ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

Thomas cup india won

ಭಾರತದ ಬ್ಯಾಡ್ಮಿಂಟನ್ ಚರಿತ್ರೆಯ ಪುಟಕ್ಕೆ ಹೊಸ ಗರಿ ಸಿಕ್ಕಿದೆ. ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ಐತಿಹಾಸಿಕ ಸಾಧನೆ ಮಾಡಿದ್ದು, ಥಾಮಸ್ ಕಪ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕವನ್ನು ಗೆದ್ದು ಬೀಗಿದೆ. ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಅಂತರದಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಇದೇ ಮೊದಲ ಬಾರಿಗೆ ಥಾಮಸ್ ಕಪ್‌ ಫೈನಲ್ ತಲುಪಿದ್ದ ಸಾಧನೆ ಮಾಡಿತ್ತು. ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸುವ ಮೂಲಕ ಇತಿಹಾಸವನ್ನು ಬರೆದಿತ್ತು. ಆದ್ರೀಗ ಫೈನಲ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇಂಡೋನೇಷ್ಯಾ ವಿರುದ್ಧ ಫೈನಲ್‌ನಲ್ಲಿ ಜಯಬೇರಿ ಬಾರಿಸಿದೆ.

ಬ್ಯಾಂಕಾಕ್‌ನಲ್ಲಿ ನಡೆದ ಈ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಹೆವಿವೈಟ್ ಚಾಂಪಿಯನ್‌, 14 ಬಾರಿ ಕಪ್‌ ಗೆದ್ದಿರುವ ಇಂಡೋನೇಷ್ಯಾ ವಿರುದ್ಧ ಗೆಲ್ಲುವ ಮೂಲಕ ಭಾರತ ಈ ಸಾಧನೆ ಮಾಡಿದೆ. ಈ ಸ್ಪರ್ಧೆಯಲ್ಲಿ 1979, 1955 ಮತ್ತು 1952 ರಲ್ಲಿ ಕಂಚಿನ ಪದಕಗಳು ಭಾರತದ ಹಿಂದಿನ ಅತ್ಯುತ್ತಮ ಪ್ರದರ್ಶನವಾಗಿದೆ.

ಮಿಂಚಿದ ಕಿಡಂಬಿ ಶ್ರೀಕಾಂತ್, ಭಾರತಕ್ಕೆ ಚಿನ್ನ

ಮಿಂಚಿದ ಕಿಡಂಬಿ ಶ್ರೀಕಾಂತ್, ಭಾರತಕ್ಕೆ ಚಿನ್ನ

ಐದು ಅತ್ಯುತ್ತಮ ಸ್ಪರ್ಧೆಯಲ್ಲಿ ಲಕ್ಷ್ಯ ಸೇನ್ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸ್ಪರ್ಧೆಯಲ್ಲಿ 2-0 ಅಂತರದಲ್ಲಿ ಮುನ್ನಡೆದ ನಂತರ, ಕಿಡಂಬಿ ಶ್ರೀಕಾಂತ್ 21-18, 23-21 ರಲ್ಲಿ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟರು.

ಮೊದಲ ಗೇಮ್‌ನಲ್ಲಿ ಹಿನ್ನಡೆ ಆಗಿತ್ತು

ಮೊದಲ ಗೇಮ್‌ನಲ್ಲಿ ಹಿನ್ನಡೆ ಆಗಿತ್ತು

ಟೈ ಆದ ಮೊದಲ ಪಂದ್ಯದಲ್ಲಿ ವಿಶ್ವದ ಒಂಬತ್ತನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರು ವಿಶ್ವದ ನಾಲ್ಕನೇ ಶ್ರೇಯಾಂಕದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಸೆಣಸಿದರು. 65 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 8-21, 21-17, 21-16 ಗೆಲುವಿನೊಂದಿಗೆ 1-0 ಹೆಡ್-ಟು-ಹೆಡ್ ಲಾಭದೊಂದಿಗೆ ಪಂದ್ಯವನ್ನು ಪ್ರವೇಶಿಸಿದ ಭಾರತೀಯರು ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ವಿಸ್ತರಿಸಿದರು.

ಮೊದಲ ಲೀಡ್ ತಂದುಕೊಟ್ಟಿದ್ದು ಲಕ್ಷ್ಯ ಸೇನ್

ಲಕ್ಷ್ಯ ಸೇನ್ ಅವರು ವಿಶ್ವದ ಟಾಪ್ ಬ್ಯಾಡ್ಮಿಂಟನ್ ಪ್ಲೇಯರ್ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಅದ್ಭುತ ಆಟವಾಡಿದ್ರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ರು ಸಹ ಅದ್ಭುತವಾಗಿ ಕಂಬ್ಯಾಕ್ ಮಾಡಿ ಭಾರತದ ಮೊದಲ ಮುನ್ನಡೆ ತಂದುಕೊಟ್ಟರು. ಆರಂಭಿಕ ಗೇಮ್‌ನಿಂದ 8-21 ರಿಂದ ಹಿನ್ನಡೆ ಅನುಭವಿಸಿದ್ದ ಈ ಪ್ಲೇಯರ್ 21-17, 21-16 ನೇರ ಸೆಟ್‌ಗಳಿಂದ ಗೆಲ್ಲುವ ಮೂಲಕ ಅಬ್ಬರಿಸಿದ್ರು. ಅದ್ರಲ್ಲೂ ಕೊನೆಯ ಪಾಯಿಂಟ್‌ ಗೆದ್ದ ಬಳಿಕ ಲಕ್ಷ್ಯ ಸೇನ್‌ ಕೋರ್ಟ್‌ ಅಂತಾನ ಮಲಗಿ ನಿಟ್ಟುಸಿರು ಬಿಟ್ಟರು.

ಎರಡನೇ ಪಂದ್ಯದಲ್ಲಿ ಮಿಂಚಿದ ಡಬಲ್ಸ್ ಜೋಡಿ

ಎರಡನೇ ಪಂದ್ಯದಲ್ಲಿ ಮಿಂಚಿದ ಡಬಲ್ಸ್ ಜೋಡಿ

ಟೈ ಎರಡನೇ ಗೇಮ್‌ನಲ್ಲಿ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು ಆಡಿದರು. 2018 ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜೋಡಿಯು ಅವರ ಹಿಂದಿನ ಮುಖಾಮುಖಿಯಲ್ಲಿ 18-21, 21-18, 24-22 ರಲ್ಲಿ ಗೆದ್ದಿದ್ದರು.

ಥಾಮಸ್ ಕಪ್ ಗೆದ್ದ 6ನೇ ದೇಶ ಭಾರತ

ಥಾಮಸ್ ಕಪ್ ಗೆದ್ದ 6ನೇ ದೇಶ ಭಾರತ

ಇದುವರೆಗಿನ ಥಾಮಸ್ ಕಪ್ ಇತಿಹಾಸದಲ್ಲಿ ಈ ಟ್ರೋಫಿ ಗೆದ್ದಿದ್ದು ಐದು ದೇಶಗಳು ಮಾತ್ರ. ಆದ್ರೀಗ ಭಾರತವು ಈ ಸಾಧನೆಯನ್ನ ಮಾಡಿದ ಆರನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಯಾವ ರಾಷ್ಟ್ರಗಳು ಕಪ್ ಗೆದ್ದಿವೆ ಮತ್ತು ಎಷ್ಟು ಬಾರಿ ಎಂಬುದನ್ನ ಈ ಕೆಳಗೆ ಕಾಣಬಹುದು.

ಇಂಡೋನೇಷಿಯಾ (14): 1958 ರಿದ 2020
ಚೀನಾ (10): 1982 ರಿಂದ 2018
ಮಲೇಷಿಯಾ(5): 1949ರಿಂದ 1992
ಜಪಾನ್(1): 2014
ಡೆನ್ಮಾರ್ಕ್‌(1): 2016
ಭಾರತ (1): 2022

Story first published: Monday, May 16, 2022, 9:09 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X