ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವರ್ಲ್ಡ್ ಬ್ಯಾಡ್ಮಿಂಟನ್: ಯಮಾಗುಚಿ ಸೋಲಿಸಿದ ಸಿಂಧು ಫೈನಲ್ ಗೆ

PV Sindhu beats Akane Yamaguchi 21-16, 24-22 to move into the final

ನಾನ್ಜಿಂಗ್, ಆಗಸ್ಟ್ 4: ಚೀನಾದ ನಾನ್ಜಿಂಗ್ ನಲ್ಲಿ ನಡೆದ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮಹಿಳಾ ಸಿಂಗಲ್ಸ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಸಿಂಧುವಿಗೆ ಬೆಳ್ಳಿಯ ಪದಕವಂತೂ ಖಾತ್ರಿಯಾಗಿದೆ.

ಅನುಚಿತ ವರ್ತನೆ: ಇಶಾಂತ್ ಶರ್ಮಾಗೆ ದಂಡ ವಿಧಿಸಿದ ಐಸಿಸಿಅನುಚಿತ ವರ್ತನೆ: ಇಶಾಂತ್ ಶರ್ಮಾಗೆ ದಂಡ ವಿಧಿಸಿದ ಐಸಿಸಿ

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಅವರು ಜಪಾನ್ ಬಲಾಡ್ಯೆ ಅಕೆನೆ ಯಮಾಗುಚಿ ಅವರನ್ನು 21-16, 24-22ರ ನೇರ ಸೆಟ್ ನಿಂದ ಸೋಲಿಸಿದರು. ಈ ಪಂದ್ಯಕ್ಕೂ ಮೊದಲು ಭಾರತಕ್ಕೆ ಕಂಚನ್ನು ಖಾತ್ರಿಪಡಿಸಿದ್ದ ಸಿಂಧು ಈಗ ಪ್ರಶಸ್ತಿ ನಿರೀಕ್ಷೆಯನ್ನು ಹೆಚ್ಚಿದ್ದಾರೆ.

ವಿಶ್ವ ನಂ. 2 ಆಟಗಾರ್ತಿ ಯಮಾಗುಚಿ ಅವರು ಮೊದಲ ಸೆಟ್ಟನ್ನು ಕೊಂಚ ಸುಲಭವಾಗಿ ಬಿಟ್ಟುಕೊಟ್ಟರೂ ದ್ವಿತೀಯ ಸೆಟ್ ನಲ್ಲಿ ತೀವ್ರ ಪೈಪೋಟಿ ನೀಡುವ ಮೂಲಕ ತಾನು ವಿಶ್ವ ಶ್ರೇಷ್ಠ ಆಟಗಾರ್ತಿ ಎನ್ನುವುದನ್ನು ಸಿಂಧುಗೆ ಪೈಪೋಟಿ ಮೂಲಕವೇ ತಿಳಿಸಿದರು. ಹೀಗಾಗಿ ದ್ವಿತೀಯ ಸೆಟ್ 24-22ರ ವರೆಗೂ ಮುಂದುವರೆಯತು.

ಟೂರ್ನಿಯ ಆರಂಭದಲ್ಲೇ ಸಿಂಧು ಈ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಭರವಸೆ ನೀಡಿದ್ದರು. ಅದರಂತೆ ಈಗ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಸಿಂಧು, ಫೈನಲ್ ನಲ್ಲಿ 2016ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸ್ಪೇನ್ ನ ಕೆರೋಲಿನಾ ಮರಿನ್ ಅವರ ಸವಾಲು ಸ್ವೀಕರಿಸಲಿದ್ದಾರೆ.

Story first published: Saturday, August 4, 2018, 20:33 [IST]
Other articles published on Aug 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X