''ನಾನು ದೇಶವನ್ನು ತೊರೆದಿಲ್ಲ, ಕುಟುಂಬದೊಂದಿಗೆ ಬಿರುಕು ಮೂಡಿಲ್ಲ'' : ಸುಳ್ಳು ಸುದ್ದಿಗಳಿಗೆ ಪಿ.ವಿ ಸಿಂಧು ತಿರುಗೇಟು

ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮಂಗಳವಾರ ರಾಷ್ಟ್ರೀಯ ಶಿಬಿರವನ್ನು ತೊರೆದು ಇಂಗ್ಲೆಂಡ್‌ಗೆ ಪ್ರಯಾಣಿಸಿದರ ಕುರಿತು ವರದಿಯಾದ ಲೇಖನಗಳು ಸೇರಿದಂತೆ ವದಂತಿಗಳಿಗೆ ತಿರುಗೇಟು ನೀಡಿದ್ದಾರೆ. ಕುಟುಂಬದೊಂದಿಗಿನ ಬಿರುಕಿನಿಂದಾಗಿ ಭಾರತವನ್ನು ತೊರೆದು ಇಂಗ್ಲೆಂಡ್‌ಗೆ ಹೋದರು ಎಂಬ ವರದಿಯನ್ನು ತಿರಸ್ಕರಿಸಿದ್ದಾರೆ.

ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಒಲಿಂಪಿಕ್ ಶಿಬಿರ ತ್ಯಜಿಸಿ ದಿಢೀರ್ ಎಂದು ಇಂಗ್ಲೆಂಡ್‌ಗೆ ತೆರಳಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರವನ್ನು ತ್ಯಜಿಸಿರುವ ಸಿಂಧು ಈಗ ಲಂಡನ್‍ನಲ್ಲಿದ್ದಾರೆ.

10 ವಾರಗಳ ಕಾಲ ಬ್ರಿಟನ್‌ನಲ್ಲಿ ವಾಸ್ತವ್ಯ?

ತಮ್ಮ ಈ ನಿರ್ಧಾರಕ್ಕೆ ವೈಯಕ್ತಿಕ ಕಾರಣವನ್ನು ಸಿಂಧು ನೀಡಿದ್ಧಾರೆ. ಚೇತರಿಕೆ ಮತ್ತು ಪುಷ್ಟಿಗಾಗಿ ತಾವು ಇಂಗ್ಲೆಂಡ್‌ಗೆ ತೆರಳಿರುವುದಾಗಿ ಇನ್‍ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಅವರು 10 ವಾರಗಳ ಕಾಲ ಬ್ರಿಟನ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಅವರು ಮುಂದಿನ ಎರಡು ತಿಂಗಳ ಕಾಲ ಇಂಗ್ಲೆಂಡ್‌ನಲ್ಲಿ ಇರಬೇಕಾಗುತ್ತದೆ.

ಡೆನ್ಮಾರ್ಕ್ ಓಪನ್: ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ಕಿದಂಬಿ ಶ್ರೀಕಾಂತ್‌

ಆದರೆ ಈ ಕುರಿತಾಗಿ ಲೇಖನಗಳು ಪ್ರಕಟವಾಗಿದ್ದು, ಸಿಂಧು ದೇಶವನ್ನು ತೊರೆದಿದ್ದು, ಮನೆಯವರೊಂದಿಗೆ ಜಗಳ ಮಾಡಿಕೊಂಡಿದ್ದಾಎ, ಅಲ್ಲದೆ ಪುಲ್ಲೇಲ ಗೋಪಿಚಂದ್ ಅಕಾಡೆಮಿಗೂ ಸದ್ಯಕ್ಕೆ ಹಿಂದಿರುಗುವುದಿಲ್ಲ ಎಂದು ಪ್ರಕಟವಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಸಿಂಧು, ಇವೆಲ್ಲ ಸತ್ಯಕ್ಕೆ ದೂರವಾಗಿದ್ದು, ಆ ರೀತಿಯ ಯಾವುದೇ ಮನಸ್ತಾಪಗಳು ಇಲ್ಲ ಎಂದಿದ್ದಾರೆ.

ಕುಟುಂಬದೊಂದಿಗೆ ಯಾವುದೇ ಮನಸ್ತಾಪ ಇಲ್ಲ!

"ಜಿಎಸ್ಎಸ್ಐನೊಂದಿಗೆ ನನ್ನ ಪೋಷಣೆ ಮತ್ತು ಚೇತರಿಕೆಯ ಅಗತ್ಯತೆಗಳ ಬಗ್ಗೆ ಕೆಲಸ ಮಾಡಲು ನಾನು ಕೆಲವು ದಿನಗಳ ಹಿಂದೆ ಲಂಡನ್‌ಗೆ ಬಂದಿದ್ದೇನೆ. ನನ್ನ ಪೋಷಕರ ಒಪ್ಪಿಗೆಯೊಂದಿಗೆ ನಾನು ಇಲ್ಲಿಗೆ ಬಂದಿದ್ದೇನೆ ಮತ್ತು ಅವರು ಈ ವಿಷಯದಲ್ಲಿ ಯಾವುದೇ ಕುಟುಂಬ ಬಿರುಕುಗಳಿಲ್ಲ. ನನಗೆ ಏಕೆ ಸಮಸ್ಯೆಗಳು / ಸಮಸ್ಯೆಗಳಿವೆ ನನ್ನ ಸಲುವಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ನನ್ನ ಪೋಷಕರು, "ಎಂದು ಪಿ.ವಿ ಸಿಂಧು ತನ್ನ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಗೋಪಿಚಂದ್ ಅಕಾಡೆಮಿಯಲ್ಲಿ ನನಗೇನು ಸಮಸ್ಯೆಯಿಲ್ಲ!

ಗೋಪಿಚಂದ್ ಅಕಾಡೆಮಿಯಲ್ಲಿ ನನಗೇನು ಸಮಸ್ಯೆಯಿಲ್ಲ!

"ನನಗೆ ಬಹಳ ನಿಕಟವಾದ ಕುಟುಂಬ ಮತ್ತು ಅವರು ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ. ನಾನು ಪ್ರತಿದಿನ ನನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇನೆ. ಅಲ್ಲದೆ ನನ್ನ ತರಬೇತುದಾರ ಶ್ರೀ ಗೋಪಿಚಂದ್ ಅಥವಾ ಅಕಾಡೆಮಿಯಲ್ಲಿನ ತರಬೇತಿ ಸೌಲಭ್ಯಗಳೊಂದಿಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ" ಎಂದು ಅವರು ಹೇಳಿದರು.

ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದ ಸ್ಟಾರ್ ಶಟ್ಲರ್ ಪಿವಿ ಸಿಂಧು

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ತನ್ನ ಹೆತ್ತವರ ಒಪ್ಪಿಗೆಯೊಂದಿಗೆ ದೇಶವನ್ನು ತೊರೆದಿದ್ದಾರೆ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಈ ಮೂಲಕ ಹೇಳಿದರು.

ಸುಳ್ಳು ವರದಿಗೆ ಸಿಂಧು ಆಕ್ರೋಶ

ಸುಳ್ಳು ವರದಿಗೆ ಸಿಂಧು ಆಕ್ರೋಶ

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸಿಂಧು "ದೇಶವನ್ನು ತೊರೆದಿದ್ದಾಳೆ" ಎಂದು ವರದಿಯೊಂದಿಗೆ, ಪುಲ್ಲೆಲಾ ಗೋಪಿಚಂದ್ ಅಕಾಡೆಮಿಯ ತರಬೇತುದಾರರಿಗೆ ತಾನು "ಮುಂದಿನ ಎಂಟರಿಂದ ಹತ್ತು ವಾರಗಳವರೆಗೆ ಹಿಂದಿರುಗುವುದಿಲ್ಲ" ಎಂದು ತಿಳಿಸಿರುವುದಾಗಿ ವರದಿಯಲ್ಲಿ ಸೇರಿಸಲಾಗಿದೆ.

ಈ ವರದಿಗಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಂಧು ''ಸುಳ್ಳು ಸುದ್ದಿಗಳನ್ನು ಹರಡುತ್ತಿರುವ TOI ಯ ಕ್ರೀಡಾ ವರದಿಗಾರ ಶ್ರೀ ಎಂ. ರತ್ನಾಕರ್ ಬರೆಯುವ ಮೊದಲು ಅವನು ಸತ್ಯಗಳನ್ನು ತಿಳಿದುಕೊಳ್ಳಬೇಕು. ಅವನು ಇದನ್ನು ನಿಲ್ಲಿಸದಿದ್ದರೆ, ನಾನು ಆತನ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ'' ಎಂದು ಹೇಳಿದ್ದಾರೆ

ಸಿಂಧು ತಂದೆ ಏನು ಹೇಳಿದ್ದಾರೆ?

ಸಿಂಧು ತಂದೆ ಏನು ಹೇಳಿದ್ದಾರೆ?

ಭಾರತದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರ ಸಮರ್ಪಕವಾಗಿಲ್ಲದ ಕಾರಣ ಸಿಂಧು ಇಂಗ್ಲೆಂಡ್‌ಗೆ ತೆರಳಿ ವಿಶೇಷ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‍ನ ಏಷ್ಯಾ ಸ್ಪರ್ಧೆಗಳಿಗಾಗಿ ಅವರು ವಿಶೇಷ ತರಬೇತಿ ಪಡೆಯುತ್ತಿದ್ದಾರೆ ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ತಿಳಿಸಿದ್ದಾರೆ. ತಾವು ಲಂಡನ್‌ಗೆ ತೆರಳಲು ವೈಯಕ್ತಿಕ ಕಾರಣ ಎಂದು ಸಿಂಧು ಹೇಳಿಕೆ ನೀಡಿರುವ ಬೆನ್ನಲ್ಲೇ ಅವರ ತಂದೆಯವರು ಈ ವಿಷಯ ದೃಢಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, October 20, 2020, 14:41 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X