ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಎಂಟರ ಘಟ್ಟಕ್ಕೆ ಕಾಲಿಟ್ಟ ಸಿಂಧೂ

Sindhu battles past Blichfeldt to enter Indonesia Open quarters

ಜಕಾರ್ತ, ಜುಲೈ 18: ಸುದೀರ್ಘಾವಧಿಯ ವಿರಾಮದ ಬಳಿಕ ಪ್ರಸಕ್ತ ಸಾಲಿನಲ್ಲಿ ಮೊದಲ ಪ್ರಶಸ್ತಿ ಗೆಲುವಿನ ಹಂಬಲದೊಂದಿಗೆ ಕಣಕ್ಕಿಳಿದಿರುವ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ ಸಿಂಧೂ, ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್ಸ್‌ ತಲುಪಿದ್ದಾರೆ.

ಗೆಲುವಿಗಾಗಿ ತಮ್ಮಲ್ಲಿನ ಅನುಭವವನ್ನೆಲ್ಲಾ ಹೊರತೆಗೆದ 5ನೇ ಶ್ರೇಯಾಂಕಿತೆ ಸಿಂಧೂ, 21-14, 17-21, 21-11 ಅಂತರದ ಗೇಮ್‌ಗಳಿಂದ ಡೆನ್ಮಾರ್ಕ್‌ನ ಆಟಗಾರ್ತಿ ಮಿಯಾ ಬ್ಲಷ್ಫೆಲ್ಡ್‌ ವಿರುದ್ಧ ಪ್ರಯಾಸದ ಜಯ ದಾಖಲಿಸಿ ಅಂತಿಮ ಎಂಟರ ಘಟ್ಟಕ್ಕೆ ಮುನ್ನಡೆದರು.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

ವಿಶ್ವದ 13ನೇ ಶ್ರೇಯಾಂಕಿತ ಆಟಗಾರ್ತಿ ವಿರುದ್ಧ ಸಿಂಧೂ ದಾಖಲಿಸಿದ ಮೂರನೇ ಗೆಲುವು ಇದಾಗಿದೆ. ಇದೀಗ ಸೆಮಿಫೈನಲ್‌ ಅರ್ಹತೆಗಾಗಿ ಮಲೇಷ್ಯಾದ ಸೋನಿಯಾ ಚೆಹ್‌ ಅಥವಾ ಮೂರನೇ ಶ್ರೇಯಾಂಕಿತೆ ಜಪಾನ್‌ನ ನಜೋಮಿ ಓಕುಹರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಮತ್ತೊಂದೆಡೆ ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದ್ದು, ಸಾತ್ವಿಕ್‌ ರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ 15-21, 14-21ರ ಅಂತರದಲ್ಲಿ ಸ್ಥಳೀಯ ಪ್ರತಿಭೆಗಳಾದ ಫೆನಾಲ್ಡಿ ಗಿಡೆಯೊನ್‌ ಮತ್ತು ಕೆವಿನ್‌ ಸಂಜಯ ಸುಖಮುಲ್ಜೊ ವಿರುದ್ಧ ಸೋಲಿಗೆ ಶರಣಾದರು.

Story first published: Thursday, July 18, 2019, 17:34 [IST]
Other articles published on Jul 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X