ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೌತ್ ಏಷ್ಯನ್ ಗೇಮ್ಸ್: ಭಾರತದ ಬ್ಯಾಡ್ಮಿಂಟನ್ ತಂಡಗಳಿಗೆ ಡಬಲ್ ಚಿನ್ನ

South Asian Games: Indian mens, womens badminton teams win gold medals

ಪೋಖರಾ, ಡಿಸೆಂಬರ್ 4: ನೇಪಾಳದ ಪೋಖರಾದಲ್ಲಿ ನಡೆದ 13ನೇ ಸೌತ್ ಏಷ್ಯನ್ ಗೇಮ್ಸ್‌ (ಎಸ್‌ಎಜಿ) ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಚಿನ್ನದ ಪದಕ ಗೆದ್ದಿದೆ. ಎರಡೂ ವಿಭಾಗದ ಫೈನಲ್‌ನಲ್ಲಿ ಭಾರತ, ಶ್ರೀಲಂಕಾವನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದೆ.

ಸರಣಿಗೂ ಮುನ್ನವೇ ಪೊಲಾರ್ಡ್ ವಿರುದ್ಧ ಸೇಡು ತೀರಿಸಿಕೊಂಡ ರೋಹಿತ್ ಶರ್ಮಾ!:ವೀಡಿಯೋಸರಣಿಗೂ ಮುನ್ನವೇ ಪೊಲಾರ್ಡ್ ವಿರುದ್ಧ ಸೇಡು ತೀರಿಸಿಕೊಂಡ ರೋಹಿತ್ ಶರ್ಮಾ!:ವೀಡಿಯೋ

ಫೈನಲ್‌ನಲ್ಲಿ ಕಿದಂಬಿ ಶ್ರೀಕಾಂತ್ ನಾಯಕತ್ವದ ಭಾರತದ ಪುರುಷರ ತಂಡ, ಎದುರಾಳಿ ಶ್ರೀಲಂಕಾವನ್ನು 3-1ರಿಂದ ಹಿಮ್ಮೆಟ್ಟಿಸಿದರೆ, ಭಾರತದ ಮಹಿಳೆಯರ ತಂಡ ಶ್ರೀಲಂಕಾವನ್ನೇ 3-0ಯಿಂದ ಸೋಲಿಸಿ ಚಾಂಪಿಯನ್ ಆಗಿ ಮಿನುಗಿತು.

ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?

ಪುರುಷರ ವಿಭಾಗದ ಆರಂಭಿಕ ಪಂದ್ಯದಲ್ಲಿ ಶ್ರೀಕಾಂತ್, ದಿನುಕ ಕರುಣರತ್ನೆ ವಿರುದ್ಧ 17-21, 21-15, 21-11ರ ಜಯ ದಾಖಲಿಸಿದರು. ಸಚಿನ್ ಪ್ರೇಮಸನ್ ಗಾಯಾಳಾಗಿ 21-17, 11-5ರ ವೇಳೆಗೆ ನಿರ್ಗಮಿಸಿದ್ದರಿಂದ ಸಿರಿಲ್ ವರ್ಮಾ ಭಾರತಕ್ಕೆ 2-0ಯ ಮುನ್ನಡೆ ಕೊಟ್ಟರು.

ಅಂಡರ್-19: ಹಾಲು ಮಾರಿ ಕ್ರಿಕೆಟಿಗನನ್ನಾಗಿಸಿದ ತಂದೆಗೆ ನಾಯಕತ್ವದ ಗಿಫ್ಟ್!ಅಂಡರ್-19: ಹಾಲು ಮಾರಿ ಕ್ರಿಕೆಟಿಗನನ್ನಾಗಿಸಿದ ತಂದೆಗೆ ನಾಯಕತ್ವದ ಗಿಫ್ಟ್!

ಆದರೆ ಅರುಣ್ ಜಾರ್ಜ್ ಮತ್ತು ಸಂಯಮ್ ಶುಕ್ಲಾ ಜೋಡಿ, ಶ್ರೀಲಂಕಾ ಆಟಗಾರರಾದ ಸಚಿನ್ ಮತ್ತು ಬಿ ತಾರಿಂದು ಗುಣತಿಲಕೆ ಎದುರು 18-21, 21-14, 11-21ರ ಹಿನ್ನಡೆ ಅನುಭವಿಸಿದ್ದರಿಂದ ಲಂಕಾಕ್ಕೆ 1 ಅಂಕ ಲಭಿಸಿತು. ಇನ್ನು ಕೃಷ್ಣ ಪ್ರಸಾದ್ ಮತ್ತು ಧೃವ್ ಕಪಿಲ್ ಜೋಡಿ, ಕರುಣರತ್ನೆ-ಹಸಿತ ಚನಕ ಎದುರು 21-14, 21-18ರ ಜಯ ದಾಖಲಿಸಿ ಭಾರತಕ್ಕೆ 3-1ರ ಗೆಲುವು ತಂದಿತು.

Story first published: Wednesday, December 4, 2019, 18:58 [IST]
Other articles published on Dec 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X