ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ನಂ.2 ಬ್ಯಾಡ್ಮಿಂಟನ್ ಆಟಗಾರ ಲೀ ಚೊಂಗ್ ವೈಗೆ ಮೂಗಿನ ಕ್ಯಾನ್ಸರ್!

Shuttler Lee Chong Wei diagnosed with nose cancer

ಕೌಲಾಲಂಪುರ್, ಸೆಪ್ಟೆಂಬರ್ 22: ಬ್ಯಾಡ್ಮಿಂಟನ್ ದಂತಕತೆ, ಮಲೇಷ್ಯಾ ಆಟಗಾರ ಲೀ ಚೊಂಗ್ ವೈಗೆ ಆರಂಭಿಕ ಹಂತದ ಮೂಗಿನ ಕ್ಯಾನ್ಸರ್ ಇದೆ. ಚಿಕಿತ್ಸೆಗಾಗಿ ಅವರು ಚೈವಾನ್ ಗೆ ತೆರಳಿದ್ದಾರೆ ಎಂದು ಮಲೇಷ್ಯಾದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಶನಿವಾರ ತಿಳಿಸಿದೆ.

ನಾನು ಯಾರಿಗೂ ಏನನ್ನೂ ಸಾಧಿಸಿ ತೋರಿಸಬೇಕಾಗಿಲ್ಲ: ರವೀಂದ್ರ ಜಡೇಜಾನಾನು ಯಾರಿಗೂ ಏನನ್ನೂ ಸಾಧಿಸಿ ತೋರಿಸಬೇಕಾಗಿಲ್ಲ: ರವೀಂದ್ರ ಜಡೇಜಾ

ಲೀ ಚೊಂಗ್ ಗೆ ಖಾಯಿಲೆಯಿದೆ ಎಂದು ಇತ್ತೀಚೆಗೆ ವರದಿಯೊಂದರಲ್ಲಿ ಹೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲೇಷ್ಯನ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷ ಸೆರಿ ನಾರ್ಜಾ ಜಕರಿಯಾ ಅವರು, 'ಹೌದು, ಲೀ ಚೊಂಗ್ ವೈಗೆ ಆರಂಭಿಕ ಹಂತದಲ್ಲಿರುವ ಮೂಗಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ' ಎಂದು ಖಾತರಿಪಡಿಸಿದ್ದಾರೆ.

'ಚೊಂಗ್ ವೈ ಅವರು ಸದ್ಯ ತೈವಾನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಹಿತರು, ಕುಟುಂಭಸ್ಥರು ಅವರಿಗೆ ಮಾನಸಿಕ ಸ್ಥೈರ್ಯ ತುಂಬುತ್ತಿದ್ದು, ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ತಿಳಿಸಲು ಖುಷಿಯಾಗುತ್ತಿದೆ' ಎಂದು ಜಕರಿಯಾ ಹೇಳಿದರು.

ಚೊಂಗ್ ವೈ ಅವರು ಉಸಿರಾಟಕ್ಕೆ ಸಂಬಂಧಿಸಿದ ಖಾಲೆಯಿಂದ ಬಳಲುತ್ತಿದ್ದಾರೆ ಎಂದು ಎರಡು ತಿಂಗಳಿಗೆ ಹಿಂದೆ ಮಲೇಷ್ಯನ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹೇಳಿಕೆಯೊಂದನ್ನು ನೀಡಿತ್ತು. ಆ ಖಾಯಿಲೆ ಕ್ಯಾನ್ಸರ್ ಎಂಬುದಾಗಿ ತಿಳಿದುಬಂದಿರುವುದು ದುರದೃಷ್ಟಕರ.

ಮಾಜಿ ವಿಶ್ವ ನಂ. 1 ಆಟಗಾರರಾಗಿರುವ ಲೀ ಸದ್ಯ ವಿಶ್ವ ರ್ಯಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ ನಲ್ಲಿ ಮೂರುಬಾರಿ ಬೆಳ್ಳಿ ಗೆದ್ದ ಹಿರಿಮೆಯೂ ಲೀಯದ್ದು. ಈ ಬಾರಿಯ ಮಲೇಷ್ಯಾ ಓಪನ್ ಚಾಂಪಿಯನ್ ಆಗಿಯೂ ಚೊಂಗ್ ವೈ ಮಿಂಚಿದ್ದರು. ತನ್ನ ಖಾಯಿಲೆಯ ಕಾರಣದಿಂದಾಗಿ ಅವರು ಇತ್ತೀಚೆಗೆ ಚೀನಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ನಿಂದ ಮತ್ತು ಇಂಡೋನೇಷ್ಯಾ ಏಷ್ಯಾನ್ ಗೇಮ್ಸ್ ನಿಂದ ಹಿಂದೆ ಸರಿದಿದ್ದರು. ಇವೆಲ್ಲದಕ್ಕಿಂತ ಹೆಚ್ಚಾಗಿ ಲೀ ಉತ್ತಮ ವ್ಯಕ್ತಿತ್ವದ, ಪ್ರೀತಿಪಾತ್ರ ಆಟಗಾರ ಅನ್ನೋದು ಉಲ್ಲೇಖಾರ್ಹ. ಲೀ ಆದಷ್ಟು ಶ್ರೀಘ್ರ ಗುಣಮುಖರಾಗಲಿ ಎಂದು ಹಾರೈಸೋಣ.

Story first published: Saturday, September 22, 2018, 19:43 [IST]
Other articles published on Sep 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X