ಥಾಮಸ್ ಕಪ್: ಸೆಮಿಫೈನಲ್‌ನಲ್ಲಿ ಬಲಿಷ್ಠ ಡೆನ್ಮಾರ್ಕ್ ಮಣಿಸಿದ ಭಾರತ: ಫೈನಲ್‌ನಲ್ಲಿ ಇಂಡೋನೇಷ್ಯಾ ಸವಾಲು

ಥಾಮಸ್ ಕಪ್‌ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಇದೇ ಮೊದಲ ಬಾರಿಗೆ ಥಾಮಸ್ ಕಪ್‌ನಲ್ಲಿ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದೆ. ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸುವ ಮೂಲಕ ಇತಿಹಾಸವನ್ನು ಬರೆದಿದೆ. ಫೈನಲ್‌ನಲ್ಲಿ ಭಾರತ ತಂಡಕ್ಕೆ ಇಂಡೋನೇಷ್ಯಾ ಸವಾಲೊಡ್ಡಲಿದೆ.

ಭಾರತ 1979ರ ನಂತರ ಥಾಮಸ್ ಕಪ್‌ನ ಸೆಮಿ ಫೈನಲ್ ಹಂತಕ್ಕೇರಲು ವಿಫಲವಾಗಿತ್ತು. ಈ ಬಾರಿ ಅನ್ನು ಮೀರಿದ ಸಾಧನೆ ಭಾರತ ಮಾಡುವಲ್ಲಿ ಯಶಸ್ವಿಯಾಗಿದೆ. 2016ರ ಚಾಂಪಿಯನ್ ತಂಡ ಡೆನ್ಮಾರ್ಕ್ ವಿರುದ್ಧ ಭಾರತ ಪ್ರಚಂಡ ಗೆಲುವು ದಾಖಲಿಸಲು ಯಶಸ್ವಿಯಾಯಿತು.

IPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾIPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾ

ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8 ನೇ ಶ್ರೇಯಾಂಕದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆಲುವಿನ ಮೂಲಕ ಸ್ಪರ್ಧೆಯಲ್ಲಿ ಮುಂದುವರಿಯುವಂತೆ ಮಾಡಿದ್ದರು. 2-2 ಅಂತರದಿಂದ ಹಣಾಹಣಿ ಸಮಬಲಗೊಂಡಿದ್ದಾಗ ಮತ್ತೊಮ್ಮೆ ಪ್ರಣಯ್ ಪಾತ್ರ ನಿರ್ಣಾಯಕವಾಗಿತ್ತು. ವಿಶ್ವದ 13 ನೇ ಶ್ರೇಯಾಂಕದ ರಾಸ್ಮಸ್ ಗೆಮ್ಕೆ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ಕಣಕ್ಕಿಳಿದ ಪ್ರಣಯ್ ಈ ಪಂದ್ಯದಲ್ಲಿ ಪಾದದ ಗಾಯಕ್ಕೆ ತುತ್ತಾದರು. ನಂತರ ಚಿಕಿತ್ಸೆ ಪಡೆದು ಆಟವನ್ನು ಮುಂದುವರಿಸಿದ ಪ್ರಣಯ್ ಭಾರತಕ್ಕೆ ಗೆಲುವನ್ನು ತಂದಿತ್ತರು. 13-21 21-9 21-12 ಅಂತರದಿಂದ ರಾಸ್ಮಸ್ ಗೆಮ್ಕೆ ವಿರುದ್ಧ ಪ್ರಣಯ್ ಗೆಲುವು ಸಾಧಿಸಿ 3-2 ಅಂತರದಿಂದ ಗೆಲುವು ಸಾಧಿಸಿ ಫೈನಲ್ ಹಂತಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಪಂದ್ಯದ ಬಳಿಕ ಮಾತನಾಡಿದ ಪ್ರಣಯ್ "ನನ್ನ ತಲೆಯಲ್ಲಿ ಬಹಳಷ್ಟು ಸಂಗತಿಗಳು ಓಡಾಡುತ್ತಿತ್ತು. ಅದರಲ್ಲೂ ಪಾದ ಉಳುಕಿದ ಸಾಮಾನ್ಯಕ್ಕಿಂತ ಹೆಚ್ಚು ನೋಯುತ್ತಿತ್ತು. ಹೀಗಾಗಿ ಸ್ವಲ್ಪ ಹಿನ್ನಡೆಯಾಯಿತು. ಈ ಸಂದರ್ಭದಲ್ಲಿ ನಾನು ಏನು ಮಾಡಬೇಕೆಂದು ಯೋಚಿಸುತ್ತಿದ್ದೆ" ಎಂದು ಪಂದ್ಯದ ನಂತರ ಹೇಳಿದ್ದಾರೆ.

ಟೀಮ್ ಇಂಡಿಯಾಗಿದು ಕಹಿ ಸುದ್ದಿ: ಕಳವಳ ಮೂಡಿಸಿದೆ ಈ 5 ಸ್ಟಾರ್ ಆಟಗಾರರ ಐಪಿಎಲ್ ಫಾರ್ಮ್!ಟೀಮ್ ಇಂಡಿಯಾಗಿದು ಕಹಿ ಸುದ್ದಿ: ಕಳವಳ ಮೂಡಿಸಿದೆ ಈ 5 ಸ್ಟಾರ್ ಆಟಗಾರರ ಐಪಿಎಲ್ ಫಾರ್ಮ್!

ಫೈನಲ್ ಹಂತದಲ್ಲಿ ಭಾರತಕ್ಕೆ ಮತ್ತಷ್ಟು ಬಲಿಷ್ಠ ಸವಾಲು ಎದುರಾಗಿದೆ. 14 ಬಾರಿಯ ಚಾಂಪಿಯನ್ ತಂಡ ಇಂಡೋನೇಷ್ಯಾ ಭಾರತಕ್ಕೆ ಸವಾಲೊಡ್ಡಲಿದೆ. ಥಾಮಸ್ ಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಇಂಡೋನೇಷ್ಯಾ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು 3-2 ಅಂತರದಿಂದ ಮಣಿಸಿ ಫೈನಲ್ ಹಂತಕ್ಕೇರಿದೆ.

ಫೈನಲ್ ಪಂದ್ಯದ ದಿನಾಂಕ ಹಾಗೂ ನೇರಪ್ರಸಾರದ ಮಾಹಿತಿ: ಥಾಮಸ್ ಕಪ್‌ನ ಫೈನಲ್ ಪಂದ್ಯ ಮೇ 15 ಭಾನುವಾರ ನಡೆಯಲಿದೆ. ಬೆಳಿಗ್ಗೆ 11:30ಕ್ಕೆ ಈ ಮಹತ್ವದ ಪಂದ್ಯ ಆರಂಭವಾಗಲಿದೆ. VOOT ಹಾಗೂ BWF ವೆಬ್‌ಸೈಟ್‌ನಲ್ಲಿ ಈ ಪಂದ್ಯದ ಲೈವ್‌ಸ್ಟ್ರೀಮಿಂಗ್ ಇರಲಿದ್ದು ಸ್ಪೋರ್ಟ್ಸ್ 18ನಲ್ಲಿ ನೇರಪ್ರಸಾರವಾಗಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, May 14, 2022, 18:12 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X