ಥಾಯ್ಲೆಂಡ್ ಓಪನ್: ಕ್ವಾರ್ಟರ್-ಫೈನಲ್‌ಗೆ ಲಗ್ಗೆಯಿಟ್ಟ ಪಿವಿ ಸಿಂಧು; ದಿಢೀರ್ ನಿರ್ಗಮಿಸಿದ ಕಿಡಂಬಿ ಶ್ರೀಕಾಂತ್

ಗುರುವಾರ ಬ್ಯಾಂಕಾಕ್‌ನಲ್ಲಿ ನಡೆದ ಥಾಯ್ಲೆಂಡ್ ಓಪನ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ, ಭಾರತೀಯ ಆಟಗಾರ್ತಿ ಪಿವಿ ಸಿಂಧು ದಕ್ಷಿಣ ಕೊರಿಯಾದ ಯು ಜಿನ್ ಸಿಮ್ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು.

ಸಿಹಿಸುದ್ದಿ; ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 100% ಆಸನ ಭರ್ತಿಗೆ BCCI ಅನುಮತಿ!ಸಿಹಿಸುದ್ದಿ; ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 100% ಆಸನ ಭರ್ತಿಗೆ BCCI ಅನುಮತಿ!

ಆರನೇ ಶ್ರೇಯಾಂಕದ ಪಿವಿ ಸಿಂಧು ಆರಂಭಿಕ ಗೇಮ್ ಅನ್ನು 21-16 ರಿಂದ ಗೆದ್ದರು. ಅಲ್ಲಿ ದಕ್ಷಿಣ ಕೊರಿಯಾದ ಆಟಗಾರ್ತಿ ಹೋರಾಟ ನಡೆಸಿದರು. ಆದರೆ ಎರಡನೇ ಗೇಮ್‌ನಲ್ಲಿ ಸಿಂಧು ಪ್ರಾಬಲ್ಯ ಸಾಧಿಸಿದರು ಮತ್ತು 37 ನಿಮಿಷಗಳ ಕಾಲ ನಡೆದ ಪಂದ್ಯವನ್ನು 21-16 ರಿಂದ 21-13 ಅಂತರದ ಆರಾಮದಾಯಕ ಗೆಲುವು ಸಾಧಿಸಿದರು.

ಈ ಗೆಲುವಿನೊಂದಿಗೆ ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಎರಡನೇ ಶ್ರೇಯಾಂಕದ ಜಪಾನಿನ ಷಟ್ಲರ್ ಅಕಾನೆ ಯಮಗುಚಿ ಅವರೊಂದಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಹಣಾಹಣಿ ನಡೆಸಲಿದ್ದಾರೆ.

ಇದಕ್ಕೂ ಮೊದಲು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಷಟ್ಲರ್ ಮಾಳವಿಕಾ ಬನ್ಸೋಡ್ ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ 16-21, 21-14, 21-14 ಅಂತರದಲ್ಲಿ ಸೋಲನುಭವಿಸಿದರು.

ವಾಕ್ ಓವರ್ ನೀಡಿ ನಿರ್ಗಮಿಸಿದ ಕಿಡಂಬಿ ಶ್ರೀಕಾಂತ್

ಅಲ್ಲದೆ, ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಎದುರಾಳಿಗೆ ವಾಕ್ ಓವರ್ ನೀಡುವ ಮೂಲಕ ಥಾಯ್ಲೆಂಡ್ ಓಪನ್‌ನಿಂದ ದಿಢೀರ್ ನಿರ್ಗಮಿಸಿದ್ದಾರೆ. ಎಂಟನೇ ಶ್ರೇಯಾಂಕದ ಶ್ರೀಕಾಂತ್ ತಮ್ಮ ಐರಿಶ್ ಪ್ರತಿಸ್ಪರ್ಧಿ ನಾಟ್ ನ್ಗುಯೆನ್‌ಗೆ ವಾಕ್‌ಓವರ್ ನೀಡಿದರು. ಅವರ ವಾಪಸಾತಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ವಿಶ್ವ ನಂ. 11ನೇ ಶ್ರೇಯಾಂಕದ ಭಾರತೀಯ ಆಟಗಾರನು ತನ್ನ ಆರಂಭಿಕ ಸುತ್ತಿನ ಪಂದ್ಯದಲ್ಲಿ 18-21 21-10 21-16 ರಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವೆರ್ಡೆಜ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದರು.

For Quick Alerts
ALLOW NOTIFICATIONS
For Daily Alerts
Story first published: Thursday, May 19, 2022, 20:22 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X