ಧ 5-0ಯ ಗೆಲುವು ಸಾಧಿಸಿದೆ.

ಬಾಕ್ಸಿಂಗ್ ಡೇ ಟೆಸ್ಟ್ Live Score: ಭಾರತಕ್ಕೆ ಮಯಾಂಕ್, ಪೂಜಾರ ರನ್ ಬಲಬಾಕ್ಸಿಂಗ್ ಡೇ ಟೆಸ್ಟ್ Live Score: ಭಾರತಕ್ಕೆ ಮಯಾಂಕ್, ಪೂಜಾರ ರನ್ ಬಲ

ಮಂಗಳವಾರ (ಡಿಸೆಂಬರ್ 25) ಮಹಿಳಾ ವಿಭಾಗದ ಸಿಂಗಲ್ಸ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ವಿಶ್ವ ನಂ.8ನೇ ಕೊರಿಯಾ ಆಟಗಾರ್ತಿ ಸುಂಗ್ ಜಿ-ಹ್ಯುನ್ ಎದುರು 15-13, 14-15, 15-7ರ ಹಿನ್ನಡೆ ಅನುಭವಿಸಿದರು. ಆದರೆ ಡಬಲ್ಸ್ ವಿಭಾಗದಲ್ಲಿ ಗೆಲುವು ದಾಖಲಿಸಿದ್ದು ಹಂಟರ್ಸ್‌ ಗೆಲುವಿಗೆ ನೆರವು ನೀಡಿತು.

ಪುರುಷರ ಡಬಲ್ಸ್‌ನಲ್ಲಿ ಹೈದರಾಬಾದ್ ಹಂಟರ್ಸ್ ಪ್ರತಿನಿಧಿಸಿದ್ದ ಬೋಡಿನ್ ಇಸಾರಾ (ಥೈಲ್ಯಾಂಡ್) ಮತ್ತು ಕಿಮ್ ಸಾ ರಂಗ್ (ಕೊರಿಯಾ) ಜೋಡಿ ಚೆನ್ನೈಯ ಚಿನ್ ಚುಂಗ್ ಓರ್ ಮತ್ತು ಬಿ ಸುಮೀತ್ ರೆಡ್ಡಿ ಜೊತೆಯನ್ನು ಹಿಮ್ಮೆಟ್ಟಿಸಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಹಂಟರ್ಸ್ ತಂಡ ಪುಣೆ 7 ಏಸಸ್ ವಿರುದ್ಧ ಶುಭಾರಂಭ ಕಂಡಿತ್ತು.

Story first published: Thursday, January 3, 2019, 20:30 [IST]
Other articles published on Jan 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X