ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಪಿವಿ ಸಿಂಧು ಐತಿಹಾಸಿಕ ಸಾಧನೆಗೆ ಶುಭಾಶಯಗಳ ಸುರಿಮಳೆ

Tokyo 2020: PV Sindhu clinch badminton bronze, stars congratulated the achievement

ಟೋಕಿಯೋ: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕವನ್ನು ಮುಡಿಗೇರಿಸಿದ್ದಾರೆ. ಈ ಮೂಲಕ ಭಾರತದ ಮಹಿಳಾ ಕ್ರೀಡಾಪಟುವೊಬ್ಬರು ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಥಮಬಾರಿಗೆ ಎರಡು ಪದಕ ಗೆದ್ದ ಸಾಧನೆ ಮಾಡಿದಂತಾಗಿದೆ.

ಕಂಚಿನ ಪದಕ್ಕಾಗಿ ನಡೆದ ಸೆಣೆಸಾಟದಲ್ಲಿ ಚೀನಾದ ಹಿ ಬಿಂಗ್ಜಿಯಾವೊ ವಿರುದ್ಧ ಸಿಂಧು 21-13 21-15 ಅಂತರದಿಂದ ಗೆಲುವು ಸಾಧಿಸಿದರು. ಈ ವಿಶೇಷ ಸಾಧನೆಗೆ ದೇಶಾದ್ಯಂತ ಶುಭಾಶಯಗಳ ಸುರುಮಳೆಯೇ ಹರಿದು ಬರುತ್ತಿದೆ. ಟ್ವಿಟ್ಟರ್‌ನಲ್ಲಿ ಸಾಕಷ್ಟು ತಾರೆಯರು ಪಿವಿ ಸಿಂಧುಗೆ ಶುಭಾಶಯ ತಿಳಿಸುತ್ತಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಬೆಳ್ಳಿಯ ಪದಕ ಗೆದ್ದು ಸಾಧನೆ ಮಾಡಿದ್ದ ಮೀರಾಬಾಯಿ ಚಾನು ಟ್ವಿಟ್ಟರ್‌ನಲ್ಲಿ ಪಿವಿ ಸಿಂಧುಗೆ ಶುಭಾಶಯ ತಿಳಿಸಿದ್ದಾರೆ. "ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದ ಪಿವಿ ಸಿಂಧು ಅವರಿಗೆ ಶುಭಾಶಯಗಳು" ಎಂದು ಮೀರಾಬಾಯಿ ಚಾನು ಟ್ವೀಟ್ ಮಾಡಿದ್ದಾರೆ.

ಇನ್ನು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. "2016ರಲ್ಲಿ ಬೆಳ್ಳಿ ಮತ್ತು 2020ರಲ್ಲಿ ಕಂಚಿನ ಪದಕ. ಭಾರತಕ್ಕಾಗಿ ಒಲಿಂಪಿಕ್ಸ್‌ನಲ್ಲಿ 2 ಪದಕವನ್ನು ಗೆಲ್ಲುವುದು ಎಂತಾ ವಿಶೇಷವಾದ ಸಾಧನೆ. ಪಿವಿ ಸಿಂಧು ನೀವು ಇಡೀ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಇನ್ನು ವೈಯಕ್ತಿಕ ವಿಭಾಗದಲ್ಲಿ ಭಾರತ ಪರವಾಗಿ ಚಿನ್ನ ಗೆದ್ದ ಭಾರತದ ಏಕೈಕ ಕ್ರೀಡಾಪಟು ಅಭಿನವ್ ಬಿಂದ್ರಾ "ನೀವು ನಮ್ಮೆಲ್ಲರನ್ನೂ ಅತ್ಯಂತ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಭಾರತದ ಮತ್ತೋರ್ವ ಒಲಿಂಪಿಕ್ಸ್ ಪದಕ ವಿಜೇ ರೆಸ್ಲರ್ ಆಗಿರುವ ಸಾಕ್ಷಿ ಮಲಿಕ್ ಕೂಡ ಟ್ವೀಟ್‌ನಲ್ಲಿ ಶುಭ ಹಾರೈಸಿದ್ದಾರೆ.

ಇನ್ನು ರಾಷ್ಟ್ರೀಯ ಬ್ಯಾಡ್ಮಿಂಟನ್‌ನ ಮುಖ್ಯ ಕೋಚ್ ಆಗಿರುವ ಪುಲೆಲ್ಲ ಗೋಪಿಚಂದ್ ಕೂಡ ಟ್ವಿಟ್ ಮಾಡಿ ಹಾರೈಸಿದ್ದಾರೆ. ಎರಡು ಬಾರಿ ಪದಕ ಗೆಲ್ಲಲು ಸಿಂಧು ಅವರ ಕಠಿಣ ಪರಿಶ್ರಮವೇ ಕಾರಣ ಎಂದು ಪ್ರಶಂಸಿದ್ದಾರೆ.

ಇನ್ನು 2000ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕರ್ಣಂ ಮಲ್ಲೇಶ್ವರಿ ಕೂಡ ಪಿವಿ ಸಿಂಧು ಅವರ ಈ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದ ಕಂಚಿನ ಪದಕ ಗೆದ್ದಿರುವ ಪಿ.ವಿ ಸಿಂಧು ಅವರಿಗೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದ್ದಾರೆ. "ಟೊಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಸತತವಾಗಿ ಎರಡನೇ ಬಾರಿ ಪದಕ ಗೆದ್ದು, ಜಾಗತಿಕಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚುವಂತೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ" ಎಂದು ರಾಜ್ಯಪಾಲರು ಪಿ.ವಿ.ಸಿಂಧು ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಪಿವಿ ಸಿಂಧು ಪದಕ ಗೆದ್ದಿರುವುದು ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸುತ್ತಿರುವ ಎರಡನೇ ಪದಕ. ಇದಕ್ಕೂ ಮುನ್ನ ಮಹಿಳಾ ವಿಭಾಗದ 49 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೆ ಭಾರತಕ್ಕೆ ಇನ್ನೊಂದು ಪದಕ ಖಾತ್ರಿಯಾಗಿದೆ. ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು.

Story first published: Sunday, August 1, 2021, 21:48 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X