ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ನಲ್ಲಿ ಹೊರಬಿದ್ದ ಸೈನಾ, ಸಿಂಧು, ಶ್ರೀಕಾಂತ್

Sindhu, Srikanth, Saina crash out in French Open quarters

ಪ್ಯಾರೀಸ್, ಅಕ್ಟೋಬರ್ 27: ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಪಿವಿ ಸಿಂಧು ಮೂವರೂ ಹೊರಬಿದ್ದಿದ್ದಾರೆ. ಇಲ್ಲಿಗೆ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಂತಾಗಿದೆ.

ನ್ಯೂಜಿಲೆಂಡ್‌ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ: ಟೆಸ್ಟ್ ಕ್ರಿಕೆಟ್ ಆಕಾಂಕ್ಷಿಗಳಿಗೆ ಭರ್ಜರಿ ಅವಕಾಶನ್ಯೂಜಿಲೆಂಡ್‌ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ: ಟೆಸ್ಟ್ ಕ್ರಿಕೆಟ್ ಆಕಾಂಕ್ಷಿಗಳಿಗೆ ಭರ್ಜರಿ ಅವಕಾಶ

ಶುಕ್ರವಾರ (ಅಕ್ಟೋಬರ್ 26) ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಮೂರೂ ಭರವಸೆಯ ಆಟಗಾರರೂ ನಿರಾಸೆ ಮೂಡಿಸಿದರು. ಮೊದಲ ಪಂದ್ಯದಲ್ಲಿ ಸೈನಾ ನೆಹ್ವಾಲ್, ಚೈನೀಸ್ ತೈಪೆಯ ತೈ ಝು ಯಿಂಗ್ ವಿರುದ್ಧ 20-22, 11-21 ನೇರ ಸೆಟ್ ಸೋಲನುಭವಿಸಿದರು.

ಅನಂತರ ನಡೆದ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಶ್ರೀಕಾಂತ್ ಅವರು ಜಪಾನ್ ಆಟಗಾರ ಕೆಂಟೊ ಮೊಮೊಟಾ 16-21, 19-21 ಅಂತರದಿಂದ ಸೋತರು. ಸಿಂಗಲ್ಸ್ ವಿಭಾಗದಲ್ಲಿನ ಕೊನೆಯ ಭರವಸೆ ಸಿಂಧು ಕೂಡ ಹಿನ್ನಡೆ ಅನುಭವಿಸಿದರು. ಸಿಂಧು, ಚೀನಾ ಆಟಗಾರ್ತಿ ಹಿ ಬಿಂಗ್ಜಿಯಾವೊ ಎದುರು 13-21, 16-21 ಅಂತರದಿಂದ ಶರಣಾದರು.

ವಿಂಡೀಸ್ ವಿರುದ್ಧದ ಕೊನೆಯ ಎರಡು ಪಂದ್ಯ: ಕೇದಾರ್ ಜಾಧವ್‌ಗೆ ಬುಲಾವ್ವಿಂಡೀಸ್ ವಿರುದ್ಧದ ಕೊನೆಯ ಎರಡು ಪಂದ್ಯ: ಕೇದಾರ್ ಜಾಧವ್‌ಗೆ ಬುಲಾವ್

ಸಿಂಗಲ್ಸ್ ವಿಭಾಗದಲ್ಲಿ ಮೂರೂ ಆಟಗಾರರ ನೇರ ಸೆಟ್ ಹಿನ್ನಡೆ ಅನುಭವಿಸಿದ್ದು, ಬೇಸರ ಮೂಡಿಸಿತು. ಮೊದಲ ಸೆಟ್ ನಲ್ಲಿ ಮುನ್ನಡೆ ಸಾಧಿಸಿದ್ದ ಸೈನಾ ಅಂತಿಮ ಕ್ಷಣದಲ್ಲಿ ಎದುರಾಳಿಗೆ ಅಂಕ ನೀಡಿ ಗೆಲ್ಲುವ ಸೆಟ್ಟನ್ನು ಕೈ ಚೆಲ್ಲಿದ್ದರು. ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯ್‌ರಾಜ್ ರಾಮ್‌ಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ ಗೆ ಪ್ರವೇಶಿಸಿದೆ. ಸದ್ಯಕ್ಕೆ ಫ್ರೆಂಚ್ ಓಪನ್ ನಲ್ಲಿ ಇದೊಂದೆ ಭಾರತಕ್ಕೆ ನಿಟ್ಟುಸಿರಿನ ಸಂಗತಿ.

Story first published: Saturday, October 27, 2018, 15:25 [IST]
Other articles published on Oct 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X