ಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳ ಸುರಿಮಳೆ

ಭಾರತದ ಬ್ಯಾಡ್ಮಿಂಟನ್ ಚರಿತ್ರೆಯ ಪುಟಕ್ಕೆ ಹೊಸ ಗರಿ ಸಿಕ್ಕಿದೆ. ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ಐತಿಹಾಸಿಕ ಸಾಧನೆ ಮಾಡಿದ್ದು, ಥಾಮಸ್ ಕಪ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕವನ್ನು ಗೆದ್ದು ಬೀಗಿದೆ.

ಭಾನುವಾರ (ಮೇ 15) ಥಾಯ್ಲೆಂಡ್‌ನ ಇಂಪ್ಯಾಕ್ಟ್ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಸೋಲಿಸಿದ ಭಾರತ, ಇತಿಹಾಸದಲ್ಲಿ ತನ್ನ ಮೊದಲ ಥಾಮಸ್ ಕಪ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಕಿಡಂಬಿ ಶ್ರೀಕಾಂತ್ 21-15, 23-21 ನೇರ ಗೇಮ್‌ಗಳಲ್ಲಿ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿದರು. ಭಾರತ ಯಾವುದೇ ಪಂದ್ಯವನ್ನು ಸೋಲದೆ ಪ್ರಶಸ್ತಿಯನ್ನು ಮುಡಿಗೇರಸಿಕೊಂಡಿತು.

ಮೊದಲ ಬಾರಿ ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ದೇಶದ ಪ್ರಧಾನಿ, ಕ್ರೀಡಾ ಸಚಿವರು, ಕ್ರೀಡಾಪಟುಗಳು ಸೇರಿದಂತೆ ನೂರಾರು ಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

ಟ್ವೀಟ್ ಮೂಲಕ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ
ಭಾರತ ಬ್ಯಾಡ್ಮಿಂಟನ್ ತಂಡ ಇತಿಹಾಸ ಬರೆದಿದೆ. ಥಾಮಸ್ ಕಪ್ ಗೆದ್ದ ಭಾರತದಿಂದ ಇಡೀ ದೇಶವೇ ಸಂಭ್ರಮಿಸಿದೆ. ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗಾಗಿ ಆಟಗಾರರಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಕ್ರೀಡಾ ಪಟುಗಳಿಗೆ ಪ್ರೇರಣೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರಶಂಸೆ
ಇತಿಹಾಸ ಸೃಷ್ಟಿಸಲಾಗಿದೆ, ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳು. ಮಲೇಷ್ಯಾ, ಡೆನ್ಮಾರ್ಕ್ ಮತ್ತು ಇಂಡೋನೇಷ್ಯಾ ವಿರುದ್ಧದ ಸತತ ವಿಜಯಗಳೊಂದಿಗೆ ಈ ಅಸಾಮಾನ್ಯ ಸಾಧನೆಯು ರಾಷ್ಟ್ರದ ಗೌರವಕ್ಕೆ ಪಾತ್ರರಾಗಿದ್ದೀರಿ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇತಿಹಾಸವನ್ನು ಬರೆಯಲಾಗಿದೆ ಎಂದ ಬಿಐಎ
ಕಠಿಣ ಅಭ್ಯಾಸ ಮತ್ತು ದೃಢ ನಿರ್ಧಾರದ ಶುದ್ಧ ಪ್ರದರ್ಶನದಿಂದ ಭಾರತವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಫೈನಲ್‌ನಲ್ಲಿ 3-0 ಗೋಲುಗಳಿಂದ ಸೋಲಿಸಿ, ಇತಿಹಾಸದಲ್ಲಿ ಮೊದಲ ಬಾರಿಗೆ ಥಾಮಸ್‌ ಕಪ್ ಚಾಂಪಿಯನ್ ಆಗಿದೆ. ಬಂಗಾರದ ಪದಕ ಮನೆಗೆ (ಭಾರತ) ಬರುತ್ತಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಪ್ರಾಧಿಕಾರ ಹರ್ಷ ವ್ಯಕ್ತಪಡಿಸಿದೆ.

ದೇಶ ಹೆಮ್ಮೆ ಪಡುತ್ತಿದೆ
ಮೊದಲ ಬಾರಿಗೆ ಭಾರತ ಥಾಮಸ್ ಕಪ್ ಅನ್ನು ತನ್ನದಾಗಿಸಿಕೊಂಡಿತು. ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಇದು ಮಹತ್ವದ ದಿನವಾಗಿದ್ದು, ಅದು ನಮ್ಮ ಕ್ರೀಡಾ ಇತಿಹಾಸದ ಇತಿಹಾಸದಲ್ಲಿ ಅಚ್ಚೊತ್ತಲಿದೆ. ಈ ಮಹಾನ್ ಸಾಧನೆಗಾಗಿ ನಾನು ನಮ್ಮ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಪ್ರತಿಯೊಬ್ಬ ಭಾರತೀಯನೂ ಇಂದು ಅಪಾರ ಹೆಮ್ಮೆಪಡುತ್ತಾನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದಿಸಿದ್ದಾರೆ.

ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅಭಿನಂದನೆ
ಭಾರತೀಯ ಬ್ಯಾಡ್ಮಿಂಟನ್‌ಗೆ ಐತಿಹಾಸಿಕ ಸಾಧನೆ ಮತ್ತು ಬೃಹತ್ ಹೆಮ್ಮೆಯ ಕ್ಷಣ. ಥಾಮಸ್ ಕಪ್ ಗೆದ್ದ ಬ್ಯಾಡ್ಮಿಂಟನ್ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು ಎಂದು ಭಾರತದ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಕೂ ಮೂಲಕ ಅಭಿನಂದಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 15, 2022, 16:22 [IST]
Other articles published on May 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X