ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಿಡಬ್ಲ್ಯೂಎಫ್ ಕಮೀಷನ್ ಸದಸ್ಯೆಯಾಗಿ ಸಿಂಧು ಆಯ್ಕೆ

ನಾಲ್ವರು ಸದಸ್ಯರ ನಿವೃತ್ತಿಯಿಂದಾಗಿ ತೆರವಾಗಿದ್ದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸಂಸ್ಥೆಯ ಅಥ್ಲೀಟ್ ಗಳ ಸದಸ್ಯತ್ವ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಿ.ವಿ. ಸಿಂಧು ಆಯ್ಕೆ.

ಗೋಲ್ಡ್ ಕೋಸ್ಟ್, ಮೇ 24: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರಾದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸಂಸ್ಥೆಯ (ಬಿಡಬ್ಲ್ಯೂಎಫ್) ಅಥ್ಲೀಟ್ ಗಳ ಕಮೀಷನ್ ನ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ಈ ಪ್ರತಿಷ್ಠಿತ ಕಮೀಷನ್ ನ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗಾಗಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಚುನಾವಣೆ ನಡೆಯಿತು.

PV Sindhu elected to BWF Athletes’ Commission

ಆ ಚುನಾವಣೆಯಲ್ಲಿ 129 ಮತಗಳನ್ನು ಗಳಿಸಿದ ಸಿಂಧು ಕಮೀಷನ್ ಗೆ ಆಯ್ಕೆಯಾದರು. ಇನ್ನು, ಇದೇ ಚುನಾವಣೆಯಲ್ಲಿ ಸ್ಕಾಟ್ಲೆಂಡ್ ನ ಬ್ಯಾಡ್ಮಿಂಟನ್ ಆಟಗಾರ್ತಿ ಕಿರ್ಸ್ ಟಿ ಗಿಲ್ಮರ್ 103 ಮತಗಳನ್ನು ಗಳಿಸಿದರೆ, ಜರ್ಮನಿಯ ಮಾರ್ಕ್ ಜ್ವಿಬ್ಲೆರ್ ಅವರು 108 ಮತ ಗಳಿಸಿ ಸದಸ್ಯತ್ವಕ್ಕೆ ಅರ್ಹರಾದರು. ಇವರು ಮುಂದಿನ ನಾಲ್ಕು ವರ್ಷಗಳವರೆಗೆ ಅಥ್ಲೀಟ್ ಗಳ ಕಮೀಷನ್ ನ ಸದಸ್ಯರಾಗಿರಲಿದ್ದಾರೆ.

ಈ ಮೂವರೂ, ಯುಹಾನ್ ಟ್ಯಾನ್ (ಬೆಲ್ಜಿಯಂ), ಹನ್ಸ್ ಕ್ರಿಶ್ಚಿಯನ್ ಸೊಲ್ಬೆರ್ಗ್ ವಿಟ್ಟಿಂಗ್ ಹಸ್ (ಡೆನ್ಮಾರ್ಕ್) ಹಾಗೂ ಗ್ರೇಸಿಯಾ ಪೊಲಿ (ಇಂಡೋನೇಷ್ಯಾ) ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಗಳನ್ನು ತುಂಬಿದ್ದಾರೆ. ಮತ್ತೊಂದು ಸ್ಥಾನಕ್ಕೆ (ಒಟ್ಟು ನಾಲ್ಕು ಸ್ಥಾನಗಳಿಗೆ ಆದ ಚುನಾವಣೆ) ಲಿಥುವೇನಿಯಾದ ಅಕ್ವಿಲೆ ಸ್ಟಾಪುಸೈಟಿಟ್ (25 ಮತ) ಆಯ್ಕೆಯಾದರು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X