ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬ್ರೆಜಿಲ್‌ನಲ್ಲಿ ನಡೆದ ಕಿವುಡರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಶ್ರೇಯಾ

Shreya Singla won gold medal in Brazil deaflympics 2022 in Badminton

ಏಪ್ರಿಲ್ 27ರಂದು ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬ್ರೆಜಿಲ್‌ಗೆ ಹಾರಿದ್ದ ಪಂಜಾಬ್‌ನ ಶ್ರೇಯಾ ಸಿಂಗ್ಲಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ ನಡೆದ ಕಿವುಡರ ಒಲಿಂಪಿಕ್ಸ್‌ನಲ್ಲಿ ಮೇ 2ರಿಂದ 4ರವರೆಗೆ ಪಂದ್ಯಗಳನ್ನಾಡಿದ ಶ್ರೇಯಾ ಸಿಂಗ್ಲಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಮೇ 4ರಂದು ನಡೆದ ಭಾರತ ಬ್ಯಾಡ್ಮಿಂಟನ್ ಮತ್ತು ಜಪಾನ್ ಬ್ಯಾಡ್ಮಿಂಟನ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ಎದುರಾಳಿ ಜಪಾನ್ ತಂಡಕ್ಕೆ ಸೋಲುಣಿಸಿದೆ. 17 ವರ್ಷದ ಶ್ರೇಯಾ ಸಿಂಗ್ಲಾ ಕೂಡ ಈ ತಂಡದ ಸದಸ್ಯೆಯಾಗಿದ್ದು ಸ್ವರ್ಣ ವಿಜೇತೆಯಾಗಿ ತವರಿಗೆ ಮರಳಿದ್ದಾರೆ.

ಇನ್ನು ಶ್ರೇಯಾ ಸಿಂಗ್ಲಾ ಬಾಲ್ಯದಿಂದಲೂ ಕಿವುಡುತನ ಹೊಂದಿದ್ದು, ಆಕೆಯ ಬ್ಯಾಡ್ಮಿಂಟನ್ ಪ್ರೇಮಕ್ಕೆ ಇದು ಅಡ್ಡಿಯಾಗಿಲ್ಲ. ತನ್ನ ಏಳನೇ ವಯಸ್ಸಿನಿಂದಲೇ ಬ್ಯಾಡ್ಮಿಂಟನ್ ಆಡಲು ಶುರು ಮಾಡಿದ ಶ್ರೇಯಾ ಸಿಂಗ್ಲಾ ಬಹದ್ದೂರ್ ಘರ್ ಶೈನಿಂಗ್ ಸ್ಟಾರ್‌ನಲ್ಲಿ ತರಬೇತಿ ಪಡೆದು ಇದೀಗ ಚಿನ್ನ ಗೆದ್ದು ಯಶಸ್ಸು ಕಂಡಿದ್ದು, ಈ ಹಿಂದೆ 2019ರಲ್ಲಿ ತೈವಾನ್‌ನಲ್ಲಿ ನಡೆದಿದ್ದ ಎರಡನೇ ವರ್ಲ್ಡ್ ಡೆಫ್ ಯೂತ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ರಜತ ಪದಕ ಗೆದ್ದ ಸಾಧನೆ ಮಾಡಿದ್ದರು.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಹಾಗೂ ಪಂಜಾಬ್ ಸೆಣೆಸಾಟ: ಯಾರು ಗೆದ್ದರೂ ಆರ್‌ಸಿಬಿಗೆ ಹಿನ್ನಡೆ!ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಹಾಗೂ ಪಂಜಾಬ್ ಸೆಣೆಸಾಟ: ಯಾರು ಗೆದ್ದರೂ ಆರ್‌ಸಿಬಿಗೆ ಹಿನ್ನಡೆ!

ಶ್ರೇಯಾ ಸಾಧನೆ ಕುರಿತು ಮಾತನಾಡಿರುವ ಅವರ ಪೋಷಕರು ಆಕೆ ನಾಲ್ಕನೇ ವಯಸ್ಸಿನಲ್ಲಿರುವಾಗ ಕಿವುಡುತನ ಇರುವುದು ತಿಳಿದಿತ್ತು, ಆದರೆ ಕಾಲ ಮಿಂಚಿ ಹೋಗಿದ್ದ ಕಾರಣ ಸರಿಪಡಿಸಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಹಾಗೂ ಕಿವುಡುತನ ಇದ್ದರೂ ಪಂಜಾಬ್ ಮತ್ತು ದೇಶಕ್ಕೆ ಆಕೆ ಹೆಮ್ಮೆ ತಂದಿದ್ದಾಳೆ ಎಂದು ಖುಷಿಯನ್ನೂ ಸಹ ವ್ಯಕ್ತಪಡಿಸಿದರು.

ಇನ್ನು ಬ್ರೆಜಿಲ್‌ನಲ್ಲಿ ನಡೆದ ಈ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತದ 65 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ 8 ಚಿನ್ನದ ಪದಕಗಳು, 1 ಬೆಳ್ಳಿ ಪದಕ ಮತ್ತು 8 ಕಂಚಿನ ಪದಕಗಳನ್ನು ಭಾರತ ಗೆದ್ದಿದ್ದು, ಒಟ್ಟು 17 ಪದಕಗಳನ್ನು ಗೆಲ್ಲುವುದರ ಮೂಲಕ ಪದಕ ಗೆದ್ದ ತಂಡಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿದೆ.

Story first published: Monday, May 16, 2022, 15:39 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X