ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಥಾಮಸ್ ಕಪ್: ಚಿನ್ನ ಗೆದ್ದು ಐತಿಹಾಸಿಕ ದಾಖಲೆ ಬರೆದ ಭಾರತದ ಆಟಗಾರರಿಗೆ ಸಿಕ್ಕ ಹಣವೆಷ್ಟು?

Thomas Cup 2022: Full list of award winners and prize money details in kannada

ಬ್ಯಾಂಕಾಕ್ ನಲ್ಲಿ ನಡೆದ ಪ್ರತಿಷ್ಠಿತ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ಫೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

DC vs PBKS: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?DC vs PBKS: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?

ಹೌದು, ಇಂದು ( ಮೇ 15 ) ನಡೆದ ಥಾಮಸ್ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಹಾಗೂ ಇಂಡೋನೇಷ್ಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ 14 ಬಾರಿ ಥಾಮಸ್ ಕಪ್ ಗೆದ್ದಿರುವ ಬಲಿಷ್ಠ ಇಂಡೋನೇಷ್ಯಾ ತಂಡದ ವಿರುದ್ಧ 3-0 ಅಂತರದ ಗೆಲುವನ್ನು ಸಾಧಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತ ತಂಡ ಥಾಮಸ್ ಕಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಐತಿಹಾಸಿಕ ದಾಖಲೆಯನ್ನು ಬರೆದಿದೆ.

ಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳ ಸುರಿಮಳೆಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳ ಸುರಿಮಳೆ

ಮೊದಲ ಪಂದ್ಯದಲ್ಲಿ ವಿಶ್ವದ ಒಂಬತ್ತನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರು ವಿಶ್ವದ ನಾಲ್ಕನೇ ಶ್ರೇಯಾಂಕದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಸೆಣಸಿದರು. 65 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 8-21, 21-17, 21-16 ಗೆಲುವಿನೊಂದಿಗೆ 1-0 ಮುನ್ನಡೆ ಸಾಧಿಸಿದ ಭಾರತದ ಪರ ಎರಡನೇ ಸುತ್ತಿನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಕಣಕ್ಕಿಳಿದು ಗೆಲುವನ್ನು ಸಾಧಿಸಿ ಮುನ್ನಡೆಯನ್ನು 2-0ಕ್ಕೆ ತಂದಿಟ್ಟರು. ಇನ್ನು ಮೂರನೇ ಪಂದ್ಯದಲ್ಲಿ ಕಣಕ್ಕಿಳಿದ ಕಿಡಂಬಿ ಶ್ರೀಕಾಂತ್ ಕೂಡ ಎದುರಾಳಿ ಆಟಗಾರನಿಗೆ ಸೋಲುಣಿಸಿ ತಂಡಕ್ಕೆ ಗೆಲುವನ್ನು ತಂಡಿಟ್ಟರು. ಈ ಮೂಲಕ ಮೊದಲ ಮೂರು ಪಂದ್ಯಗಳ ಪೈಕಿ ಯಾವುದೇ ಪಂದ್ಯದಲ್ಲಿಯೂ ಸೋಲದ ಭಾರತ 3-0 ಅಂತರದ ಭರ್ಜರಿ ಜಯವನ್ನು ಸಾಧಿಸಿತು. ಇನ್ನು ಈ ಗೆಲುವಿನ ಮೂಲಕ ಐತಿಹಾಸಿಕ ದಾಖಲೆ ಬರೆದ ಭಾರತದ ಬ್ಯಾಡ್ಮಿಂಟನ್ ತಂಡದ ಆಟಗಾರರಿಗೆ ಚಿನ್ನದ ಪದಕದ ಜೊತೆ ನಗದು ಬಹುಮಾನಗಳೂ ಸಹ ಲಭಿಸಿದ್ದು, ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ಗೆದ್ದ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ

ಗೆದ್ದ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತ

ಇನ್ನು ಥಾಮಸ್ ಕಪ್‌ನಲ್ಲಿ ಗೆದ್ದ ಭಾರತ ತಂಡದ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಎಲ್ಲಾ ಆಟಗಾರರಿಗೆ ತಲಾ 120000 ಡಾಲರ್ ಬಹುಮಾನ ಸಿಗಲಿದೆ. ಇನ್ನು ಇದರ ಜೊತೆಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಒಂದು ಕೋಟಿಗೆ ಬಹುಮಾನ ಧನವನ್ನು ಘೋಷಿಸಿದ್ದರೆ, ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹಿಮಾಂತ ಬಿಸ್ವಾ ಶರ್ಮಾ ಕೂಡ ಬ್ಯಾಡ್ಮಿಂಟನ್ ತಂಡದ ಆಟಗಾರರಿಗೆ ಒಂದು ಕೋಟಿ ಬಹುಮಾನ ಹಾಗೂ ಸಿಬ್ಬಂದಿ ವರ್ಗದವರಿಗೆ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಘೋಷಿಸಿದ್ದಾರೆ.

ಥಾಮಸ್ ಕಫ್‌ನಲ್ಲಿ ಪದಕ ಗೆದ್ದವರ ಪಟ್ಟಿ

ಥಾಮಸ್ ಕಫ್‌ನಲ್ಲಿ ಪದಕ ಗೆದ್ದವರ ಪಟ್ಟಿ

ಈ ಬಾರಿಯ ಥಾಮಸ್ ಕಪ್‌ನಲ್ಲಿ ಚಾಂಪಿಯನ್ ಆದ ಭಾರತ ಬ್ಯಾಡ್ಮಿಂಟನ್ ತಂಡ ಚಿನ್ನದ ಪದಕ ಗೆದ್ದರೆ, ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲುಂಡು ರನ್ನರ್ ಅಪ್ ಆಗಿ ಹೊರಹೊಮ್ಮಿದ ಇಂಡೋನೇಷ್ಯಾ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು ಹಾಗೂ ಜಪಾನ್ ಹಾಗೂ ಡೆನ್ಮಾರ್ಕ್ ಕಂಚಿನ ಪದಕಗಳನ್ನು ಪಡೆದುಕೊಂಡವು.

ಥಾಮಸ್ ಕಪ್ ಗೆದ್ದ ಎಲ್ಲಾ ತಂಡಗಳ ಪಟ್ಟಿ

ಥಾಮಸ್ ಕಪ್ ಗೆದ್ದ ಎಲ್ಲಾ ತಂಡಗಳ ಪಟ್ಟಿ

1. ಇಂಡೋನೇಷ್ಯಾ - 14 ಪ್ರಶಸ್ತಿಗಳು
2. ಚೀನಾ - 10 ಪ್ರಶಸ್ತಿಗಳು
3. ಮಲೇಷ್ಯಾ - 5 ಪ್ರಶಸ್ತಿಗಳು
4. ಜಪಾನ್ - 1 ಪ್ರಶಸ್ತಿ (2014)
5. ಡೆನ್ಮಾರ್ಕ್ - 1 ಪ್ರಶಸ್ತಿ (2016)
6. ಭಾರತ - 1 ಪ್ರಶಸ್ತಿ (2022)

Story first published: Monday, May 16, 2022, 9:04 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X