ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ವಿಶ್ವಾಸದಲ್ಲಿ ಸೈನಾ ನೆಹ್ವಾಲ್‌

Saina Nehwal eyeing second title of season at New Zealand Open

ಆಕ್ಲೆಂಡ್‌, ಏಪ್ರಿಲ್‌ 30: ವಿಶ್ವದ ಮಾಜಿ ನಂ.1 ಆಟಗಾರ್ತಿ ಭಾರತದ ಸೈನಾ ನೆಹ್ವಾಲ್‌, ಇತ್ತೀಚೆಗೆ ಅಂತ್ಯಗೊಂಡ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್ಸ್‌ನ ವೈಫಲ್ಯವನ್ನು ಮರೆತು ಇಲ್ಲಿ ಮಂಗಳವಾರ ಆರಂಭವಾಗಲಿರುವ ನ್ಯೂಜಿಲೆಂಡ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಅಖಾಡಕ್ಕಿಳಿಯಲಿದ್ದಾರೆ.

 ಟೆನಿಸ್‌: ಸ್ಟಟ್‌ಗಾರ್ಟ್‌ ಚಾಂಪಿಯನ್‌ ಕ್ವಿಟೋವಾಗೆ ವಿಶ್ವದ 2ನೇ ಶ್ರೇಯಾಂಕ ಟೆನಿಸ್‌: ಸ್ಟಟ್‌ಗಾರ್ಟ್‌ ಚಾಂಪಿಯನ್‌ ಕ್ವಿಟೋವಾಗೆ ವಿಶ್ವದ 2ನೇ ಶ್ರೇಯಾಂಕ

29 ವರ್ಷದ ಅನುಭವಿ ಆಟಗಾರ್ತಿ ಸೈನಾ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದು, ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವ್ಯಾಂಗ್‌ ಝೀಯಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ವಿಶ್ವದ 9ನೇ ಶ್ರೇಯಾಂಕ ಹೊಂದಿರುವ ಸೈನಾ, ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದ ಏಕಮಾತ್ರ ಭಾರತೀಯ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಇಂಡೋನೇಷ್ಯಾ ಮಾಸ್ಟರ್ಸ್‌ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದ ಸೈನಾ, ಇದೀಗ ಕಿವೀಸ್‌ ನೆಲದಲ್ಲಿ ವರ್ಷದ ಎರಡನೇ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದ್ದಾರೆ.

 ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಬಂಧನ, ಬಿಡುಗಡೆ ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಬಂಧನ, ಬಿಡುಗಡೆ

ಇನ್ನು ಏಷ್ಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಮುಗ್ಗರಿಸಿದ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧೂ, ನ್ಯೂಜಿಲೆಂಡ್‌ ಓಪನ್‌ನಿಂದ ದೂರ ಉಳಿದಿದ್ದಾರೆ. ಆದರೆ, ಯುವ ಪ್ರತಿಭೆ ಅರುಣಾ ಪ್ರಭುದೇಸಾಯಿ ಕಣದಲ್ಲಿದ್ದು, ಪ್ರಥಮ ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಚೀನಾದ ಲೀ ಕ್ಸುರುಯಿ ಅವರ ಕಠಿಣ ಸವಾಲನ್ನು ಎದುರಿಸಲಿದ್ದಾರೆ.

 ಐಪಿಎಲ್‌: ಹಾರ್ದಿಕ್‌ ವೀರಾವೇಶ ವ್ಯರ್ಥ, ಕೆಕೆಆರ್‌ಗೆ 34 ರನ್‌ ಜಯ ಐಪಿಎಲ್‌: ಹಾರ್ದಿಕ್‌ ವೀರಾವೇಶ ವ್ಯರ್ಥ, ಕೆಕೆಆರ್‌ಗೆ 34 ರನ್‌ ಜಯ

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಅನುಭವಿಗಳಾದ ಬಿ ಸಾಯ್‌ ಪ್ರಣೀತ್‌, ಎಚ್‌.ಎಸ್‌ ಪ್ರಣೋಯ್‌ ಹಾಗೂ ಶುಭಾಂಕರ್‌ ಡೇ ಪ್ರಧಾನ ಘಟ್ಟಕ್ಕೆ ನೇರ ಅರ್ಹತೆ ಪಡೆದರೆ, ಮತ್ತೊಂದೆಡೆ ಅಜಯ್‌ ಜಯರಾಮ್‌, ಪರುಪಳ್ಳಿ ಕಶ್ಯಪ್‌ ಮತ್ತು ಲಕ್ಷ್ಯ ಸೇನ್‌ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಬೇಕಿದೆ.

Story first published: Monday, April 29, 2019, 19:18 [IST]
Other articles published on Apr 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X