ಥಾಮಸ್ ಕಪ್: ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟು ಐತಿಹಾಸಿಕ ದಾಖಲೆ ಬರೆದ ಆಟಗಾರರ ಬಗ್ಗೆ ತಿಳಿಯಿರಿ

ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ( ಮೇ 15 ) ನಡೆದಿದ್ದು, ಈ ಪಂದ್ಯದಲ್ಲಿ 14 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಬಲಿಷ್ಟ ಇಂಡೋನೇಷ್ಯಾಗೆ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಸೋಲನ್ನು ಉಣಿಸಿದೆ. ಈ ಮೂಲಕ ಭಾರತ ಇದೇ ಮೊದಲ ಬಾರಿಗೆ ಥಾಮಸ್ ಕಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಇತಿಹಾಸ ಬರೆದಿದೆ. ಐದು ಸುತ್ತುಗಳ ಟೈ ಪಂದ್ಯದಲ್ಲಿ ಮೂರೇ ಸುತ್ತಿಗೆ ಪಂದ್ಯವನ್ನು ಮುಗಿಸಿದ ಭಾರತ 3-0 ಅಂತರದಿಂದ ಜಯ ಸಾಧಿಸಿದೆ.

ಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳ ಸುರಿಮಳೆಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳ ಸುರಿಮಳೆ

ಇನ್ನು ಥಾಮಸ್ ಕಪ್ ಇತಿಹಾಸದಲ್ಲಿ ಇಲ್ಲಿಯವರೆಗೂ ಮೂರು ಬಾರಿ ಕಂಚಿನ ಪದಕಗಳನ್ನು ಗೆದ್ದಿದ್ದು ಬಿಟ್ಟರೆ ಭಾರತ ಅದಕ್ಕಿಂತ ಉತ್ತಮ ಹಂತವನ್ನು ತಲುಪಿರಲಿಲ್ಲ. ಆದರೆ, ಈ ಬಾರಿಯ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು 3-2ರಿಂದ ಸೋಲಿಸಿ ರಜತ ಪದಕವನ್ನು ಖಚಿತಪಡಿಸಿಕೊಂಡಿದ್ದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಇದೀಗ ಫೈನಲ್‌ನಲ್ಲೂ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

ಇನ್ನು ಈ ದಾಖಲೆ ಮೂಲಕ ದೇಶಕ್ಕೆ ಹೆಮ್ಮೆ ತಂದಿರುವ ಈ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡದಲ್ಲಿದ್ದ ಆಟಗಾರರ ಕುರಿತ ಕಿರು ಪರಿಚಯ ಈ ಕೆಳಕಂಡಂತಿದೆ ಓದಿ..

ಲಕ್ಷ್ಯ ಸೇನ್

ಲಕ್ಷ್ಯ ಸೇನ್

ಈ ತಂಡದ ಸಿಂಗಲ್ ವಿಭಾಗದ ಆಟಗಾರನಾಗಿರುವ ಲಕ್ಷ್ಯ ಸೇನ್ ಉತ್ತರಾಖಂಡದ ಅಲ್ಮೋರಾದವರಾಗಿದ್ದಾರೆ. ಇವರ ತಂದೆ ಡಿಕೆ ಸೇನ್ ಕೋಚ್ ಆಗಿದ್ದು, ಸಹೋದರ ಚಿರಾಗ್ ಸೇನ್ ಕೂಡ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರನಾಗಿದ್ದಾರೆ. 2001ರ ಆಗಸ್ಟ್ 16ರಂದು ಜನಿಸಿದ ಇವರು 2016ರಿಂದ ಬ್ಯಾಡ್ಮಿಂಟನ್ ಕೆರಿಯರ್ ಆರಂಭಿಸಿದ್ದು, ಮಾಜಿ ಜೂನಿಯರ್ ನಂಬರ್ ಒನ್ ಆಗಿದ್ದಾರೆ. 2018ರ ಏಷಿಯನ್ ಜೂನಿಯರ್ ಚಾಂಪಿಯನ್‌ಶಿಪ್‌ ಹುಡುಗರ ವಿಭಾಗದಲ್ಲಿ ಹಾಗೂ ಸಮ್ಮರ್ ಯೂರ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಲಕ್ಷ್ಯ ಸೇನ್ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಹಾಗೂ 2022ರ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಇದೀಗ ಥಾಮಸ್ ಕಪ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿರುವುದು ಲಕ್ಷ್ಯ ಸೇನ್ ಸಾಧನೆಗೆ ಮತ್ತೊಂದು ದೊಡ್ಡ ಸೇರ್ಪಡೆಯಾಗಿದೆ.

ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

ಆಗಸ್ಟ್ 13ರ 2000ದಲ್ಲಿ ಆಂಧ್ರಪ್ರದೇಶದ ಅಮಲಾಪುರಂನಲ್ಲಿ ಜನಿಸಿದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಅವರ ತಂದೆ ಮತ್ತು ಸಹೋದರ ಕೂಡ ಮಾಜಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರನಾಗಿದ್ದರು. ಇನ್ನು ಚಿರಾಗ್ ಶೆಟ್ಟಿ 1997 ಜುಲೈ 4ರಂದು ಜನಿಸಿದ್ದಯ ಮುಂಬೈ ಮೂಲದವರಾಗಿದ್ದಾರೆ. ಹೆಚ್ಚಾಗಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಜೋಡಿಯಾಗಿ ಡಬಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಣಕ್ಕಿಳಿದಿದ್ದು ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ಏಳನೇ ಸ್ಥಾನವನ್ನೂ ಸಹ ಪಡೆದುಕೊಂಡ ಉತ್ತಮ ಸಾಧನೆ ಮಾಡಿದ್ದರು. 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಮಿಕ್ಸೆಡ್ ಈವೆಂಟ್‌ನಲ್ಲಿ ಚಿನ್ನ ಗೆದ್ದಿದ್ದ ಈ ಜೋಡಿ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಪದಕವನ್ನೂ ಸಹ ಗೆದ್ದಿದ್ದರು. ಇನ್ನು 2019ರಲ್ಲಿ ನಡೆದಿದ್ದ ಬಿಡಬ್ಲ್ಯೂಎಫ್ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ದಾಖಲೆ ಬರೆದಿದ್ದ ಈ ಜೋಡಿ, ಅದೇ ವರ್ಷ ನಡೆದಿದ್ದ ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಆಗಿಯೂ ಸಹ ಹೊರಹೊಮ್ಮಿತ್ತು. ಇದೀಗ ಈ ಜೋಡಿ ಥಾಮಸ್ ಕಪ್ ಗೆದ್ದಿರುವುದು ಇವರ ವೃತ್ತಿ ಜೀವನದ ಶ್ರೇಷ್ಟ ಸಾಧನೆಯಾಗಿದೆ.

ಶ್ರೀಕಾಂತ್ ಕಿಡಂಬಿ

ಶ್ರೀಕಾಂತ್ ಕಿಡಂಬಿ

1993ರ ಫೆಬ್ರವರಿ 7ರಂದು ಆಂಧ್ರಪ್ರದೇಶದ ರಾವುಲಾಪಾಲೆಮ್‌ನಲ್ಲಿ ಜನಿಸಿರುವ ಶ್ರೀಕಾಂತ್ ಕಿಡಂಬಿ 2011ರಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ನ ಡಬಲ್ಸ್ ವಿಭಾಗದಲ್ಲಿ ಕಂಚು ಹಾಗೂ ಮಿಕ್ಸೆಡ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಅದೇ ವರ್ಷ ಪುಣೆಯಲ್ಲಿ ನಡೆದಿದ್ದ ಆಲ್ ಇಂಡಿಯಾ ಜೂನಿಯರ್ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇನ್ನುಳಿದಂತೆ ಶ್ರೀಕಾಂತ್ ಕಿಡಂಬಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌, ಕಾಮನ್‌ವೆಲ್ತ್, ಸೌತ್ ಏಷ್ಯನ್ ಗೇಮ್ಸ್, ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ( ಒಂದು ರನ್ನರ್ ಅಪ್ ), ಬಿಡಬ್ಲ್ಯೂಎಫ್ ಸೂಪರ್‌ಸೀರಿಸ್ ( 6 ಟೈಟಲ್, ಒಮ್ಮೆ ರನ್ನರ್ ಅಪ್ ), ಬಿಡಬ್ಲ್ಯೂಎಫ್ ಗ್ರ್ಯಾಂಡ್ ಪಿಕ್ಸ್ ( 3 ಟೈಟಲ್ಸ್ ಮತ್ತು 3 ರನ್ನರ್ ಅಪ್), ಬಿಡಬ್ಲ್ಯೂಎಫ್ ಇಂಟರ್‌ನ್ಯಾಷನಲ್ ಚಾಲೆಂಜ್/ಸಿರೀಸ್ ( ಒಂದು ಟೈಟಲ್ ) ಗೆದ್ದ ಬೃಹತ್ ಸಾಧನೆ ಮಾಡಿದ್ದಾರೆ. ಹಾಗೂ ಇದೀಗ ಥಾಮಸ್ ಕಪ್ ಗೆದ್ದಿರುವುದು ಇವರ ವೃತ್ತಿ ಜೀವನದ ಶ್ರೇಷ್ಠ ಸಾಧನೆಯಾಗಿದೆ.

ಎಂಆರ್ ಅರ್ಜುನ್ ಮತ್ತು ಧೃವ್ ಕಪಿಲಾ

ಎಂಆರ್ ಅರ್ಜುನ್ ಮತ್ತು ಧೃವ್ ಕಪಿಲಾ

1997 ಮೇ 11ರಂದು ಜನಿಸಿದ್ದ ಎಂಆರ್ ಅರ್ಜುನ್ 2020ರ ಏಷಿಯನ್ ಟೀಮ್ ಚಾಂಪಿಯನ್‌ಶಿಪ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಭಾರತ ಪುರುಷರ ತಂಡದ ಭಾಗವಾಗಿದ್ದ ಇವರು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್‌ನಲ್ಲಿ ರನ್ನರ್ ಅಪ್ ಹಾಗೂ ಬಿಡಬ್ಲ್ಯೂಎಫ್ ಇಂಟರ್‌ನ್ಯಾಷನಲ್ ಚಾಲೆಂಜ್/ಸಿರೀಸ್‌ನಲ್ಲಿ ಎಂಟು ಟೈಟಲ್ ಹಾಗೂ ಐದು ಬಾರಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಸಾಧನೆ ಮಾಡಿದ್ದಾರೆ.

2020ರ ಫೆಬ್ರವರಿ 1ರಂದು ಜನಿಸಿದ ಧೃವ್ ಕಪಿಲಾ 2019ರ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಡಬಲ್ಸ್, ಮಿಕ್ಸೆಡ್ ಡಬಲ್ಸ್ ಮತ್ತು ಟೀಮ್ ಈವೆಂಟ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು ಹಾಗೂ ಬಿಡಬ್ಲ್ಯೂಎಫ್ ಇಂಟರ್‌ನ್ಯಾಷನಲ್ ಚಾಲೆಂಜ್/ಸಿರೀಸ್‌ನಲ್ಲಿ ಒಂದು ಟೈಟಲ್ ಹಾಗೂ ಮೂರು ಬಾರಿ ರನ್ನರ್ ಅಪ್ ಆಗಿದ್ದರು. ಈ ಇಬ್ಬರ ಜೋಡಿ ಇದೀಗ ಥಾಮಸ್ ಕಪ್ ಗೆದ್ದ ಬೃಹತ್‌ ಸಾಧನೆ ಬರೆದಿದೆ.

ಹೆಚ್ ಎಸ್ ಪ್ರಣೋಯ್

ಹೆಚ್ ಎಸ್ ಪ್ರಣೋಯ್

29 ವರ್ಷದ ಹೆಚ್ ಎಸ್ ಪ್ರಣೋಯ್ ಹಸೀನಾ ಸುಶೀಲ್ ಕುಮಾರ್ ಮೂಲತಃ ತಿರುವನಂತಪುರಂನವರು. ವಿಶ್ವ ಶ್ರೇಯಾಂಕದಲ್ಲಿ ಎಂಟನೇ ಶ್ರೇಯಾಂಕ ತಲುಪಿದ್ದ ಸಾಧನೆ ಮಾಡಿದ್ದಾರೆ. ಇವರು ಏಷಿಯನ್ ಚಾಂಪಿಯನ್‌ಶಿಪ್, ಸೌತ್ ಏಷಿಯನ್ ಗೇಮ್ಸ್, ಯೂತ್ ಒಲಿಂಪಿಕ್ ಗೇಮ್ಸ್, ಬಿಡಬ್ಲ್ಯೂಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್, ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ( ಒಂದು ರನ್ನರ್ ಅಪ್ ), ಬಿಡಬ್ಲ್ಯೂಎಫ್ ಗ್ಯಾಂಡ್ ಪಿಕ್ಸ್ ( ಮೂರು ಟೈಟಲ್, ಒಂದು ರನ್ನರ್ ಅಪ್), ಬಿಡಬ್ಲ್ಯೂಎಫ್ ಇಂಟರ್‌ನ್ಯಾಷನಲ್ ಚಾಲೆಂಜ್/ಸಿರೀಸ್ ( ಒಂದು ಟೈಟಲ್, ಎರಡು ರನ್ನರ್ ಅಪ್ ) ಸಾಧನೆ ಮಾಡಿದ್ದಾರೆ. ಇನ್ನು ಇದೀಗ ಥಾಮಸ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 15, 2022, 18:55 [IST]
Other articles published on May 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X