ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಥಾಮಸ್ ಕಪ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ: 43 ವರ್ಷಗಳ ಬಳಿಕ ಸೆಮಿ ಫೈನಲ್‌ಗೆ ಲಗ್ಗೆ!

Thomas Cup: India script history after beat Malaysia to reach the semifinals for the first time in 43 years

ಥಾಮಸ್ ಕಪ್ 2022ರಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಐದು ಬಾರಿಯ ಚಾಂಪಿಯನ್ ಮಲೇಷ್ಯಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್‌ ಸೆಣೆಸಾಟದಲ್ಲಿ 3-2 ಅಂತರದಿಂದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ 43 ವರ್ಷಗಳ ನಂತರ ಥಾಮಸ್ ಕಪ್‌ನ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಐತಿಹಾಸಿಕ ಸಾಧನೆ ಮಾಡಿದೆ.

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಈ ಟೈನಲ್ಲಿ ಭಾರತ ಮತ್ತು ಮಲೇಷ್ಯಾ ತಲಾ ಎರಡು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿತ್ತು. ನಂತರ ನಿರ್ಣಾಯಕ ಅಂತಿಮ ಸೆಣೆಸಾಟ ಸಿಂಗಲ್ಸ್ ಪಂದ್ಯದಲ್ಲಿ ನಡೆಯಿತು. ಭಾರತದ ಎಚ್‌ಎಸ್ ಪ್ರಣಯ್ ಎದುರಾಳಿ ಲಿಯಾಂಗ್ ಜುನ್ ಹಾವೊ ವಿರುದ್ಧ ಸೆಣೆಸಾಡಿದರು. ಇದರಲ್ಲಿ ಪ್ರಣಯ್ ನೇರ ಸೆಟ್‌ಗಳ ಗೆಲುವು ಸಾಧಿಸಿದ್ದುಸಿ ಸೆಮಿಫೈನಲ್ ಪ್ರವೇಶಕ್ಕೆ ಕಾರಣವಾದರು.

IPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿIPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿ

ಮಲೇಷ್ಯಾ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆರಂಭವನ್ನು ಉತ್ತಮವಾಗಿರಲಿಲ್ಲ. ತಂಡದ ಪ್ರಮುಖ ಆಟಗಾರ ಲಕ್ಷ್ಯ ಸೇನ್ ಮೊದಲ ಸಿಂಗಲ್ಸ್‌ನಲ್ಲಿ ಲೀ ಝಿ ಜಿಯಾ ವಿರುದ್ಧ ಸೋಲು ಅನುಭವಿಸಿದ್ದರು. 23-21, 21-9 ಅಂತರದಿಂದ ಮಲೇಷ್ಯಾದ ಆಟಗಾರ ಭಾರತೀಯನನ್ನು ಹಿಮ್ಮೆಟ್ಟಿಸಿದ್ದರು. ಇದು ಮಲೇಷಿಯಾದ ವಿರುದ್ಧ ಲಕ್ಷ್ಯ ಸೇನ್ ಅವರ ಮೊದಲ ಸೋಲಾಗಿದೆ.

ಲಕ್ಷ್ಯ ಅವರ ಸೋಲಿನ ನಂತರ ಭಾರತ ಅದ್ಭುತ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು. ಪುರುಷರ ಡಬಲ್ಸ್ ಜೋಡಿಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಗೆಲುವು ಸಾಧಿಸಿದರು. ನಂತರ ಶ್ರೀಕಾಂತ್ ಕೂಡ ತಮ್ಮ ಆಟವನ್ನು ನೇರ ಸೆಟ್‌ಗಳಲ್ಲಿ ಗೆದ್ದು ಭಾರತಕ್ಕೆ 2-1 ಮುನ್ನಡೆ ನೀಡಿದರು.

ನಂತರ ಭಾರತ ತಂಡಕ್ಕೆ ಮತ್ತೊಂದು ಹಿನ್ನಡೆಯಾಯಿತು. ಪುರುಷರ ಡಬಲ್ಸ್‌ನ ಎರಡನೇ ಪಂದ್ಯದಲ್ಲಿ ಭಾರತ ನೇರ ಸೆಟ್‌ಗಳಲ್ಲಿ ಸೋಲನ್ನು ಅನುಭವಿಸಿತು. ಭಾರತೀಯ ಆಟಗಾರರಾದ ಗರಾಗ ಮತ್ತು ಪಂಜಾಲ ಜೋಡಿ ಆರೋನ್ ಚಿಯಾ ಮತ್ತು ಟಿಯೊ ಈ ಯಿ ವಿರುದ್ಧ ನೇರ ಸೆಟ್‌ಗಳ ಸೋಲು ಅನುಭವಿಸಿದರು. ಹೀಗಾಗಿ ಪುರುಷರ ಸಿಂಗಲ್ ಸ್ಪರ್ಧೆ ನಿರ್ಣಾಯಕ ಪಂದ್ಯವಾಯಿತು. ಈ ಪಂದ್ಯದಲ್ಲಿ ಭಾರತದ ಹೆಚ್‌ಎಸ್ ಪ್ರಣಯ್ ಎದುರಾಳಿ ಲಿಯಾಂಗ್ ಜುನ್ ಹಾವೊ ವಿರುದ್ಧ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿ ಭರ್ಜರಿ ಗೆಲುವನ್ನು ನೀಡಿದರು. 21-13, 21-8 ಅಂತರದಲ್ಲಿ ಜಯ ಸಾಧಿಸಿದ ಹೆಚ್‌ಎಸ್ ಪ್ರಣಯ್ ಈ ಮೂಲಕ ಭಾರತ ಸೆಮಿಫೈನಲ್‌ಗೆ ಪ್ರವೇಶ ಪಡೆಯಲು ಪ್ರಮುಖ ಕಾರಣವಾದರು.

ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೇರಿ ಐತಿಹಾಸಿ ಸಾಧನೆ ಮಾಡುವುದರ ಜೊತೆಗೆ ಭಾರತ ತಂಡಕ್ಕೆ ಥಾಮಸ್ ಕಪ್‌ನಲ್ಲಿ ಪದಕ ಖಚಿತವಾಗಿದೆ. ಭಾರತ ಇನ್ನು ಸೆಮಿಫೈನಲ್ ಸೆಣೆಸಾಟದಲ್ಲಿ ವಿಶ್ವದ ನಂ.1 ವಿಕ್ಟರ್ ಅಕ್ಸೆಲ್ಸನ್ ನೇತೃತ್ವದ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ.

Story first published: Friday, May 13, 2022, 11:37 [IST]
Other articles published on May 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X