ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್: ಹೊರ ಬಿದ್ದ ಪಿವಿ ಸಿಂಧು, ಸೈನಾ ನೆಹ್ವಾಲ್

ಪ್ಯಾರಿಸ್, ಅಕ್ಟೋಬರ್ 26: ಭಾರತದ ಖ್ಯಾತ ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಇಬ್ಬರೂ ಸ್ಪರ್ಧೆ ಕೊನೆಗೊಳಿಸಿದ್ದಾರೆ.

'ಎಂಎಸ್ ಧೋನಿ ಬಗ್ಗೆ ಮಾತನಾಡೋರಿಗೆ ಶೂ ಲೇಸ್ ಕಟ್ಟಲೂ ಬರೋಲ್ಲ'

ಇತ್ತೀಚೆಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಸಿಂಧು, ವಿಶ್ವ ನಂ.1 ಆಟಗಾರ್ತಿ, ತೈವಾನ್‌ನ ತೈ ತ್ಸು ಯಿಂಗ್ ಎದುರು 21-16, 24-26, 21-17ರ ಹಿನ್ನಡೆ ಅನುಭವಿಸಿದರು. ಇಬ್ಬರ ಮಧ್ಯೆ 75 ನಿಮಿಷಗಳ ಕಾದಾಟ ನಡೆಯಿತು. ಆದರೆ ಭಾರತದ ಪುರುಷರ ಜೋಡಿ ಸಾತ್ವಿಕ್ ಸಾಯ್‌ರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಕಪ್‌ ಗೆದ್ದ ಕರ್ನಾಟಕ!

ಇದಕ್ಕೂ ಮುನ್ನ ಶುಕ್ರವಾರವೇ (ಅಕ್ಟೋಬರ್ 25) ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮತ್ತೊಬ್ಬ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಕೊರಿಯಾದ ಹದಿಹರೆಯದ ಹುಡುಗಿ ಆನ್ ಸೆ ಯಂಗ್ ಸೋಲಿಸಿದರು. 17ರ ಹರೆಯದ ಯಂಗ್ ಎದುರು ಸೈನಾ 22-20, 23-21ರ ಅಂತರದಿಂದ ಪರಾಭವಗೊಂಡರು.

For Quick Alerts
ALLOW NOTIFICATIONS
For Daily Alerts
Story first published: Saturday, October 26, 2019, 13:31 [IST]
Other articles published on Oct 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X