ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ತನ್ನ ಬದ್ಧ ಎದುರಾಳಿ ವಿರುದ್ಧ ಸೇಡು ತೀರಿಸಿಕೊಂಡ ಸಿಂಧೂ

Sindhu beats Okuhara 21-14, 21-7, to reach Indonesia semis

ಜಕಾರ್ತ, ಜುಲೈ 19: ತಮಗೆ ವಿಶ್ವ ಚಾಂಪಿಯನ್‌ಷಿಪ್‌ ಪ್ರಶಸ್ತಿ ತಪ್ಪಿಸಿದ್ದ ಬದ್ಧ ಎದುರಾಳಿ ಜಪಾನ್‌ನ ಆಟಗಾರ್ತಿ ನಜೋಮಿ ಓಕುಹರ ವಿರುದ್ಧ ಜಯ ದಾಖಲಿಸಿದ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ ಸಿಂಧೂ, ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ಸ್‌ ತಲುಪಿದ್ದಾರೆ.

ವಿಶ್ವದ 5ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧೂ, ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್ಸ್‌ ಪಂದ್ಯದಲ್ಲಿ 21-14, 21-7 ಅಂತರದ ನೇರ ಗೇಮ್‌ಗಳಿಂದ ಸುಲಭವಾಗಿ ಓಕುಹರ ಅವರ ಸವಾಲನ್ನು ಮೆಟ್ಟಿನಿಂತರು. ಕೇವಲ 41 ನಿಮಿಷಗಳಲ್ಲಿ ಪಂದ್ಯ ಗೆದ್ದ ಸಿಂಧೂ, ಜಪಾನ್‌ ಆಟಗಾರ್ತಿಯ ಎದುರು ತಮ್ಮ ಅತ್ಯಂತ ವೇಗದ ಗೆಲುವು ದಕ್ಕಿಸಿಕೊಂಡರು.

ಪ್ರೊ ಕಬಡ್ಡಿ ಸೀಸನ್‌ 7: ಈ ಬಾರಿ ಮಿಂಚಬಲ್ಲ ಟಾಪ್‌ 5 ರೇಡರ್‌ಗಳು ಇವರುಪ್ರೊ ಕಬಡ್ಡಿ ಸೀಸನ್‌ 7: ಈ ಬಾರಿ ಮಿಂಚಬಲ್ಲ ಟಾಪ್‌ 5 ರೇಡರ್‌ಗಳು ಇವರು

ಓಕುಹರ ವಿರುದ್ಧ ಸಿಂಧೂ ಆಡಿದ 15 ನೇ ಪಂದ್ಯ ಇದಾಗಿದೆ. ಈ ಪಂದ್ಯಕ್ಕೂ ಮುನ್ನ 7-7ರ ಮುಖಾಮುಖಿ ದಾಖಲೆ ಹೊಂದಿದ್ದ ಸಿಂಧೂ ಈ ಗೆಲುವಿನೊಂಡಿಗೆ 8-7ರ ಮುನ್ನಡೆ ಪಡೆದುಕೊಂಡಿದ್ದಾರೆ. ಇದಕ್ಕೂ ಹಿಂದಿನ ಪಂದ್ಯದಲ್ಲಿ ಸಿಂಗಾಪುರ ಓಪನ್‌ ಟೂರ್ನಿಯ ಸೆಮಿಫೈನಲ್ಸ್‌ನಲ್ಲಿ ಓಕುಹರ 21-7, 21-11 ಅಂತರದಲ್ಲಿ ಸಿಂಧೂಗೆ ಸೋಲುಣಿಸಿದ್ದರು.

ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌

24 ವರ್ಷದ ಆಟಗಾರ್ತಿ ಸಿಂಧೂ, ಇದೀಗ ಸೆಮಿಫೈನಲ್ಸ್‌ ಹಂತದಲ್ಲಿ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ಚೆನ್‌ ಯೂಫಿ ಎದುರು ಪೈಪೋಟಿ ನಡೆಸಲಿದ್ದಾರೆ. ಚೀನಾದ ಆಟಗಾರ್ತಿ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಅಮೆರಿಕದ ಬಿವೆನ್‌ ಝಾಂಗ್‌ ಅವರನ್ನು 21-14, 17-21, 21-16ರ ಅಂತರದಲ್ಲಿ ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಚೆನ್‌ ಯೂಫಿ ಎದುರು ಸಿಂಧೂ 4-3ರ ಮುಖಾಮುಖಿ ದಾಖಲೆ ಹೊಂದಿದ್ದಾರೆ.

Story first published: Friday, July 19, 2019, 19:50 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X