ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಉಳಿತಾಯದ ಹಣವನ್ನು ದೇಣಿಗೆ ನೀಡಿದ ಪುಲ್ಲೇಲ ಗೋಪಿಚಂದ್

Pullela Gopichand donates Rs 26 lakh to help fight the coronavirus

ನವದೆಹಲಿ, ಏಪ್ರಿಲ್ 6: ಭಾರತೀಯ ಬ್ಯಾಡ್ಮಿಂಟನ್‌ನ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್, ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡಿದ್ದಾರೆ. ಮಾರಕ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಿತ್ತಿರುವ ಕ್ರೀಡಾತಾರೆಯರ ಸಾಲಿನಲ್ಲಿ ಗೋಪಿಚಂದ್ ಸೇರಿಕೊಂಡಿದ್ದಾರೆ.

ಕೊರೊನಾ ವೈರಸ್ ಹಾವಳಿಕೆ ಬರೊಬ್ಬರಿ 8 ಕ್ರಿಕೆಟಿಗರ ಮದುವೆ ಮುಂದಕ್ಕೆ!ಕೊರೊನಾ ವೈರಸ್ ಹಾವಳಿಕೆ ಬರೊಬ್ಬರಿ 8 ಕ್ರಿಕೆಟಿಗರ ಮದುವೆ ಮುಂದಕ್ಕೆ!

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ನ ಮಾಜಿ ಚಾಂಪಿಯನ್ ಆಗಿರುವ ಪುಲ್ಲೇಲ ಗೋಪಿಚಂದ್, ತನ್ನ ಉಳಿತಾಯದ ಹಣದಲ್ಲಿ 26 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಣ್ಣ ನೆರವು ನೀಡಿದ್ದೇನೆ,' ಎಂದು ಗೋಪಿಚಂದ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಆಟಗಾರರನ್ನು ಹೆಸರಿಸಿದ ಸನ್‌ರೈಸರ್ಸ್ ಮಾಜಿ ಕೋಚ್ಟಿ20 ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಆಟಗಾರರನ್ನು ಹೆಸರಿಸಿದ ಸನ್‌ರೈಸರ್ಸ್ ಮಾಜಿ ಕೋಚ್

'ಎಲ್ಲಾ ಸವಾಲುಗಳ ಮಧ್ಯೆಯೂ ನಮ್ಮ ದೇಶ ವಿಭಿನ್ನವಾಗಿದೆ. ಕೊರೊನಾವೈರಸ್ ಹತ್ತಿಕ್ಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿವೆ. ನಮ್ಮ ಸಣ್ಣ ಸಹಾಯದ ಮೂಲಕ ಅವರಿಗೆ ನೆರವು ನೀಡೋಣ. ಮುಖ್ಯವಾಗಿ ಮನೆಯಲ್ಲೇ ಇರಬೇಕೆನ್ನುವ ಸರ್ಕಾರ ಸೂಚನೆಗಳನ್ನು ಪಾಲಿಸೋಣ,' ಎಂದು ಗೋಪಿಚಂದ್ ನುಡಿದಿದ್ದಾರೆ.

ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!

ಅರ್ಜುನ ಪ್ರಶಸ್ತಿ, ದ್ರೊಣಾಚಾರ್ಯ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳನ್ನು ಗೆದ್ದಿರುವ ಪುಲ್ಲೆಲ ಗೋಪಿಚಂದ್, ಈಗಾಗಲೇ ಪ್ರಧಾನಿ ಪರಿಹಾರ ನಿಧಿಗೆ 11 ಲಕ್ಷ ರೂ., ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ., ಆಂಧ್ರಪ್ರದೇಶ ಮುಖ್ಯಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

Story first published: Monday, April 6, 2020, 17:00 [IST]
Other articles published on Apr 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X